More

    LPG ಸಿಲಿಂಡರ್​ ದರದಲ್ಲಿ 100 ರೂ. ಕಡಿತ: ಮಹಿಳೆಯರ ದಿನಕ್ಕೆ ಪ್ರಧಾನಿ ಮೋದಿ ಉಡುಗೊರೆ

    ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನದಂದು ಪ್ರಧಾನಿ ಮೋದಿ ಅವರು ದೇಶದ ಗೃಹಿಣಿಯರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್​ ದರದಲ್ಲಿ 100 ರೂಪಾಯಿ ಕಡಿತಗೊಳಿಸುವುದಾಗಿ ಪ್ರಧಾನಿ ಮೋದಿ ಅವರು ಇಂದು (ಮಾರ್ಚ್​ 8) ಘೋಷಣೆ ಮಾಡಿದ್ದಾರೆ.

    ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಹಾಗಾಗಿ ನಮ್ಮ ಸರ್ಕಾರ ಎಲ್​ಪಿಜಿ ಸಿಲಿಂಡರ್​ ದರದಲ್ಲಿ 100 ರೂ. ಕಡಿತಗೊಳಿಸಲು ನಿರ್ಧರಿಸಿದೆ ಎಂದು ಪ್ರಧಾನಿ ಮೋದಿ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

    ನಮ್ಮ ಈ ನಿರ್ಧಾರವು ದೇಶಾದ್ಯಂತ ಲಕ್ಷಾಂತರ ಕುಟುಂಬಗಳ ಆರ್ಥಿಕ ಹೊರೆಯನ್ನು ಗಮನಾರ್ಹವಾಗಿ ತಗ್ಗಿಸಲಿದೆ. ಅದರಲ್ಲೂ ವಿಶೇಷವಾಗಿ ನಾರಿ ಶಕ್ತಿಗೆ ಲಾಭವಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

    ಅಡುಗೆ ಅನಿಲವನ್ನು ಹೆಚ್ಚು ಕೈಗೆಟುಕುವಂತೆ ಮಾಡುವ ಮೂಲಕ, ನಾವು ಕುಟುಂಬಗಳ ಯೋಗಕ್ಷೇಮವನ್ನು ಬೆಂಬಲಿಸಲು ಮತ್ತು ಆರೋಗ್ಯಕರ ವಾತಾವರಣವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದ್ದೇವೆ. ನಮ್ಮ ಈ ನಿರ್ಧಾರ ಮಹಿಳೆಯರ ಸಬಲೀಕರಣ ಮತ್ತು ತ್ರಾಸವಿಲ್ಲದ ಬದುಕು ನಡೆಸುವುದುನ್ನು ಖಾತ್ರಿಪಡಿಸುವುದು ನಮ್ಮ ಬದ್ಧತೆಯಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

    ಅಂದಹಾಗೆ ಮಾರ್ಚ್​ 1 ರಂದು ತೈಲ ಮಾರುಕಟ್ಟೆ ಕಂಪನಿಗಳು (OMCs) ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್​ ದರ ಏರಿಕೆಯನ್ನು ಘೋಷಿಸಿವೆ. ಬೆಲೆ ಏರಿಕೆಯಿಂದ 19 ಕೆಜಿಯ ಕಮರ್ಷಿಯಲ್​ ಗ್ಯಾಸ್​ ದೆಹಲಿಯಲ್ಲಿ 1,795 ರೂಗೆ ದೊರೆಯುತ್ತಿದೆ. ಕೊಲ್ಕತದಲ್ಲಿ 1,911 ಮತ್ತು ಮುಂಬೈನಲ್ಲಿ 1,749 ಮತ್ತು ಚೆನ್ನೈನಲ್ಲಿ 1,960 ರೂ.ಗೆ ಲಭ್ಯವಾಗುತ್ತಿದೆ.

    ಪ್ರತಿ ತಿಂಗಳು 1 ರಂದು ತೈಲ ಮಾರುಕಟ್ಟೆ ಕಂಪನಿಗಳು ದರ ಪರಿಷ್ಕರಣೆ ಮಾಡುತ್ತವೆ. ಕೆಲವೊಮ್ಮೆ ದರ ಬದಲಾವಣೆ ಮಾಡದೆ ಯಥಾಸ್ಥಿತಿಯನ್ನು ಸಹ ಕಾಯ್ದುಕೊಳ್ಳಲಾಗುತ್ತದೆ. (ಏಜೆನ್ಸೀಸ್​)

    ಮೀಸಲಾತಿ ನಾರಿಗೆ ಶಕ್ತಿ; ವಿಜಯವಾಣಿ ಸಂವಾದದಲ್ಲಿ ಸಾಧಕಿಯರ ಒಕ್ಕೊರಲ ಆಗ್ರಹ

    ನಮ್ಮ ಬಸವ ಸಿನಿಮಾದ ಗೌರಿ ಈಗ ಹೇಗಿದ್ದಾರೆ? ಏನು ಮಾಡ್ತಿದ್ದಾರೆ? ಇಲ್ಲಿದೆ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts