More

    ದೆಹಲಿ ಗಡಿ ರೈತಪ್ರತಿಭಟನೆ: ರಸ್ತೆತಡೆ ತೆರವುಗೊಳಿಸಲು ಸುಪ್ರೀಂ ಕೋರ್ಟ್​ಗೆ ಅಹವಾಲು

    ನವದೆಹಲಿ: ಒಂದು ವರ್ಷದಿಂದ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನಾ ಧರಣಿಗಳಿಂದ ಜನರ ಸಂಚಾರಕ್ಕೆ ಉಂಟಾಗಿರುವ ತೊಂದರೆ ಬಗ್ಗೆ ಏನು ಕ್ರಮ ತೆಗೆದುಕೊಳ್ಳುತ್ತೀರಾ ಎಂದು ಸುಪ್ರೀಂ ಕೋರ್ಟ್​ ಕೇಂದ್ರ ಸರ್ಕಾರವನ್ನು ಕೇಳಿದೆ. “ಹೆದ್ದಾರಿಗಳನ್ನು ಅನಿಯಮಿತವಾಗಿ ಹೇಗೆ ಬ್ಲಾಕ್​ ಮಾಡಲು ಸಾಧ್ಯ?” ಎಂದು ನ್ಯಾಯಮೂರ್ತಿ ಸಂಜಯ್​ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಎಂ.ಎಂ.ಸುಂದರೇಶ್ ಅವರನ್ನೊಳಗೊಂಡ ಪೀಠ ಪ್ರಶ್ನಿಸಿದೆ.

    ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತ ಸಂಘಟನೆಗಳು ದೆಹಲಿ ಮತ್ತು ಉತ್ತರಪ್ರದೇಶ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದರಿಂದಾಗಿ ರಸ್ತೆಯಲ್ಲಿ ಬ್ಲಾಕೇಡ್​ ಆಗಿದೆ. ನಾಯ್ಡಾದಿಂದ ದೆಹಲಿ ತಲುಪಲು ಮುಂಚೆ 20 ನಿಮಿಷಗಳು ಸಾಕಿತ್ತು. ಆದರೆ ಈಗ 2 ಗಂಟೆ ಕಾಲ ಹಿಡಿಯುತ್ತಿದೆ. ಇದರಿಂದಾಗಿ ಈ ಪ್ರದೇಶದ ಜನರಿಗೆ ತೊಂದರೆಯಾಗುತ್ತಿದೆ. ಯುಪಿಗೇಟ್​ನ ರಸ್ತೆ ತಡೆಯನ್ನು ತೆರವುಗೊಳಿಸಲು ಸರ್ಕಾರಕ್ಕೆ ಆದೇಶಿಸಬೇಕೆಂದು ನಾಯ್ಡ ನಿವಾಸಿ ಮೊನಿಕಾ ಅಗರ್​ವಾಲ್ ಎಂಬುವರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ನಾನು ಸಚಿವನಾಗಿದ್ದಾಗ ರೌಡಿಗಳು ಹೆದರುತ್ತಿದ್ದರು: ಮಾಜಿ ಸಚಿವ ಯು.ಟಿ. ಖಾದರ್..

    ಈ ಅರ್ಜಿಯ ವಿಚಾರಣೆ ವೇಳೆ, ಸರ್ಕಾರಕ್ಕೆ ಈ ಪ್ರತಿಭಟನಾ ಧರಣಿಗಳನ್ನು ಅಂತ್ಯಗೊಳಿಸಲು ಏನು ಕ್ರಮ ತೆಗೆದುಕೊಂಡಿದ್ದೀರಾ ಎಂದು ನ್ಯಾಯಪೀಠ ಕೇಳಿತು. ಹೆಚ್ಚುವರಿ ಸಾಲಿಸಿಟರ್​ ಜನರಲ್ ಕೆ.ಎಂ.ನಟರಾಜ್​ ಅವರು ಪ್ರತಿಭಟಿಸುತ್ತಿರುವ ರೈತರನ್ನು ಮಾತುಕತೆಗೆ ಆಹ್ವಾನಿಸಲಾಗಿದೆ. ಆ ಬಗ್ಗೆ ಅಫಿಡೆವಿಟ್​ನಲ್ಲಿ ವಿವರ ನೀಡಲಾಗಿದೆ ಎಂದರು.

    “ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ, ಪ್ರತಿಭಟನೆ ಮುಖಾಂತರ ಅಥವಾ ಸಂಸದೀಯ ಚರ್ಚೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಆದರೆ ಹೆದ್ದಾರಿಗಳನ್ನು ಹೇಗೆ ಬ್ಲಾಕ್​ ಮಾಡಲು ಸಾಧ್ಯ, ಇದು ಅನಿಯಮಿತವಾಗಿ ನಡೆಯಲು ಸಾಧ್ಯವಿಲ್ಲ. ಇದು ಎಲ್ಲಿ ಮುಗಿಯುತ್ತದೆ” ಎಂದು ನ್ಯಾಯಾಲಯ ಪ್ರಶ್ನಿಸಿತು. ಜೊತೆಗೇ, ರಸ್ತೆ ತೆರವಿಗೆ ಆಗ್ರಹಿಸಿರುವ ಈ ಅರ್ಜಿಯಲ್ಲಿ ಪ್ರತಿಭಟನಾನಿರತ ರೈತ ಸಂಘಟನೆಗಳನ್ನು ಪ್ರತಿವಾದಿಗಳನ್ನು ಮಾಡಲು ಅರ್ಜಿ ಸಲ್ಲಿಸಲು ಸರ್ಕಾರಕ್ಕೆ ಅನುಮತಿ ನೀಡಿತು. (ಏಜೆನ್ಸೀಸ್)

    ಅನಗತ್ಯ ಪ್ರಯಾಣ ಬೇಡ, ಆನ್​ಲೈನ್​ ಆಚರಿಸಿ: ಹಬ್ಬದ ಸಮಯಕ್ಕೆ ಜನರಿಗೆ ಸರ್ಕಾರದ ಸಲಹೆ

    ಫ್ರಾನ್ಸ್​ ಮಾಜಿ ರಾಷ್ಟ್ರಪತಿ ನಿಕೋಲಸ್​ ಸರ್ಕೋಜಿಗೆ 1 ವರ್ಷ ಜೈಲು ಶಿಕ್ಷೆ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts