More

    ಒಂದೇ ದಿನ 11 ಮೆಡಿಕಲ್ ಕಾಲೇಜು ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ!

    ಚೆನ್ನೈ: ದೇಶಾದ್ಯಂತ ಕರೊನಾ ಹಾವಳಿ ವಿಪರೀತವಾಗಿರುವ ಈ ಸಂದರ್ಭದಲ್ಲಿ ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ಸವಲತ್ತು, ವೈದ್ಯರು-ವೈದ್ಯಕೀಯ ಸಿಬ್ಬಂದಿಯ ತೀರಾ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಕ್ರಮಕೈಗೊಂಡಿದ್ದು, ಅದನ್ನು ಸಾಕಾರವಾಗಿಸಿದೆ.

    ಹೌದು.. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಂದೇ ದಿನ 11 ಮೆಡಿಕಲ್ ಕಾಲೇಜುಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಚೆನ್ನೈನ ಸೆಂಟ್ರಲ್​ ಇನ್​ಸ್ಟಿಟ್ಯೂಟ್​ ಆಫ್​ ಕ್ಲಾಸಿಕಲ್ ತಮಿಳ್ ಆವರಣ ಮತ್ತು ತಮಿಳುನಾಡಿನಾದ್ಯಂತ ಒಟ್ಟು 11 ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ನಿರ್ಮಾಣ ಮಾಡಲಾಗಿದ್ದು, ನಾಳೆ ಪ್ರಧಾನಿ ಮೋದಿ ಈ ಎಲ್ಲ ಕಾಲೇಜುಗಳನ್ನು ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ.

    ಒಟ್ಟು 4 ಸಾವಿರ ಕೋಟಿ ರೂ. ವೆಚ್ಚದಲ್ಲಿ ಈ ಕಾಲೇಜುಗಳನ್ನು ನಿರ್ಮಾಣ ಮಾಡಲಾಗಿದ್ದು, ಆ ಪೈಕಿ 2145 ಕೋಟಿ ರೂ. ಕೇಂದ್ರ ಸರ್ಕಾರದಿಂದ ನೀಡಲಾಗಿದ್ದು, ಉಳಿದ ಮೊತ್ತವನ್ನು ತಮಿಳುನಾಡು ಸರ್ಕಾರ ಭರಿಸಿದೆ.

    ಈ ಹನ್ನೊಂದು ಕಾಲೇಜುಗಳ ನಿರ್ಮಾಣದೊಂದಿಗೆ ದೇಶದಲ್ಲಿನ ಮೆಡಿಕಲ್ ಕಾಲೇಜುಗಳ ಸಂಖ್ಯೆ 596ಕ್ಕೆ ತಲುಪಿದೆ. ಕಳೆದ 7 ವರ್ಷಗಳಲ್ಲಿ ಎಂಬಿಬಿಎಸ್​ ಸೀಟ್​ ಶೇ. 79.6, ಸ್ನಾತಕೋತ್ತರ ಪದವಿ ಸೀಟ್​ ಶೇ. 80.7 ಮತ್ತು ಒಟ್ಟು ವೈದ್ಯಕೀಯ ಸೀಟ್​ಗಳ ಪ್ರಮಾಣ ಶೇ. 80ರಷ್ಟು ಹೆಚ್ಚಾಗಿದೆ ಎಂದು ಪ್ರಧಾನಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.

    ತರಕಾರಿ ಅಂಗಡಿಯಾಕೆಗೆ ನಾನ್​ವೆಜ್​ ಮೆಸೇಜ್​ ಕಳಿಸಿದ್ದಾತನ ಬಂಧನ..

    ಇಲ್ಲಿ ಪೊಲೀಸರೇ ಕಳ್ಳರು!: ಕಳ್ಳಸಾಗಣೆದಾರರಿಂದಲೇ ರಕ್ತಚಂದನ ದೋಚುತ್ತಿದ್ದ ಪೊಲೀಸರಿಬ್ಬರ ಬಂಧನ

    ಮತ್ತೊಂದು ಭೀಕರ ಅಪಘಾತ, ಜಲ್ಲಿ ತುಂಬಿದ್ದ ಟಿಪ್ಪರ್​ ಪಲ್ಟಿ: 2 ಕಾರು, 1 ಬೈಕ್ ಮೇಲೆ ಮಗುಚಿ ಬಿದ್ದು ಆರು ಮಂದಿ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts