More

    ಪಿಎಫ್​ಐ ಖಾತೆಗೆ 100 ಕೋಟಿ ರೂಪಾಯಿ ಜಮೆ! ಇಡಿ ತನಿಖೆಯಿಂದ ಬಯಲಾಯ್ತು ಸಂಘಟನೆಯ ನಿಜ ಬಣ್ಣ

    ತಿರುವನಂತಪುರಂ: ಕೇರಳ ಮೂಲದ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ) ಸಂಘಟನೆಯ ಬ್ಯಾಂಕ್​ ಖಾತೆಗಳಿಗೆ ಕಳೆದ ಕೆಲ ವರ್ಷಗಳಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಹಣ ಜಮೆ ಆಗಿದೆ. ಜಾರಿ ನಿರ್ದೇಶನಾಲಯವು ಪಿಎಫ್​ಐ ವಿರುದ್ಧದ ಪ್ರಕರಣವನ್ನು ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ಈ ವಿಚಾರ ಹೊರಬಿದ್ದಿದೆ.

    ಇದನ್ನೂ ಓದಿ: ಗ್ಯಾಂಗ್​ ರೇಪ್​ ಮಾಡಿದರೆಂದು ದೂರು ನೀಡಲು ಬಂದ ಮಹಿಳೆಯನ್ನೇ ರೇಪ್​ ಮಾಡಿದ ಎಸ್​ಪಿ!

    2014ರ ನಂತರ ಸಂಘಟನೆಯ ಹಣ ವರ್ಗಾವಣೆ, ಜಮೆ ವಹಿವಾಟು ಹೆಚ್ಚಾಗಿದೆ. ಬಹುಪಾಲು ಹಣ ನಗದು ರೂಪದಲ್ಲೇ ಜಮೆ ಆಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಯಲ್ಲೂ ಪಿಎಫ್​ಐ ಭಾಗವಹಿಸಿತ್ತು. ಈ ಪ್ರತಿಭಟನೆಗೆ ಸಂಘಟನೆಗೆ ಹಣ ಪೂರೈಕೆ ಆಗಿರಬಹುದು ಎನ್ನಲಾಗಿದೆ.

    ಫ್ರೆಬವರಿ ತಿಂಗಳಿನಲ್ಲಿ ದೆಹಲಿಯಲ್ಲಿ ನಡೆದ ಗಲಭೆ ಮತ್ತು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಗಲಭೆಗಳಲ್ಲೂ ಪಿಎಫ್​ಐ ಪಾತ್ರವಿರುವ ಸಾಧ್ಯತೆಯಿದೆ. ಈ ಗಲಭೆಗಳಲ್ಲಿ ಪಿಎಫ್​ಐನ ರಾಜಕೀಯ ಘಟಕ, ಎಸ್​ಡಿಪಿಐ ಭಾಗಿಯಾಗಿತ್ತು ಎನ್ನುವುದಕ್ಕೆ ಕೆಲ ಸಾಕ್ಷ್ಯಾಧಾರಗಳೂ ಸಿಕ್ಕಿವೆ ಎನ್ನಲಾಗಿದೆ.

    ಇದನ್ನೂ ಓದಿ: ಮಮತಾ ಬ್ಯಾನರ್ಜಿ ಇನ್ವಿಟೇಷನ್​ ಡ್ರಾಮಾ! ಕರೆದರೂ ಬಂದಿಲ್ಲ ಎಂದು ಸಾಕ್ಷಿ​ ನೀಡಿದ ಬಿಜೆಪಿ!

    ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಿಎಫ್​ಐ ವಿದ್ಯಾರ್ಥಿ ಘಟಕದ ನಾಯಕ ಕೆ.ಎ.ರವೂಫ್​ ಷರೀಫ್​ರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿದೆ. ಕಸ್ಟಡಿಯ ಅವಧಿ ವಿಸ್ತರಣೆ ಕೋರಿ ನ್ಯಾಯಾಲಯಕ್ಕೆ ಅಫಿಡವಿಟ್​ ಸಲ್ಲಿಸಲಾಗಿದೆ. ಇಡಿ ಕೋರಿಕೆಯ ಮೇರೆಗೆ ಕಸ್ಟಡಿ ಅವಧಿಯನ್ನು ಮೂರು ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ. (ಏಜೆನ್ಸೀಸ್​)

    ಹೋಟೆಲ್​ ರೂಂನ ಬೆಡ್​ಶೀಟ್​ನಲ್ಲಿ ಹೆಂಡತಿಯ ಮೃತದೇಹ ಸುತ್ತಿಟ್ಟು ಪರಾರಿಯಾದ ಗಂಡ! ಬಾಗಿಲು ತೆರೆದ ಸಿಬ್ಬಂದಿಗೆ ಕಾದಿತ್ತು ಶಾಕ್​!

    ಈ ಕೇಸ್​ ಸಾಲ್ವ್​ ಮಾಡೋಕೆ ಸಹಾಯ ಮಾಡಿದರೆ ನಿಮಗೆ ಸಿಗುತ್ತೆ 2.7 ಕೋಟಿ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts