ನಿರ್ಮಾಣ ಹಂತದ ಸೇತುವೆ ಕುಸಿತ; ಮೂವರು ಭಾರತೀಯ ಕಾರ್ಮಿಕರ ದುರ್ಮರಣ

ಕಠ್ಮಂಡು: ಭೂತಾನ್​ನಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿದ್ದು, ಮೂರು ಭಾರತೀಯ ಕಾರ್ಮಿಕರು ಮೃತರಾಗಿದ್ದಾರೆ. ಇನ್ನೂ ಕೆಲ ಕಾರ್ಮಿಕರು ಕಾಣೆಯಾಗಿರುವುದಾಗಿ ಹೇಳಲಾಗಿದೆ. ರಾಜಧಾನಿ ತಿಮ್ಫುವಿನ ನೈಋತ್ಯ ಭಾಗದಲ್ಲಿ 60 ಕಿಮೀ ದೂರದಲ್ಲಿ ನಿರ್ಮಾಣವಾಗುತ್ತಿರುವ ವಾಂಗ್ಚು ಸೇತುವೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಸೇತುವೆಯು ಭಾಗಶಃ ನಿರ್ಮಾಣವಾಗಿತ್ತು. ಒಂಬತ್ತು ಕಾರ್ಮಿಕರು ಸೇತುವೆಯ ಮೇಲೆ ನಿಂತು ಕೆಲಸ ಮಾಡುತ್ತಿದ್ದರು. ಏಕಾಏಕಿ ಕುಸಿದು ಬಿದ್ದಿರುವುದಕ್ಕೆ ಕಾರಣವಿನ್ನು ತಿಳಿದುಬಂದಿಲ್ಲ. ಈಗಾಗಲೇ ಮೂರು ಶವಗಳು ಪತ್ತೆಯಾಗಿವೆ. ಆ ಮೂವರು ಭಾರತೀಯರೂ ಎನ್ನಲಾಗಿದೆ. ಮೃತರಾದ ಕಾರ್ಮಿಕರಿಗೆ ಪ್ರಧಾನಿ ಲೋಟೇ … Continue reading ನಿರ್ಮಾಣ ಹಂತದ ಸೇತುವೆ ಕುಸಿತ; ಮೂವರು ಭಾರತೀಯ ಕಾರ್ಮಿಕರ ದುರ್ಮರಣ