More

    ಚಿನ್ನ​ ಕಳ್ಳಸಾಗಣೆಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್​ ಪಾತ್ರ! ಇವರ ಕಳ್ಳತನಕ್ಕೆ ಮಧ್ಯಸ್ಥಿಕೆ ವಹಿಸಿದ್ದು ಸ್ವಪ್ನಾ!

    ತಿರುವನಂತಪುರಂ: ಕೇರಳದಲ್ಲಿ ನಡೆದ ಚಿನ್ನ​ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಪಾತ್ರವಿರುವುದು ಸತ್ಯ ಎಂದು ಕಸ್ಟಮ್ಸ್​ ಅಧಿಕಾರಿಗಳು ಹೇಳಿದ್ದಾರೆ. ಕೇರಳ ಹೈ ಕೋರ್ಟ್​ಗೆ ಸಲ್ಲಿಸಲಾದ ಅಫಿಡವಿಟ್​ನಲ್ಲಿ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಹೇಗೆ ಭಾಗವಹಿಸಿದ್ದರು ಎನ್ನುವುದನ್ನು ವಿವರಿಸಲಾಗಿದೆ.

    ಕೆಲ ತಿಂಗಳ ಹಿಂದೆ ಕೇರಳದ ಕೊಚ್ಚಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅರಬ್ ಸಂಯುಕ್ತ ಸಂಸ್ಥಾನದಿಂದ ರಾಜತಾಂತ್ರಿಕ ಮಾರ್ಗದಲ್ಲಿ ಚಿನ್ನ ಕಳ್ಳಸಾಗಣೆ ಮಾಡಲಾಗಿತ್ತು. ಆ ಪ್ರಕರಣದ ತನಿಖೆ ಆರಂಭಿಸಿದ ಕಸ್ಟಮ್ಸ್​ ಅಧಿಕಾರಿಗಳು ಮುಖ್ಯ ಆರೋಪಿಯಾಗಿ ಸ್ವಪ್ನಾ ಸುರೇಶ್​ನನ್ನು ಬಂಧಿಸಿದ್ದರು. ಇದೀಗ ಆಕೆಯ ಹೇಳಿಕೆಯ ಆಧಾರದ ಮೇಲೆ ಅಫಿಡವಿಟ್​ ಸಲ್ಲಿಸಲಾಗಿದೆ.

    ಯುಎಇಯ ಮಾಜಿ ಕಾನ್ಸುಲ್​ ಜನರಲ್​ ವಿಜಯನ್​ ಅವರೊಂದಿಗೆ ಸಿಎಂ ಪಿಣರಾಯಿ ವಿಜಯನ್​ಗೆ ನಿಕಟ ಸಂಪರ್ಕವಿದೆ. ವಿಜಯನ್, ಸ್ಪೀಕರ್​ ಪಿ.ಶ್ರೀರಾಮಕೃಷ್ಣನ್​ ಮತ್ತು ಮೂರು ಸಚಿವರು ಸೇರಿಕೊಂಡು ಕಳ್ಳಸಾಗಣೆ ಕೆಲಸಕ್ಕೆ ಕೈ ಹಾಕಿದ್ದಾರೆ. ಇವರಿಗೆ ಅರೇಬಿಕ್​ ಭಾಷೆ ಬಾರದ ಕಾರಣ ಭಾಷೆ ಗೊತ್ತಿದ್ದ ಸ್ವಪ್ನಾಳನ್ನು ಮಧ್ಯಸ್ಥಿಕೆ ವಹಿಸುವಂತೆ ಮಾಡಿದ್ದಾರೆ ಎಂದು ಸ್ವತಃ ಆರೋಪಿ ಸ್ವಪ್ನಾ ಹೇಳಿದ್ದಾಳೆ ಎನ್ನಲಾಗಿದೆ. ಇವರೆಲ್ಲರ ಜತೆ ಅಕ್ರಮ ಸಾಗಾಣಿಕೆ ಕೆಲಸ ನಡೆದಿರುವುದು ಸತ್ಯ ಎಂದು ಆಕೆ ಹೇಳಿರುವುದಾಗಿ ತಿಳಿಸಲಾಗಿದೆ. ಸ್ವಪ್ನಾ ನೀಡಿದ ಮಾಹಿತಿ ನಿಜಕ್ಕೂ ಆಘಾತಕಾರಿಯಾಗಿರುವುದಾಗಿ ಕಸ್ಟಮ್ಸ್​ ಇಲಾಖೆ ತಿಳಿಸಿದೆ. (ಏಜೆನ್ಸೀಸ್)

    20ಕ್ಕೂ ಹೆಚ್ಚು ಸಚಿವರು, ಶಾಸಕರನ್ನು ಕೈ ಬಿಟ್ಟ ಟಿಎಂಸಿ! ಸ್ವಕ್ಷೇತ್ರದ ಬದಲು ನಂದಿಗ್ರಾಮದಲ್ಲಿ ದೀದಿ ಅಗ್ನಿಪರೀಕ್ಷೆ!

    ‘ಅಯ್ಯೋ, ಈ ಹುಡುಗ ವಾಟ್ಸ್​ಆ್ಯಪ್​ನಲ್ಲಿ ನೋಡಿದಂಗಿಲ್ಲ’ ಸಿಟ್ಟಾಗಿ ಮದುವೆ ಮಂಟಪದಿಂದ ಎದ್ದು ಹೋದ ವಧು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts