More

    ಜೂ.1ರಿಂದ ವಿಮಾನಯಾನ ದುಬಾರಿ

    ನವದೆಹಲಿ: ಮುಂದಿನ ತಿಂಗಳಿಂದ ವಿಮಾನ ಪ್ರಯಾಣ ತುಸು ದುಬಾರಿಯಾಗಲಿದೆ. ದೇಶೀಯ ವಿಮಾನಯಾನ ಪ್ರಯಾಣ ದರವನ್ನು ಶೇ.13ರಿಂದ 16ರವರೆಗೆ ಏರಿಕೆ ಮಾಡಿ ನಾಗರಿಕ ವಿಮಾನಯಾನ ಪ್ರಾಧಿಕಾರ ಶನಿವಾರ ಆದೇಶ ಹೊರಡಿಸಿದೆ.

    ಜೂನ್ 1ರಿಂದ ಈ ಆದೇಶ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 40 ನಿಮಿಷದ ಪ್ರಯಾಣ ದರ 2300 ರೂ.ನಿಂದ 2600 ರೂ.ಗೆ ಏರಿಕೆ ಮಾಡಲಾಗಿದೆ. 40ರಿಂದ 60 ನಿಮಿಷ ದೂರದ ಪ್ರಯಾಣದ ದರವನ್ನು 2900 ರೂ.ನಿಂದ 3300 ರೂ.ಗೆ ಏರಿಕೆ ಮಾಡಲಾಗಿದೆ.

    60ರಿಂದ 210 ನಿಮಿಷ ಪ್ರಯಾಣ ಅವಧಿಯ ಟಿಕೆಟ್ ದರಗಳನ್ನು 3500ರಿಂದ 7600 ರೂ. ವರೆಗೆ ನಿಗದಿ ಮಾಡಲಾಗಿದೆ. ವಿಮಾನಗಳಲ್ಲಿ ಒಟ್ಟು ಸಾಮರ್ಥ್ಯದ ಶೇ. 50 ಪ್ರಯಾಣಿಕರು ಮಾತ್ರ ಪ್ರಯಾಣ ಮಾಡಬಹುದಾಗಿದೆ. ಮೊದಲ ಅಲೆ ಬಳಿಕ ಕರೊನಾ ತುಸು ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಶೇ. 80 ಪ್ರಯಾಣಿಕರು ಪ್ರಯಾಣ ಮಾಡಲು ಅನುಮತಿ ನೀಡಲಾಗಿತ್ತು. ಆದರೆ ಎರಡನೇ ಅಲೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಇದನ್ನು ಶೇ. 50 ಇಳಿಕೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts