More

    ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ವಿರಾಮ; ಹೋರಾಟ ಸ್ಥಗಿತಗೊಳಿಸಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಬೆಂಗಳೂರು: ನಾವು ಎರಡು ವರ್ಷದಿಂದ ಹೋರಾಟ ಮಾಡುತ್ತಾ ಬರುತ್ತಿದ್ದೇವೆ. ಹಿಂದಿನ ಸಿಎಂ ಕೊಟ್ಟ ಮಾತನ್ನು ಈಡೇರಿಸಲಿಲ್ಲ. ಹೀಗಾಗಿ ನಮ್ಮ ಹೋರಾಟ ಮುಂದುವರಿಸಿದ್ದೆವು. ಸಿಎಂ ಮಾತು ತಪ್ಪಿದರು ಎಂಬ ಕಾರಣಕ್ಕೆ ನಾವು ಫ್ರೀಡಂ ಪಾರ್ಕ್​ನಲ್ಲಿ ಧರಣಿ ಮುಂದುವರಿಸಿದೆವು. 2 ಎ ಮೀಸಲಾತಿ ನೀಡಬೇಕೆಂಬುದು ನಮ್ಮ ಹೋರಾಟವಾಗಿತ್ತು. ಆದರೆ ನಿನ್ನೆ 2ಡಿ ಮೀಸಲಾತಿ ನೀಡಿದ್ದಾರೆ. 2ಎ, 2ಡಿಗೂ ಏನು ವ್ಯತ್ಯಾಸ ಇಲ್ಲ. ನೂರಕ್ಕೆ ನೂರರಷ್ಟು ನಾವು ಗುರಿ ಮುಟ್ಟುವ ಹೆಜ್ಜೆಯಲ್ಲಿ ಮೊದಲ ಗೆಲುವು ಸಿಕ್ಕಿದೆ. ನೀತಿ ಸಂಹಿತೆ ಬಂದಿದ್ದರೆ ಮತ್ತೆ ಹೋರಾಟ ಮಾಡಬೇಕಿತ್ತು. ನಾವು 15 ಶೇ. ಕೇಳಿದ್ದೆವು. ಅವರು 7 ಶೇ.ದಷ್ಟು ಮೀಸಲಾತಿ ಕೊಟ್ಟಿದ್ದಾರೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ನಮ್ಮ ಈ ಹೋರಾಟಕ್ಕೆ ಎಲ್ಲ ಪಕ್ಷದ ನಾಯಕರು ಬೆಂಬಲ ಕೊಟ್ಟಿದ್ದಾರೆ. ಸರ್ಕಾರದ ಆದೇಶ ಸಿಕ್ಕ ಬಳಿಕ ಸಿಎಂ ಹಾಗೂ ಪ್ರಧಾನಿ ಅವರನ್ನು ಭೇಟಿ ಮಾಡುತ್ತೇನೆ. ಸರ್ಕಾರದ ಆದೇಶ ಸಿಗುವವರೆಗೂ ಇಲ್ಲೆ ಇದ್ದು, ಆದೇಶ ಸಿಕ್ಕ ಬಳಿಕ ಬೆಂಗಳೂರು ಬಿಟ್ಟು ಹೋಗುತ್ತೇನೆ. ಸದ್ಯ ಈ ಹೋರಾಟವನ್ನು ವಿರಾಮಗೊಳಿಸಿ, ತಾತ್ಕಾಲಿಕವಾಗಿ ನಿಲ್ಲಿಸುತ್ತೇನೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ಕೂಡಲ ಸಂಗಮದಿಂದ ಪಾದಯಾತ್ರೆ ಆರಂಭ ಮಾಡಿದೆವು. ವಿಜಯಾನಂದ ಕಾಶಪ್ಪನವರು ತಮ್ಮ ರಾಜಕೀಯ ಅಸ್ತಿತ್ವ ಮರೆತು ನಮ್ಮೊಂದಿಗೆ ಹೆಜ್ಜೆ ಹಾಕಿದರು. ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಕೇಳಿದ್ದೆ. ಅವರು ಆಡಳಿತ ಪಕ್ಷದಲ್ಲಿದ್ದರೂ ನಮಗೆ ಬೆಂಬಲ ನೀಡಿದರು. ಚುನಾವಣೆ ನೀತಿ ಸಂಹಿತೆ ಬಂದರೆ ನಮ್ಮ ಹೋರಾಟ ವ್ಯರ್ಥ ಆಗುತ್ತದೆ ಎಂದು ಕೇಂದ್ರಕ್ಕೆ ಪತ್ರ ಬರೆದೆವು. ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿಗೆ ಹೋಗಿ ನಾಯಕರಿಗೆ ಮನವರಿಕೆ ಮಾಡಿಕೊಟ್ಟರು. ನಮ್ಮ ಸಮಾಜದ ಪ್ರತಿಯೊಬ್ಬರು ಬುತ್ತಿಕಟ್ಟಿಕೊಂಡು ಬಂದು ನನ್ನ ಜೊತೆ ಹೋರಾಟ ಮಾಡಿದರು ಎಂದು ಭಾವುಕರಾಗಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕಣ್ಣೀರು ಹಾಕಿದರು.

    ನಮ್ಮ ಹೋರಾಟಕ್ಕೆ ಸಿದ್ದಗಂಗಾ ಮಠ, ಉತ್ತರ ಕರ್ನಾಟಕದ ಕೆಲವು ಮಠ ಬಿಟ್ಟರೆ, ಬೇರೆ ಯಾರ ಯಾವ ಮಠಗಳೂ ಬೆಂಬಲ ನೀಡಲಿಲ್ಲ. ಎಲ್ಲರ ಅಭಿಪ್ರಾಯ ಕೇಳಿದಾಗ ನಮ್ಮ ಎರಡುವರೆ ವರ್ಷದ ಹೋರಾಟದಲ್ಲಿ ಮೊದಲ ಸಾಧನೆ ಮಾಡಿದ್ದೇವೆ. ಮುಂದೆ ಎಲ್ಲ ಲಿಂಗಾಯತ ಸಮುದಾಯವನ್ನು ಕೇಂದ್ರ ಓಬಿಸಿ ಮೀಸಲಾತಿ ಪಟ್ಟಿಗೆ ಸೇರಿಸುವಂತೆ ಹೋರಾಟ ಮಾಡುತ್ತೇವೆ. ನಮಗೆ ಪೂರ್ಣ ಊಟ ಸಿಗದೆ ಇರಬಹುದು. ಆದರೆ ವ್ಯಾಕ್ಸಿನ್ ರೀತಿ ಸಿಕ್ಕಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts