More

    ಗಂಡು ಮಗುವಿಗಾಗಿ ಮೊದಲ ರಾತ್ರಿ ವಿಚಿತ್ರ ಸಲಹೆ ಕೊಟ್ಟ ಅತ್ತೆ! ಮಹಿಳೆಯ ಕತೆ ಕೇಳಿ ನ್ಯಾಯಾಲಯವೇ ಶಾಕ್​

    ಕೊಚ್ಚಿ: ಒಳ್ಳೆಯ ಗಂಡು ಮಗುವನ್ನು ಪಡೆಯಲು ಮದುವೆಯ ಮೊದಲ ರಾತ್ರಿಯಂದೇ ವಿಚಿತ್ರ ಸಲಹೆ ನೀಡಿದ ಅತ್ತೆಯ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕೋರಿ ಮಹಿಳೆಯೊಬ್ಬಳು ಕೇರಳ ಹೈಕೋರ್ಟ್​ ಮೆಟ್ಟಿಲೇರಿದ್ದಾಳೆ. ಗಂಡ ಮತ್ತು ಮಾನವ ವಿರುದ್ಧವೂ ದೂರು ನೀಡಿದ್ದಾರೆ.

    ಪ್ರಸವಪೂರ್ವ ರೋಗನಿರ್ಣಯ ವಿಭಾಗದ ನಿರ್ದೇಶಕರು ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕರು ನನ್ನ ಪತಿ, ಅತ್ತೆ ಮತ್ತು ಮಾವನ ವಿರುದ್ಧದ ದೂರಿನ ಬಗ್ಗೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೊಲ್ಲಂ ನಿವಾಸಿಯಾಗಿರುವ 39 ವರ್ಷ ವಯಸ್ಸಿನ ಸಂತ್ರಸ್ತೆ ಹೈಕೋರ್ಟ್​ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

    2012ರಲ್ಲಿ ನನ್ನ ಮದುವೆಯಾಯಿತು. ಗಂಡು ಮಗುವಾಗಲು ಲೈಂಗಿಕ ಸಂಭೋಗದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ಮದುವೆಯಾದ ಮೊದಲ ರಾತ್ರಿಯಂದೇ ಅತ್ತೆ ಮತ್ತು ಮಾವ ತಿಳಿಸಿದರು. ಲೈಂಗಿಕತೆಯ ಸೂಕ್ತ ವಿಧಾನ ಮತ್ತು ಸಮಯವನ್ನು ವಿವರಿಸಿದರು. ಅಲ್ಲದೆ, ಹೆಣ್ಣು ಮಗು ಜನಿಸಿದರೆ ನೀನೆ ಹೊಣೆ ಎಂದು ಹೇಳಿದರು. ಆ ಸಮಯದಲ್ಲಿ ನಾನು ನವವಿವಾಹಿತೆ ಆಗಿದ್ದರಿಂದ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ ಎಂದು ಸಂತ್ರಸ್ತೆ ಅರ್ಜಿಯಲ್ಲಿ ತಿಳಿಸಿದ್ದಾಳೆ.

    ಅರ್ಜಿದಾರರಳು ಆಗ ತನ್ನ ಪತಿಯೊಂದಿಗೆ ಲಂಡನ್‌ನಲ್ಲಿದ್ದರು. ಅವಳು ಗರ್ಭಿಣಿಯಾದಾಗ ಮನೆಗೆ ಮರಳಿದಳು. 2014ರಲ್ಲಿ ಆಕೆಗೆ ಹೆಣ್ಣು ಮಗು ಜನಿಸಿತು. ಬಳಿಕ ಆಕೆಯ ಪತಿ ಹಾಗೂ ಕುಟುಂಬದವರಿಂದ ಆಕೆಯ ಮೇಲೆ ದೌರ್ಜನ್ಯ ಹೆಚ್ಚಾಯಿತು. ಇದರ ವಿರುದ್ಧ ಕೌಟುಂಬಿಕ ನ್ಯಾಯಾಲಯದಲ್ಲಿಯೂ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ಪ್ರಕರಣ ಮಾತ್ರ ಇನ್ನೂ ಬಾಕಿ ಇವೆ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.

    ಅಂದಹಾಗೆ ಶಿಶುಗಳ ಲಿಂಗವನ್ನು ಹುಟ್ಟುವ ಮೊದಲೇ ನಿರ್ಣಯಿಸುವುದು ಭಾರತದಲ್ಲಿ ಅಪರಾಧವಾಗಿದೆ. ಅತ್ತೆ ಮತ್ತು ಅವರ ಮನೆಯವರ ವಿರುದ್ಧ 1994ರ ಪ್ರಸವಪೂರ್ವ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಗಳ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

    ನ್ಯಾಯಾಲಯವೇ ಶಾಕ್​
    ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಈ ಪ್ರಕರಣದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿಯೂ ಇಂತಹ ಅಭಿಪ್ರಾಯಗಳು ಇರುವುದು ನಿಜಕ್ಕೂ ಆಘಾತಕಾರಿ ಎಂದು ಉಲ್ಲೇಖಿಸಿದ್ದಾರೆ. ಆರೋಪಿಗಳ ವಿವರಣೆ ಕೇಳಿ ಪ್ರಕರಣವನ್ನು ಫೆಬ್ರವರಿ 29ಕ್ಕೆ ಮುಂದೂಡಿದ್ದಾರೆ. (ಏಜೆನ್ಸೀಸ್​)

    ಇದಕ್ಕೂ ಹಣ ಕೊಡಬೇಕಾ? ಬಾಲಿವುಡ್​ನ ಈ ಕೆಟ್ಟ ಸಂಸ್ಕೃತಿ ದಕ್ಷಿಣಕ್ಕೂ ಬಂದಿದೆ ಎಂದ ಪ್ರಿಯಾಮಣಿ!

    ದರ್ಶನ್​ಗೆ​ ಮತ್ತೊಂದು ಸಂಕಷ್ಟ! ನಡವಳಿಕೆ ಸರಿಪಡಿಸಿಕೊಳ್ಳಿ… ದಚ್ಚುಗೆ ನಾರಿಯರ ಖಡಕ್​ ವಾರ್ನಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts