More

    ಪರೀಕ್ಷೆಗೆ ಹೆದರಿದ ಪಿಎಚ್‌ಡಿ ವಿದ್ಯಾರ್ಥಿನಿ, ಪಿಜಿಯಲ್ಲಿ ಹೀಗಾ ಮಾಡೋದು..!

    ಮೈಸೂರು: ಪರೀಕ್ಷೆ ಒತ್ತಡದಿಂದ ಬೇಸತ್ತ ಪಿಎಚ್‌ಡಿ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಸರಸ್ವತಿಪುರಂನಲ್ಲಿ ನಡೆದಿದೆ.

    ಚಾಮರಾಜನಗರ ಮೂಲದ ರಶ್ಮಿ (29) ಮೃತ ದುರ್ದೈವಿ. ಎಂಎಸ್ಸಿ ರಸಾಯನಶಾಸ್ತ್ರ ಮುಗಿಸಿ ಪಿಎಚ್‌ಡಿ ಮಾಡುತ್ತಿದ್ದ ರಶ್ಮಿ, ಪರೀಕ್ಷೆ ಒತ್ತಡದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
    ಸರಸ್ವತಿಪುರಂ 9ನೇ ಮುಖ್ಯರಸ್ತೆಯಲ್ಲಿರುವ ಪಿಜಿಯಲ್ಲಿ ಉಳಿದುಕೊಂಡಿದ್ದ ರಶ್ಮಿ, ಜೆಎಸ್​​ಎಸ್ ನಲ್ಲಿ ಪಾರ್ಟ್ ಟೈಂ ಲೆಕ್ಚರರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

    ರಸಾಯನಶಾಸ್ತ್ರ ವಿಚಾರದಲ್ಲಿ ಪಿಎಚ್‌ಡಿ ಮಾಡುತ್ತಿದ್ದ ರಶ್ಮಿ ಪರೀಕ್ಷೆಗೆ ಸಿದ್ಧತೆ ಮಾಡಿ ಕೊಂಡಿರಲಿಲ್ಲವೆಂದು ಹೇಳಲಾಗಿದೆ. ಇದರಿಂದ ಒತ್ತಡಕ್ಕೆ ಒಳಗಾಗಿದ್ದ ರಶ್ಮಿ ಪಿಜಿಯಲ್ಲಿ ನೇಣಿಗೆ ಶರಣಾಗಿದ್ದಾರೆ.
    ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಜಿಮ್ ಮಾಡೋದ್ರಿಂದಾನೆ ಸಾವು ಸಂಭವಿಸುತ್ತೆ ಅನ್ನೋದು ತಪ್ಪು: ನಟ ನೆನಪಿರಲಿ ಪ್ರೇಮ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts