More

    ಜಾರಿ ಬೀಳುತ್ತಿದ್ದ ತಮಿಳುನಾಡು ಸಿಎಂ ಸ್ಟಾಲಿನ್​ರನ್ನು ಕೈಹಿಡಿದು ರಕ್ಷಿಸಿದ ಪ್ರಧಾನಿ ಮೋದಿ: ವಿಡಿಯೋ ವೈರಲ್​

    ಚೆನ್ನೈ: ಕಾಲು ಜಾರಿ ಬೀಳುತ್ತಿದ್ದ ತಮಿಳುನಾಡು ಸಿಎಂ ಸ್ಟಾಲಿನ್​ರನ್ನು ಪ್ರಧಾನಿ ಮೋದಿ ಅವರು ಕೈಹಿಡಿದು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಅನಿರೀಕ್ಷಿತ ಕ್ಷಣವು ರಾಜಕೀಯ ನಾಯಕರ ನಡುವಿನ ಒಡನಾಟವನ್ನು ಪ್ರದರ್ಶಿಸಿತು.

    ವಿಡಿಯೋದಲ್ಲಿ ಏನಿದೆ?
    ಪ್ರಧಾನಿ ಮೋದಿ ಮತ್ತು ಸಿಎಂ ಸ್ಟಾಲಿನ್ ನಡೆದುಕೊಂಡು ಬರುವಾಗ ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸಹ ಅವರ ಹಿಂದೆ ಬರುತ್ತಿರುತ್ತಾರೆ. ಈ ವೇಳೆ ಸ್ಟಾಲಿನ್ ಕಾಲಿ ಜಾರಿ ಬೀಳುವಷ್ಟರಲ್ಲಿ ಪ್ರಧಾನಿ ಮೋದಿ ತಕ್ಷಣ ಸ್ಟಾಲಿನ್​ ಕೈಹಿಡಿದು ರಕ್ಷಣೆ ಮಾಡುತ್ತಾರೆ. ನಂತರ ಇಬ್ಬರೂ ವೇದಿಕೆಗೆ ತೆರಳುತ್ತಾರೆ.

    ಅಂದಹಾಗೆ ಈ ಘಟನೆ ಚೆನ್ನೈನಲ್ಲಿ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್‌ ಉದ್ಘಾಟನೆ ನಡೆಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 2036 ರ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ವ್ಯಕ್ತಪಡಿಸಿದರು. ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ಒದಗಿಸುವ ಮತ್ತು ಭಾರತವನ್ನು ಜಾಗತಿಕ ಕ್ರೀಡಾ ಕೇಂದ್ರವನ್ನಾಗಿ ಮಾಡುವ ಉದ್ದೇಶಗಳನ್ನೂ ವಿವರಿಸಿದರು. ಕಳೆದ ದಶಕದಲ್ಲಿ ಬಿಜೆಪಿ ಸರ್ಕಾರವು ಭ್ರಷ್ಟಾಚಾರ ಮತ್ತು ಕ್ರೀಡೆಗಳಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಇದೇ ವೇಳೆ ಮಾತನಾಡಿದ ಸ್ಟಾಲಿನ್​, ತಮಿಳುನಾಡನ್ನು ರಾಷ್ಟ್ರದ ಕ್ರೀಡಾ ರಾಜಧಾನಿಯನ್ನಾಗಿ ಮಾಡಲು ಡಿಎಂಕೆ ಸರ್ಕಾರದ ಸಮರ್ಪಣೆಯನ್ನು ಒತ್ತಿ ಹೇಳಿದರು. ಇನ್ನು ಖೇಲೋ ಇಂಡಿಯಾ ಯೂತ್ ಗೇಮ್ಸ್ 2024 ಭಾರತದಲ್ಲಿ ಕ್ರೀಡೆಯ ಅಭಿವೃದ್ಧಿಗಾಗಿ ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಇಬ್ಬರೂ ನಾಯಕರಿಗೆ ವೇದಿಕೆಯಾಯಿತು.

    ತಮಿಳುನಾಡಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಶನಿವಾರ ತಿರುಚ್ಚಿಯ ಶ್ರೀರಂಗಂ ದೇವಸ್ಥಾನ ಮತ್ತು ರಾಮೇಶ್ವರಂನ ರಾಮನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಇದು ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ಉದ್ಘಾಟನೆಗೂ ಮುಂಚಿತವಾಗಿ ಅವರ ಇತ್ತೀಚಿನ ದೇವಾಲಯ ಭೇಟಿಯಾಗಿದೆ. (ಏಜೆನ್ಸೀಸ್​)

    ತಮಿಳುನಾಡು: ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಪ್ರಧಾನಿ ಮೋದಿ ಚಾಲನೆ

    ರಾಮಜನ್ಮಭೂಮಿಯಲ್ಲಿ ಸೀತಾಭಕ್ತರ ಹರ್ಷೋಲ್ಲಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts