More

    ಬಿಜೆಪಿ ಸರ್ಕಾರ ಬಡವರ ಸೇವೆಯನ್ನು ಸರ್ವೋಚ್ಛ ಸೇವೆಯೆಂದು ಭಾವಿಸಿದೆ: ಪ್ರಧಾನಿ ಮೋದಿ

    ಬೆಂಗಳೂರು: ಇಂದು ಎಲ್ಲರ ಪ್ರಯತ್ನದಿಂದ ಭಾರತ ಕಡಿಮೆ ಸಮಯದಲ್ಲಿ ಅಭಿವೃದ್ಧಿಯಾಗಿದೆ ಮತ್ತು ಪ್ರತಿಯೊಬ್ಬರ ಸಹಕಾರದಿಂದಲೂ ಇದು ಸಾಧ್ಯವಾಗಿದೆ. ಇದಕ್ಕಾಗಿಯೇ ಬಿಜೆಪಿ ಸರ್ಕಾರ ಎಲ್ಲರೊಂದಿಗೆ ಮುನ್ನಡೆಯುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಶ್ರೀ ಮಧುಸೂಧನ್‌ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಲೋಕಾರ್ಪಣೆಗೊಳಿಸಿ ಪ್ರಧಾನಿ ಮೋದಿ ಮಾತನಾಡಿದರು.

    ಕರ್ನಾಟಕದ ಎಲ್ಲ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ಮೋದಿ, ಚಿಕ್ಕಬಳ್ಳಾಪುರ ಸರ್​. ಎಂ. ವಿಶ್ವೇಶ್ವರಯ್ಯ ಅವರ ಜನ್ಮ ಸ್ಥಳವಾಗಿದೆ. ಅವರ ಸಮಾಧಿ ದರ್ಶನ ಪಡೆಯುವ ಸೌಭಾಗ್ಯ ನನ್ನದಾಗಿದೆ ಎಂದರು.

    ಇಷ್ಟೊಂದು ಕಡಿಮೆ ಕಾಲಾವಧಿಯಲ್ಲಿ ಭಾರತ ಹೇಗೆ ವಿಕಾಸವಾಗುತ್ತಿದೆ? ಇದು ಸಾಕಷ್ಟು ಜನರಲ್ಲಿ ಮೂಡಿರುವ ಪ್ರಶ್ನೆಯಾಗಿದೆ. ಎಲ್ಲರ ಪ್ರಯತ್ನದಿಂದ ಭಾರತ ಕಡಿಮೆ ಸಮಯದಲ್ಲಿ ಅಭಿವೃದ್ಧಿಯಾಗಿದೆ ಮತ್ತು ಪ್ರತಿಯೊಬ್ಬರ ಸಹಕಾರದಿಂದಲೂ ಇದು ಸಾಧ್ಯವಾಗಿದೆ. ಇದಕ್ಕಾಗಿಯೇ ಬಿಜೆಪಿ ಸರ್ಕಾರ ಎಲ್ಲರೊಂದಿಗೆ ಮುನ್ನಡೆಯುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಇದನ್ನೂ ಓದಿ: ಲಕ್ಷುರಿ ವಾಹನ, ಒಯೊ ರೂಮ್​ನಲ್ಲೇ ವಾಸ! ಬಂಧನದಿಂದ ತಪ್ಪಿಸಿಕೊಳ್ಳಲು ಈಕೆ ಮಾಡಿದ ತಂತ್ರ ಒಂದೆರಡಲ್ಲ​​

    ಕರ್ನಾಟಕದಲ್ಲಿ ಮಠ, ಆಶ್ರಮ, ಸಂತರ ದೊಡ್ಡ ಪರಂಪರೆಯೇ ಇದೆ. ಯೋಗ ಮತ್ತು ಕರ್ಮ ಮಧುಸೂಧನ್‌ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಧ್ಯೇಯವಾಗಿದೆ. ತುಂಬಾ ಕಡಿಮೆ ಅವಧಿಯಲ್ಲಿ ಮೆಡಿಕಲ್​ ಕಾಲೇಜು ನಿರ್ಮಾಣ ಮಾಡಿದ್ದಾರೆ. ಮೆಡಿಕಲ್​ ಕಾಲೇಜು ಆರಂಭಿಸುವುದು ಈ ಸುಲಭವಾಗಿದೆ. 2014ಕ್ಕೂ ಮೊದಲು 380ಕ್ಕೂ ಕಡಿಮೆ ಮೆಡಿಕಲ್​ ಕಾಲೇಜುಗಳಿದ್ದವು. ಈಗ 650ಕ್ಕೂ ಹೆಚ್ಚು ಮೆಡಿಕಲ್​ ಕಾಲೇಜುಗಳು ದೇಶದಲ್ಲಿವೆ. 50ಕ್ಕೂ ಹೆಚ್ಚು ಕಾಲೇಜುಗಳು ಹಿಂದುಳಿದ ಜಿಲ್ಲೆಗಳಲ್ಲಿವೆ. ಕರ್ನಾಟಕದಲ್ಲಿ ಈಗ 70 ಮೆಡಿಕಲ್​ ಕಾಲೇಜುಗಳಿವೆ. ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಆರೋಗ್ಯ ಸೇವೆ ವೃದ್ಧಿಗೆ ಶ್ರಮ ವಹಿಸಲಾಗಿದೆ ಎಂದರು.

    ಬಜೆಟ್​ನಲ್ಲಿ 150 ನರ್ಸಿಂಗ್​ ಕಾಲೇಜುಗಳನ್ನು ಘೋಷಣೆ ಮಾಡಲಾಗಿದೆ. ಇದರಿಂದ ನರ್ಸಿಂಗ್​ ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನವಾಗಲಿದೆ. ಕನ್ನಡದಲ್ಲೂ ಮೆಡಿಕಲ್​ ಅಧ್ಯಯನದ ಬಗ್ಗೆ ಯಾರೂ ಯೋಚನೆ ಮಾಡಿರಲಿಲ್ಲ. ನಮ್ಮ ಸರ್ಕಾರ ಎಲ್ಲ ಭಾಷೆಗಳಲ್ಲೂ ಅಧ್ಯಯನಕ್ಕೆ ಅವಕಾಶ ನೀಡಿದೆ. ಬಿಜೆಪಿ ಸರ್ಕಾರ ಬಡವರ ಸೇವೆಯನ್ನು ಸರ್ವೋಚ್ಛ ಸೇವೆಯೆಂದು ಭಾವಿಸಿದೆ ಎಂದು ತಿಳಿಸಿದರು. ದೇಶದಲ್ಲಿ ಆಗುತ್ತಿರುವ ಕೆಲಸದ ಲಾಭ ಕರ್ನಾಟಕಕ್ಕೂ ಆಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಚಿಕ್ಕಬಳ್ಳಾಪುರದಲ್ಲಿ ಉಚಿತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

    ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ವಿರಾಮ; ಹೋರಾಟ ಸ್ಥಗಿತಗೊಳಿಸಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಪ್ರಿಯಕರನ ಜತೆ ಸೇರಿ ಹೆತ್ತ ಮಕ್ಕಳ ಬಾಳನ್ನು ಕೊನೆಗಾಣಿಸಿದ ಪಾಪಿ ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts