More

    ನೀವು ಮೊಬೈಲ್​​​​ಗೆ ದಾಸರಾಗಿದ್ದೀರಾ? ಈ ಟಿಪ್ಸ್​ ಪಾಲಿಸಿದ್ರೆ ಫೋನ್​ ಚಟದಿಂದ ಸುಲಭವಾಗಿ ಹೊರಬರಬಹುದು!

    ನೀವು ಯಾವಾಗಲೂ ಮೊಬೈಲ್​​ ಫೋನ್​ನಲ್ಲಿ ಮುಳುಗಿರ್ತೀರಾ? ಬಿಟ್ಟಿರಲು ಆಗದೇ ಮೊಬೈಲ್​ಗೆ ದಾಸರಾಗಿದ್ದೀರಾ? ಏನೇ ಪ್ರಯತ್ನ ಮಾಡಿದರೂ ಮೊಬೈಲ್​ ಬಿಡಲಾಗುತ್ತಿಲ್ಲವೇ? ಆದರೆ, ಈ ಸಲಹೆಗಳನ್ನು ಸರಿಯಾಗಿ ಪಾಲಿಸಿದರೆ, ನೀವು ಸುಲಭವಾಗಿ ಮೊಬೈಲ್​ ಚಟದಿಂದ ಹೊರಗಡೆ ಬರಬಹುದು.

    ಇಂದು ಎಲ್ಲೇ ನೋಡಿದರು ಚಿಕ್ಕವರು, ದೊಡ್ಡವರು ಅನ್ನೋ ಭೇದ-ಭಾವ ಇಲ್ಲದೆ ಬಹುತೇಕರು ಮೊಬೈಲ್​ನಲ್ಲೇ ಮುಳುಗಿರುತ್ತಾರೆ. ಊಟ ಮಾಡುವಾಗ, ಟಾಯ್ಲೆಟ್​ಗೆ ಹೋದಾಗ ಹಾಗೂ ಪ್ರಯಾಣ ಮಾಡುವಾಗ ಮೊಬೈಲ್​ ಬೇಕೆ ಬೇಕು. ಇಲ್ಲದಿದ್ರೆ ಏನೋ ಕಳೆದುಕೊಂಡಂತೆ ಮನಸ್ಸು ಪರಿತಪಿಸುತ್ತದೆ. ಅಷ್ಟರಮಟ್ಟಿಗೆ ಮೊಬೈಲ್​ಗೆ ಕೆಲವರು ದಾಸರಾಗಿರುತ್ತಾರೆ. ಮನೆ-ಮಂದಿಗಿಂತ ಮೊಬೈಲ್​ ಪರದೆಗೆ ಹೆಚ್ಚು ಸಮಯ ನೀಡುತ್ತಾರೆ. ಉಚಿತ ಸಮಯ ಸಿಕ್ಕರಂತೂ ಆನ್​ಲೈನ್​ ಗೇಮ್ಸ್​, ಸಾಮಾಜಿಕ ಜಾಲತಾಣ, ಚಿಟ್​ಚಾಟ್​ ಸೇರಿದಂತೆ ಅನೇಕ ವಿಧದಲ್ಲಿ ಸಮಯ ವ್ಯರ್ಥ ಮಾಡುತ್ತಾರೆ. ಈ ಚಟದಿಂದ ಹೊರಬರದಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಕೂಡ ನಮ್ಮನ್ನು ಬಾಧಿಸುತ್ತವೆ. ಫೋನ್​ ಇಲ್ಲದಿದ್ದಾಗ ಏನೋ ಕಳೆದುಕೊಂಡಿದ್ದೇವೆ ಎಂದು ನಿಮಗೆ ಅನಿಸುತ್ತದೆಯೇ? ನೀವು ಹುಚ್ಚು ಮತ್ತು ಬೇಸರವನ್ನು ಅನುಭವಿಸುತ್ತಿದ್ದೀರಾ? ಆದರೆ ಇದು ಖಂಡಿತವಾಗಿಯೂ ವ್ಯಸನವಾಗಿದೆ ಮತ್ತು ಅದರಿಂದ ಹೊರಬರಲು ಇಲ್ಲಿ ಕೆಲವು ಸಲಹೆಗಳಿವೆ ಓದಿ…

    ಫೋನ್ ಚಟವನ್ನು ಕಡಿಮೆ ಮಾಡಲು ಸಲಹೆಗಳು

    1. ಫೋನ್ ಇಲ್ಲದ ದಿನ
    ನಿಮ್ಮ ಫೋನ್ ಬಳಸದೆ ಇರಲು ವಾರದಲ್ಲಿ ಒಂದು ದಿನವನ್ನು ಮೀಸಲಿಡಲು ನಿರ್ಧಾರ ತೆಗೆದುಕೊಳ್ಳಿ. ಶನಿವಾರ ಮತ್ತು ಭಾನುವಾರದ ನಡುವಿನ ಯಾವುದೇ ದಿನವನ್ನು ಫೋನ್ ಕಡಿಮೆ ದಿನ ಅಥವಾ ಫೋನ್ ಇಲ್ಲದ ದಿನ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳಿ ಮತ್ತು ಮೊಬೈಲ್​ನಿಂದಾಚೆಗೆ ಇರುವ ಪ್ರಪಂಚವನ್ನು ಆನಂದಿಸಲು ಪ್ರಯತ್ನಿಸಿ. ಇದಾದ ಬಳಿಕ ಇವೆರಡರ ನಡುವಿನ ವ್ಯತ್ಯಾಸವನ್ನು ನೀವು ಅರ್ಥಮಾಡಿಕೊಳ್ಳುವಿರಿ.

    2. ಫೋನ್ ನೋ ಝೋನ್
    ನಿಮ್ಮ ಫೋನ್ ಅನ್ನು ಮಲಗುವ ಕೋಣೆಗೆ ತರದಂತೆ ಕಠಿಣ ನಿಯಮವನ್ನು ನೀವೇ ಮಾಡಿಕೊಳ್ಳಿ. ಅಲ್ಲದೆ, ಹಾಸಿಗೆಯ ಪಕ್ಕದಲ್ಲಿ ಮೊಬೈಲ್​ ಅನ್ನು ಎಂದಿಗೂ ಚಾರ್ಜ್ ಮಾಡಬೇಡಿ. ನೀವು ಮಲಗುವ ಕೋಣೆಯನ್ನು ‘ಫೋನ್ ನೋ ಝೋನ್’ ಮಾಡಲು ಪ್ರಯತ್ನಿಸಿ ನೋಡಿ.

    3. ಕಪಾಟಿನಲ್ಲಿ ಇರಿಸಿ
    ನಿಮ್ಮ ಫೋನ್ ಅನ್ನು ಯಾವಾಗಲೂ ನಿಮ್ಮ ಕಡೆಗೆ ಅಥವಾ ಪಕ್ಕದಲ್ಲಿ ಇಟ್ಟುಕೊಳ್ಳಬೇಡಿ. ಬದಲಿಗೆ ಅದನ್ನು ಒಂದು ಕಪಾಟಿನಲ್ಲಿ ಇರಿಸಿ. ನೀವು ದಿನಕ್ಕೆ ಎಷ್ಟು ಬಾರಿ ಫೋನ್ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂಬುದು ನಿಮಗೆ ತಿಳಿದಿದೆ. ನಿಮ್ಮ ಎದುರುಗಡೆಯೇ ಫೋನ್ ಕಂಡಾಗ ಹೆಚ್ಚಿನ ಗಮನವು ನಿಮ್ಮ ಫೋನ್​ ಮೇಲೆ ಹೋಗುತ್ತದೆ.

    4. ನೋಟಿಫಿಕೇಶನ್​ ಆಫ್​ ಮಾಡಿ
    ನಿಮ್ಮ ಫೋನ್‌ನಲ್ಲಿ ಎಲ್ಲ ಅಪ್ಲಿಕೇಶನ್ ನೋಟಿಫಿಕೇಶ್​ಗಳನ್ನು ಆಫ್ ಮಾಡಲು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಕೆಲವು ನೋಟಿಫಿಕೇಶ್​ಗಳನ್ನು ಬರುತ್ತಲೇ ಇರುತ್ತವೆ. ಇದರಿಂದ ನಿಮ್ಮ ಫೋನ್ ಅನ್ನು ಮತ್ತೆ ಮತ್ತೆ ನೋಡುವಂತೆ ನಿಮ್ಮನ್ನು ಅವು ಪ್ರೇರೇಪಿಸುತ್ತವೆ. (ಏಜೆನ್ಸೀಸ್​)

    ಡಬ್ಲ್ಯುಪಿಎಲ್‌ನಲ್ಲಿ 60 ಆಟಗಾರ್ತಿಯರು ರಿಟೇನ್: 7 ಆಟಗಾರ್ತಿಯರಿಗೆ ಕೊಕ್ ನೀಡಿದ ಆರ್‌ಸಿಬಿ

    ಕ್ರಿಕೆಟ್​ ಬೆಟ್ಟಿಂಗ್​ ಕಾನೂನುಬದ್ಧವಾಗದೆ ಸರ್ಕಾರಕ್ಕೆ 2.29 ಲಕ್ಷ ಕೋಟಿ ರೂ. ನಷ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts