More

    ಟ್ವಿಟರ್​ನಲ್ಲಿ ವಿಕಾಸ ಯಾತ್ರೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

    ನವದೆಹಲಿ: ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡು ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಒಂದು ವರ್ಷದ ವಿಕಾಸ ಯಾತ್ರೆಯ ಮಾಹಿತಿಯನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ತಮ್ಮ ನೇತೃತ್ವದ ಸರ್ಕಾರ 2ನೇ ಅವಧಿಯಲ್ಲಿ ಇದುವರೆಗೆ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಜಾರಿಗೊಳಿಸಿರುವ ಸಬಲೀಕರಣದ ಕಾರ್ಯಕ್ರಮಗಳು ಮತ್ತು ಒದಗಿಸಿದ ಸೇವೆಗಳ ಕುರಿತು ಅವರು ಮಾಹಿತಿ ನೀಡಿದ್ದಾರೆ.

    ತಮ್ಮ ಟ್ವಿಟರ್​ ಖಾತೆ ಮತ್ತು ವೆಬ್​ ಪೋರ್ಟಲ್​ ಬಿಡುಗಡೆ ಮಾಡಿರುವ ವಿಕಾಸ ಯಾತ್ರೆಯ ಮಾಹಿತಿಯು ಸುಗಮ ವಾಣಿಜ್ಯವಹಿವಾಟು, ಸುಗಮ ಜೀವನ, ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕರೊನಾ ವಿರುದ್ಧದ ಹೋರಾಟ ಸೇರಿ ಒಟ್ಟು 15 ಅಂಶಗಳ ವಿವರಗಳನ್ನು ಒದಗಿಸಿದ್ದಾರೆ.

    ವಿಕಾಸ ಯಾತ್ರೆಯತ್ತ ಒಂದು ನೋಟ ಹರಿಸಿ… ಅಭಿವೃದ್ಧಿ, ಸಬಲೀಕರಣ ಮತ್ತು ಸೇವೆ ಕುರಿತ ಮಾಹಿತಿಗಳ ಕುರಿತು ಒಂದು ಕಿರುನೋಟವನ್ನು ಒದಗಿಸುತ್ತದೆ ಎಂದು ಪ್ರಧಾನಿ ಮೋದಿ ತಮ್ಮ ಟ್ವೀಟ್​ನಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಸಾಧನೆಗಳ ಅಮೋಘವರ್ಷ: ನಮೋ ಪರ್ವ 2.0

    2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನತೆಯ ಅಭೂತಪೂರ್ವ ಬೆಂಬಲದೊಂದಿಗೆ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದರು. ಅತಿಹೆಚ್ಚು ಸ್ಥಾನಗಳ ಈ ಜನಾದೇಶ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ಅಪರೂಪದಲ್ಲಿ ಅಪರೂಪದ ವಿದ್ಯಮಾನ. ಈ ಹಿಂದೆ ಅಧಿಕಾರಕ್ಕೆ ಬರುವಾಗ ನೀಡಿದ್ದ ಭರವಸೆಯನ್ನು ಈಡೇರಿಸಿದ್ದು, ಹಾಗೂ ಕನಸಿನ ಭಾರತ ನಿರ್ಮಾಣದ ನಿಟ್ಟಿನಲ್ಲಿ ರೂಪಿಸಿ, ಮಂಡಿಸಿದ ದೂರದೃಷ್ಟಿಕೋನದ ಕಾರ್ಯಕ್ರಮಗಳು ತಮಗೆ ಇಷ್ಟೊಂದು ಜನಬೆಂಬಲ ತಂದುಕೊಟ್ಟಿದ್ದಾಗಿ ತಿಳಿಸುವ ಮೂಲಕ ಅವರ ವಿಕಾಸ ಯಾತ್ರೆಯ ಮಾಹಿತಿ ತೆರೆದುಕೊಳ್ಳುತ್ತವೆ.

    ಮೋದಿ 2.0 ಅವಧಿಯಲ್ಲಿ ಮೊದಲ ಅವಧಿಗಿಂತಲೂ ಹೆಚ್ಚಿನ ಆಶೋತ್ತರಗಳಿವೆ. ಅಭೂತಪೂರ್ವ ಜನಬೆಂಬಲದೊಂದಿಗೆ ಜನರ ಈ ಎಲ್ಲ ಆಶೋತ್ತರಗಳನ್ನು ಈಡೇರಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ಕಾರ್ಯೋನ್ಮುಖವಾಗಿವೆ. ದೊಡ್ಡ, ದೊಡ್ಡ ಸುಧಾರಣೆಗಳು, ದೊಡ್ಡ ದೊಡ್ಡ ನಿರ್ಧಾರಗಳು ಮತ್ತು ಒಳಹುಗಳೊಂದಿಗೆ ಕೆಲಸ ಮಾಡುತ್ತಿವೆ ಎಂದು ಅದರಲ್ಲಿ ವಿವರಿಸಲಾಗಿದೆ.

    ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ 370 ವಿಧಿಯನ್ನು ರದ್ದುಗೊಳಿಸಿ, ಅದನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯ ಹಾಗೂ ಲಡಾಖ್​ ಕೇಂದ್ರಾಡಳಿತ ಪ್ರದೇಶವಾಗಿ ಪ್ರತ್ಯೇಕಿಸಿದ್ದು, ಕಾರ್ಪೋರೇಟ್​ ತೆರಿಗೆಗಳನ್ನು ಇಳಿಸುವ ಐತಿಹಾಸಿಕ ನಿರ್ಣಯ, ರೈತರು ಮತ್ತು ವರ್ತಕರ ಸಬಲೀಕರಣ ಮತ್ತು ಅತ್ಯಂತ ಶಾಂತಿಯುತವಾಗಿ ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣದ ವಿವಾದವನ್ನು ಬಗೆಹರಿಸುವವರೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ತನ್ಮೂಲಕ ಮೋದಿ 2.0 ಭರ್ಜರಿ ಆರಂಭ ಪಡೆದುಕೊಂಡಿರುವುದಾಗಿ ಹೇಳಲಾಗಿದೆ.

    ದೇವಾಲಯಗಳಲ್ಲಿ ಶೀಘ್ರ ಭಕ್ತರಿಗೆ ಪ್ರವೇಶ; ಮುಂಜಾಗ್ರತಾ ಕ್ರಮಗಳ ಪಟ್ಟಿ ನೀಡಿದ ಧಾರ್ಮಿಕ ದತ್ತಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts