More

    ಪ್ಲಾಸ್ಟಿಕ್ ಮುಕ್ತ ದಕ್ಷಿಣ ಕಾಶಿ ನಿರ್ಮಾಣದ ಪಣ ತೊಟ್ಟ ಹಿರಿಯೂರು ನಗರಸಭೆ

    ಹಿರಿಯೂರು: ದಕ್ಷಿಣಕಾಶಿ ಖ್ಯಾತಿಯ ಹಿರಿಯೂರನ್ನು ಸ್ವಚ್ಛ ಸುಂದರ ನಗರವನ್ನಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದು ಪೌರಾಯುಕ್ತ ಎಚ್.ಮಹಾಂತೇಶ್ ಹೇಳಿದರು.

    ನಗರದ ವಿವಿಧ ವಾರ್ಡ್‌ಗಳಲ್ಲಿ ಗುರುವಾರ ನಮ್ಮ ಚಿತ್ತ ಸ್ವಚ್ಛತೆ- ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

    ಪ್ಲಾಸ್ಟಿಕ್‌ಗೆ ಪರ‌್ಯಾಯವಾಗಿ ಪರಿಸರ ಸ್ನೇಹಿ ಸಾಮಗ್ರಿಗಳನ್ನು ಬಳಸಿ, ಪ್ಲಾಸ್ಟಿಕ್‌ಮುಕ್ತ ಪಟ್ಟಣವಾಗಿಸಲು ಎಲ್ಲರೂ ಕೈ ಜೋಡಿಸಬೇಕು. ಇದರ ಬಳಕೆ ಪರಿಸರ ಮತ್ತು ಸಕಲ ಜೀವರಾಶಿಗೆ ಮಾರಕ ಎಂದರು.

    ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು. ಸಾರ್ವಜನಿಕರು ಸಾಮಾಜಿಕ ಹೊಣೆಗಾರಿಕೆಯಲ್ಲಿ ತಮ್ಮ ಮನೆಗಳಲ್ಲಿನ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಶುಚಿ ಮತ್ತು ಶುಷ್ಕವಾಗಿ ಶೇಖರಿಸಿ, ಮರು ಬಳಕೆ ಘಟಕಗಳಿಗೆ ಕಳುಹಿಸಲು ಸ್ಥಳೀಯ ಆಡಳಿತದೊಂದಿಗೆ ಕೈ ಜೋಡಿಸಬೇಕು. ಅಮೃತ ಭೂಮಿಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಲು ಸಹಕರಿಸಬೇಕು ಎಂದು ಮನವಿ ಮಾಡಿದರು.

    ವಿವಿಧ ವಾರ್ಡ್‌ಗಳಲ್ಲಿ ಸ್ವಚ್ಛತೆ ಅಭಿಯಾನ ನಡೆಸಿ, ಸಸಿ ನೆಟ್ಟು, ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸಲಾಯಿತು.

    ನಗರಸಭೆ ಸದಸ್ಯ ಈರಲಿಂಗೇಗೌಡ, ಎಚ್.ಬಿ.ಚಂದ್ರಶೇಖರ್, ಆರೋಗ್ಯ ನಿರೀಕ್ಷಕ ಸುನೀಲಕುಮಾರ್, ಸಂಧ್ಯಾ, ಮೀನಾಕ್ಷಿ, ಅಶೋಕ್, ಮಹಾಲಿಂಗರಾಜ್ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts