More

    ಮದುವೆಯಾಗಲು ಹೆಣ್ಣಿಗೊಂದು ಗಂಡಿಗೊಂದು ವಯಸ್ಸೇಕೆ ? ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ವಕೀಲರು

    ನವದೆಹಲಿ: ವಧುವಿಗೆ 18 ವರ್ಷವಾದರೆ ಸಾಕು, ವರನಿಗೆ ಮಾತ್ರ 21 ತುಂಬಿರಬೇಕು ಎಂದು ಹೇಳುವ ಭಾರತದ ವಿವಾಹ ಕಾನೂನುಗಳನ್ನು ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ಬಯಸಿದೆ. ಈ ಬಗ್ಗೆ ರಾಜಸ್ತಾನ ಹೈಕೋರ್ಟ್​ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಸುಪ್ರೀಂ ಕೋರ್ಟಿಗೆ ವರ್ಗಾವಣೆ ಮಾಡಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸುತ್ತಿದೆ.

    ಬಿಜೆಪಿ ನಾಯಕ ಮತ್ತು ಹಿರಿಯ ವಕೀಲರಾದ ಅಶ್ವಿನಿ ಉಪಾಧ್ಯಾಯ ಅವರು ಗಂಡು ಮತ್ತು ಹೆಣ್ಣಿಗೆ ಮದುವೆಯಾಗಲು ಕನಿಷ್ಠ ವಯಸ್ಸನ್ನು ಸಮಾನವಾಗಿ ನಿಗದಿಪಡಿಸಬೇಕು ಎಂದು ರಾಜಸ್ತಾನ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದೇ ರೀತಿಯ ಮತ್ತೊಂದು ಅರ್ಜಿಯ ವಿಚಾರಣೆಯು ದೆಹಲಿ ಹೈಕೋರ್ಟ್​ನಲ್ಲಿ ನಡೆಯುತ್ತಿದೆ. ಹಾಗಾಗಿ ಈ ವಿಚಾರವನ್ನು ಸುಪ್ರೀಂ ಕೋರ್ಟ್ ಪರಿಗಣಿಸಬೇಕು ಎಂದು ಅಶ್ವಿನಿ ಉಪಾಧ್ಯಾಯ ವರ್ಗಾವಣೆ ಅರ್ಜಿ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ಹೌಸ್​ವೈಫ್​ ಎಂದರೆ ಮೂದಲಿಕೆ ಏಕೆ? ಅವರ ಶ್ರಮಕ್ಕೆ ಮನ್ನಣೆ ನೀಡೋದನ್ನು ಕಲಿಯಿರಿ ಸುಪ್ರೀಂ ಕೋರ್ಟ್

    ಹಾಲಿ, ಭಾರತದಲ್ಲಿ ಮದುವೆ ಆಗಲು ಕನಿಷ್ಠ ವಯೋಮಾನವು ಹೆಣ್ಣಿಗೆ 18 ವರ್ಷ ಇದ್ದರೆ, ಗಂಡಿಗೆ 21 ವರ್ಷ ಎಂದು ನಿಗದಿಯಾಗಿದೆ. ಇಂಡಿಯನ್ ಮೆಜಾರಿಟಿ ಆಕ್ಟ್​ನ ಪ್ರಕಾರ ಹೆಣ್ಣು-ಗಂಡು ಎಂಬ ಭೇದವಿಲ್ಲದೆ 18 ವರ್ಷವಾದರೆ ವಯಸ್ಕರೆಂದು ನಿರ್ಧಾರವಾಗುತ್ತದೆ. ಆದರೆ, ಮದುವೆಗೆ ಮಾತ್ರ ಗಂಡಿಗೊಂದು ವಯಸ್ಸು ಹೆಣ್ಣಿಗೊಂದು ವಯಸ್ಸು ವಿಧಿಸಲಾಗಿದೆ.ಇದಕ್ಕೆ ಯಾವುದೇ ವೈಜ್ನಾನಿಕ ಹಿನ್ನೆಲೆ ಇಲ್ಲ. ಬದಲಿಗೆ ಹೆಣ್ಣುಮಕ್ಕಳು ಬೇಗ ದೊಡ್ಡವರಾಗುತ್ತಾರೆ ಮತ್ತು ಹೆಂಡತಿಯ ವಯಸ್ಸು ಗಂಡನಿಗಿಂತ ಕಡಿಮೆ ಇರಬೇಕು ಎಂಬ ಪುರುಷಪ್ರಧಾನ ಸಾಮಾಜಿಕ ಧೋರಣೆಗಳಿಂದಾಗಿ ಕಾನೂನಿನಲ್ಲೂ ಭೇದಭಾವ ಪಾಲಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

    ಈ ರೀತಿಯಾಗಿ ಗಂಡು-ಹೆಣ್ಣಿಗೆ ಬೇರೆಬೇರೆ ಕನಿಷ್ಠ ವಯೋಮಾನದ ಅರ್ಹತೆಯನ್ನು ನಿಗದಿಪಡಿಸಿರುವ ಇಂಡಿಯನ್ ಕ್ರಿಶ್ಚಿಯನ್ ವಿವಾಹ ಕಾಯ್ದೆ 1872, ಪಾರ್ಸಿ ವಿವಾಹ ಮತ್ತು ವಿಚ್ಛೇಧನ ಕಾಯ್ದೆ 1936, ವಿಶೇಷ ವಿವಾಹ ಕಾಯ್ದೆ1954, ಹಿಂದೂ ವಿವಾಹ ಕಾಯ್ದೆ 1955 ಮತ್ತು ಬಾಲವಿವಾಹ ನಿಷೇಧ ಕಾಯ್ದೆ 2006 – ಇವುಗಳ ವಿವಿಧ ಕಲಂಗಳ ಸಂವೈಧಾನಿಕ ಊರ್ಜತೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಈ ಕಾನೂನುಗಳನ್ನು ಬದಲಿಸಿ, ಗಂಡು ಮತ್ತು ಹೆಣ್ಣು ಇಬ್ಬರಿಗೂ 21 ವರ್ಷಗಳ ಸಮಾನವಾದ ಕನಿಷ್ಠ ವಯೋಮಾನವನ್ನು ನಿಗದಿಪಡಿಸಬೇಕಾಗಿ ಕೋರಿದ್ದಾರೆ.

    ಇದನ್ನೂ ಓದಿ: ಹೈಕೋರ್ಟ್​ನಲ್ಲಿ ನ್ಯಾಯ ಸಿಗಲಿಲ್ಲವೆಂದು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಸೋನು ಸೂದ್​

    ಬಹುತೇಕ ಮುಂದುವರಿದ ರಾಷ್ಟ್ರಗಳಲ್ಲಿ ಮದುವೆಯ ವಯಸ್ಸು ಹೆಣ್ಣು-ಗಂಡಿಗೆ ಸಮಾನವಾಗಿದೆ. ಮದುವೆಗೆ ಕನಿಷ್ಠ ವಯಸ್ಸು ಅಮೆರಿಕ ಮತ್ತು ಇಂಗ್ಲೇಂಡಿನಲ್ಲಿ 18 ವರ್ಷ ಇದ್ದರೆ, ಜಪಾನ್ ಮತ್ತು ನೇಪಾಳದಲ್ಲಿ 20 ವರ್ಷ ಇದೆ.(ಏಜೆನ್ಸೀಸ್)

    VIDEO | “ವೆಲ್​ಕಮ್​ ಟು ದ ಕ್ಲಬ್, ಅಮೆರಿಕ…!”

    ಕೆಂಪುಕೋಟೆ ಗಲಭೆ ಆರೋಪಿಗಳ ಸುಳಿವು ನೀಡಿದರೆ 1 ಲಕ್ಷ ರೂಪಾಯಿ ಬಹುಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts