More

    ‘ಇದು ಹೋಗುವ ವಯಸ್ಸಾಗಿರಲಿಲ್ಲ’ …ಅಪ್ಪು ಅಗಲಿಕೆಗೆ ಗಣ್ಯರ ಸಂತಾಪ

    ನವದೆಹಲಿ: ಕನ್ನಡದ ಪ್ರತಿಭಾವಂತ ನಟ ಪುನೀತ್​ ರಾಜ್​ಕುಮಾರ್​ ಅವರು ಹೃದಯಾಘಾತದಿಂದಾಗಿ ನಿಧನರಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯ ನಾಯಕರು ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಪುವಿನೊಂದಿಗೆ ತಮ್ಮ ಒಡನಾಟ ಮತ್ತು ನೆನಪುಗಳನ್ನು ಶೇರ್​ ಮಾಡಿಕೊಳ್ಳುವ ಮೂಲಕ ಚಿತ್ರರಂಗದ ಹಲವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

    “ವಿಧಿಯ ಕ್ರೂರ ಆಟ, ಪ್ರತಿಭಾವಂತ ಮತ್ತು ಉತ್ಸಾಹಶಾಲಿಯಾದ ನಟ ಪುನೀತ್​ ರಾಜ್​ಕುಮಾರ್​ರನ್ನು ನಮ್ಮಿಂದ ಕಿತ್ತುಕೊಂಡಿದೆ. ಇದು ಹೋಗುವ ವಯಸ್ಸಾಗಿರಲಿಲ್ಲ. ಮುಂಬರುವ ಪೀಳಿಗೆಗಳು ಅವರ ಕೃತಿಗಳು ಮತ್ತು ಅದ್ಭುತ ವ್ಯಕ್ತಿತ್ವಕ್ಕಾಗಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್​ ಮೂಲಕ ಸಂತಾಪ ಸೂಚಿಸಿದ್ದಾರೆ. ಜೊತೆಗೆ, ಪುನೀತ್​ ಮತ್ತು ಅವರ ಪತ್ನಿ ಅಶ್ವಿನಿ ಅವರೊಂದಿಗಿನ ಹಳೆಯ ಫೋಟೋ ಒಂದನ್ನು ಶೇರ್​ ಮಾಡಿದ್ದಾರೆ.

    ಇದನ್ನೂ ಓದಿ: ಪುನೀತ್​ ರಾಜ್​ಕುಮಾರ್​ ವಿಧಿವಶ: ಭಾನುವಾರದವರೆಗೂ ಬಾರ್​, ಪಬ್​ಗಳು ಬಂದ್​

    ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಅವರು “ಕನ್ನಡ ನಟ ಪುನೀತ್ ರಾಜ್‌ಕುಮಾರ್ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಗಾನ್​ ಟೂ ಸೂನ್​” ಎಂದು ಟ್ವೀಟ್​ ಮಾಡಿದ್ದಾರೆ. ಮಾಜಿ ಪ್ರಧಾನಿ  ಎಚ್​​.ಡಿ.ದೇವೇಗೌಡ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿ.ಎಸ್​.ಯಡಿಯೂರಪ್ಪ, ಎಚ್​.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್, ಆಂಧ್ರಪ್ರದೇಶದ ಮಾಜಿ ಸಿಎಂ ಜಿ.ಚಂದ್ರಬಾಬು ನಾಯ್ಡು ಮುಂತಾದವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

    “ಪುನೀತ್ ರಾಜ್‌ಕುಮಾರ್ ಅವರ ಅಗಲಿಕೆ ಆಘಾತ ತಂದಿದೆ. ನನಗೆ ಈಗಲೂ ಈ ಸುದ್ದಿಯನ್ನು ನಂಬಲು ಕಷ್ಟವಾಗುತ್ತಿದೆ. ನಾನು ಕಿರಿಯ ಸಹೋದರನನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ನನ್ನ ಪ್ರಾರ್ಥನೆಗಳು ಅವರ ಕುಟುಂಬದೊಂದಿಗೆ ಇವೆ. ಅವರ ಕುಟುಂಬದೊಂದಿಗೆ ನಾನು ನಿಕಟ ಬಂಧವನ್ನು ಹಂಚಿಕೊಳ್ಳುತ್ತೇನೆ. ಈ ನಷ್ಟವನ್ನು ನಿಭಾಯಿಸುವ ಶಕ್ತಿ ಅವರಿಗೆ ಲಭಿಸಲಿ ಎಂದು ಬಯಸುತ್ತೇನೆ” ಎಂದು ಮಲಯಾಳಂ ಚಿತ್ರರಂಗದ ಹಿರಿಯ ನಟ ಮೋಹನ್​ಲಾಲ್ ಟ್ವೀಟ್​ ಮಾಡಿದ್ದಾರೆ. ಮತ್ತೊಬ್ಬ ಮಲೆಯಾಳಂ ನಟ ಮಮ್ಮೂಟ್ಟಿ, ತೆಲುಗು ಸ್ಟಾರ್​ ಚಿರಂಜೀವಿ, ಹಿಂದಿ ಚಿತ್ರ ನಿರ್ಮಾಪಕ ಬೋನಿ ಕಪೂರ್​ ಸೇರಿದಂತೆ ದೇಶಾದ್ಯಂತದಿಂದ ಚಿತ್ರರಂಗದ ಗಣ್ಯರು ಪುನೀತ್​ರನ್ನು ಸ್ಮರಿಸಿ ಟ್ವೀಟ್​ ಮಾಡಿದ್ದಾರೆ.

    ಪುನೀತ್​ ಅಗಲಿಕೆಯ ನೋವು: ರಾಜ್ಯಾದ್ಯಂತ ಚಿತ್ರಪ್ರದರ್ಶನ ರದ್ದು

    ಇನ್ನು ಈ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಭಾರೀ ಅಗ್ಗ! ವರ್ಷಕ್ಕೆ ಒಂದೂವರೆ ಲಕ್ಷ ರೂ. ಮಾತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts