More

    ದೈಹಿಕ ಅಂತರ, ಮಾಸ್ಕ್ ಬಳಕೆಯಿಂದ ಕರೊನಾ ನಿಯಂತ್ರಣವಾಗುತ್ತಾ? ಅಧ್ಯಯನ ವರದಿ ಏನು ಹೇಳುತ್ತೆ?

    ಲಂಡನ್: ಕನಿಷ್ಠ ಒಂದು ಮೀಟರ್ ದೈಹಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವುದು ಹಾಗೂ ಕಣ್ಣಿನ ರಕ್ಷಣೆಯು ಕರೊನಾ ಅಪಾಯವನ್ನು ಕಡಿಮೆ ಮಾಡಲು ಇರುವ ಉತ್ತಮ ಮಾರ್ಗಗಳು ಎಂದು ಬಹುತೇಕ ಎಲ್ಲರೂ ನಂಬಿದ್ದಾರೆ. ಸರ್ಕಾರಗಳು ಕೂಡ ಅದನ್ನೇ ಪ್ರತಿಪಾದಿಸುತ್ತಿವೆ. ಆದರೆ ಇದು ಸರಿಯೇ?

    ಈ ಕುರಿತು ಈವರೆಗೆ ಹಲವು ಸಂಸ್ಥೆಗಳು ಅಧ್ಯಯನ ಮಾಡಿ ತಮ್ಮದೇ ಆದ ವರದಿಯನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಿವೆ. ಈಗ ಇದೇ ದಿಸೆಯಲ್ಲಿ ಸಂಸ್ಥೆಯೊಂದು ಈ ಎಲ್ಲ ವರದಿಗಳನ್ನು ಅತ್ಯಂತ ದೊಡ್ಡ ಪ್ರಮಾಣದಲ್ಲಿ ವಿಶ್ಲೇಷಿಸಿ ಸಮಗ್ರ ವರದಿ ಬಿಡುಗಡೆ ಮಾಡಿದೆ.

    16 ದೇಶಗಳಲ್ಲಿ ನಡೆಸಲಾದ 172 ಅಧ್ಯಯನಗಳಿಂದ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ ಪದೆ ಪದೇ ಕೈತೊಳೆಯುವುದು ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳುವುದು ಕೂಡ ಸೋಂಕು ತಡೆಗಟ್ಟಲು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಈ ಎಲ್ಲ ಕ್ರಮಗಳನ್ನು ಒಟ್ಟಾಗಿ ಅನುಸರಿಸಿದರೂ ಸಾಂಕ್ರಾಮಿಕತೆಯಿಂದ ಪೂರ್ಣ ರಕ್ಷಣೆ ಸಿಗುತ್ತದೆ ಎಂಬ ಖಾತರಿ ಇಲ್ಲ. ಆದರೆ, ಗಣನೀಯ ಪ್ರಮಾಣದಲ್ಲಿ ಸೋಂಕನ್ನು ನಿಯಂತ್ರಿಸಲು ಸಾಧ್ಯ ಎಂದಿದ್ದಾರೆ.

    ಇದನ್ನೂ ಓದಿ  ಆಧಾರ್ ಕಾರ್ಡ್‌ಗಾಗಿ ನಿತ್ಯವೂ ತಪ್ಪದ ಪರದಾಟ

    ಕರೊನಾ ವೈರಸ್‌ನಿಂದ ಹರಡುವ ಕೋವಿಡ್-19, ಸಾರ್ಸ್ ಮತ್ತು ಮೆರ್ಸ್ ರೋಗಗಳ ಹರಡುವಿಕೆ ತಡೆಯುವಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಬಳಕೆ ಮತ್ತು ಕಣ್ಣಿನ ರಕ್ಷಣೆಯ ಕ್ರಮಗಳ ಪಾತ್ರದ ಕುರಿತು ಮಾಡಲಾದ 172 ಅಧ್ಯಯನಗಳ ವ್ಯವಸ್ಥಿತ ವಿಶ್ಲೇಷಣೆಯನ್ನು ಅಂತಾರಾಷ್ಟ್ರೀಯ ಸಂಶೋಧಕರ ತಂಡ ಮಾಡಿದೆ. ಇದು ‘ಲ್ಯಾನ್ಸೆಟ್’ ಪತ್ರಿಕೆಯಲ್ಲಿ ಪ್ರಕಟವಾಗಿದೆ.

    ‘ಸೋಂಕಿನ ಪ್ರಮಾಣವನ್ನು ಕಡಿಮೆಗೊಳಿಸಲು ಅಗತ್ಯವಾದ ಸಾಮಾನ್ಯ ಹಾಗೂ ಸರಳ ಉಪಾಯಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಒಂದು ಮೀಟರ್ ಬದಲು ಎರಡು ಮೀಟರ್ ದೈಹಿಕ ಅಂತರ ಕಾಯ್ದುಕೊಂಡರೆ ಇನ್ನೂ ಉತ್ತಮ ಎಂದು ಈ ಅಧ್ಯಯನದ ಸಹನೇತೃತ್ವ ವಹಿಸಿದ್ದ ಕೆನಡಾದ ಮ್ಯಾಕ್‌ಮಾಸ್ಟರ್ ವಿವಿ ಸಂಶೋಧಕ ಹಾಲ್ಗರ್ ಷೂನ್‌ಮನ್ ಹೇಳಿದ್ದಾರೆ.

    ಇನ್ಮುಂದೆ ಇಡೀ ಪ್ರದೇಶ ಸೀಲ್ ಡೌನ್ ಇಲ್ಲ, ಸೋಂಕಿತ/ ಶಂಕಿತರ ಮನೆ ಮಾತ್ರ ಸೀಲ್ ಡೌನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts