More

    ‘ಪ್ರಧಾನಿಗೆ ಪಾಕ್​, ಚೀನಾಕ್ಕೆ ಹೋಗೋಕೆ ಟೈಂ ಇದೆ, ಆದರೆ ನಮ್ಮ ರೈತರನ್ನು ಭೇಟಿ ಮಾಡಲು ಸಮಯವಿಲ್ಲ’

    ಲಖನೌ: ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಕಾಂಗ್ರೆಸ್​ ನಾಯಕಿ ಪ್ರಿಯಾಂಗಾ ಗಾಂಧಿ ಇಂದು ಮತ್ತೊಮ್ಮೆ ಹರಿಹಾಯ್ದಿದ್ದಾರೆ. ನಮ್ಮ ಪ್ರಧಾನಿಗೆ ಪಾಕಿಸ್ತಾನ, ಚೀನಾಕ್ಕೆ ಹೋಗುವುದಕ್ಕೆ ಸಮಯವಿರುತ್ತದೆ ಆದರೆ ತಮ್ಮದೇ ಕ್ಷೇತ್ರದ ಗಡಿಭಾಗದಲ್ಲಿ ಹೋರಾಟ ಮಾಡುತ್ತಿರುವ ರೈತರನ್ನು ಭೇಟಿ ಮಾಡಲು ಸಮಯವಿರುವುದಿಲ್ಲ ಎಂದು ಅವರು ದೂರಿದ್ದಾರೆ.

    ಕೃಷಿ ಕಾಯ್ದೆಗಳ ವಿರುದ್ಧ ಹಾಗೂ ಹೋರಾಟನಿರತ ರೈತರ ಬೆಂಬಲವಾಗಿ ಕಾಂಗ್ರೆಸ್​ 10 ದಿನಗಳ ಜೈ ಜವಾನ್​ ಜೈ ಕಿಸಾನ್​ ಆಂದೋಲನವನ್ನು ಆರಂಭಿಸಿದೆ. ಉತ್ತರ ಪ್ರದೇಶದ 27 ಜಿಲ್ಲೆಗಳಲ್ಲಿ ಈ ಆಂದೋಲನ ಆರಂಭಿಸಲಾಗಿದ್ದು, ಅದರ ಭಾಗವಾಗಿ ಇಂದು ಪ್ರಿಯಾಂಕಾ ಗಾಂಧಿ ಸಹರಾನ್ಪುರದಲ್ಲಿ ರೈತರೊಂದಿಗೆ ಹೋರಾಟದಲ್ಲಿ ಪಾಲ್ಗೊಂಡರು. ಆ ವೇಳೆ ಮಾತನಾಡಿದ ಅವರು ಕೇಂದ್ರ ಸರ್ಕಾರದ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ.

    ಪ್ರಧಾನಿಯವರು ಆತ್ಮನಿರ್ಭರ ಭಾರತ ಮಾಡಬೇಕೆನ್ನುತ್ತಾರೆ. ಆದರೆ ದೇಶದಲ್ಲಿ ನಿಜವಾಗಿ ಆತ್ಮನಿರ್ಭರ ಮಾಡುತ್ತಿರುವುದು ರೈತರು. ಅವರನ್ನೇ ಸರ್ಕಾರವು ಉಗ್ರರು ಎಂದು ಕರೆಯುತ್ತಿದೆ. ರೈತರನ್ನು ಚಳವಳಿಗಾರರು, ಉಗ್ರಗಾಮಿಗಳು ಮತ್ತು ಭಯೋತ್ಪಾದಕರು ಎಂದು ಕರೆಯಲಾಗುತ್ತಿದೆ. ರೈತರನ್ನು ಅನುಮಾನಿಸಲಾಗುತ್ತಿದೆ. ಸರ್ಕಾರ ಒಂದು ನೆನಪಿನಲ್ಲಿಟ್ಟುಕೊಳ್ಳಬೇಕು, ರೈತರ ಹೃದಯ ಎಂದೆಂದಿಗೂ ದೇಶ ವಿರುದ್ಧ ಇರಲು ಸಾಧ್ಯವಿಲ್ಲ. ಆತ ಹಗಲು ರಾತ್ರಿ ಭೂಮಿಗಾಗಿಯೇ ಕೆಲಸ ಮಾಡುತ್ತಾನೆ. ಹಾಗಿದ್ದಾಗ ಆತ ರಾಷ್ಟ್ರ ದ್ರೋಹ ಮಾಡಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

    ನಮ್ಮ ದೇಶದ ಪ್ರಧಾನ ಮಂತ್ರಿಗೆ ಪಾಕಿಸ್ತಾನಕ್ಕೆ ಹೋಗಲು ಸಮಯವಿದೆ, ಚೀನಾಕ್ಕೆ ಹೋಗಲೂ ಸಮಯವಿದೆ. ಆದರೆ ಅವರಿಗೆ ತಮ್ಮದೇ ಕ್ಷೇತ್ರದ ಗಡಿ ಪ್ರದೇಶಗಳಿಗೆ ಭೇಟಿ ನೀಡಿ, ರೈತರನ್ನು ಮಾತನಾಡಿಸಲು ಸಮಯವಿಲ್ಲ. ಸಂಸತ್ತಿನಲ್ಲಿ ರೈತರನ್ನು ಆಂದೋಲನ ಜೀವಿ ಎಂದು ಕರೆದು ಅವಮಾನಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ನಾಯಕಿ ಗುಡುಗಿದ್ದಾರೆ. (ಏಜೆನ್ಸೀಸ್​)

    ಸಾಲ ಮರಳಿಸದವಳ ಬಳಿ ಸೆಕ್ಸ್ ಕೇಳಿದ ವೃದ್ಧ! ಒಂದೇ ವರ್ಷದಲ್ಲಿ ಸೂಟ್​ಕೇಸ್​ನಲ್ಲಿ ಹೆಣವಾಗಿ ಸಿಕ್ಕ!

    ನಿರ್ಮಾಣ ಹಂತದ ಸೇತುವೆ ಕುಸಿತ; ಮೂವರು ಭಾರತೀಯ ಕಾರ್ಮಿಕರ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts