More

    ಕಾರು ಮಾರೋಕೆ ಫೋಟೋ ಹಾಕುವಾಗ ಗುಪ್ತಾಂಗದ್ದೂ ಫೋಟೋ ಹಾಕಿಬಿಟ್ಟ! ಮಾರಾಟ ಆಗಿದ್ದೇನು?

    ಕ್ಯಾನ್ಬೆರಾ: ಆನ್​ಲೈನ್ ಜಗತ್ತು ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು ಕೂಡ. ನಮ್ಮ ಕೈನಿಂದಾಗುವ ಸಣ್ಣ ಪುಟ್ಟ ತಪ್ಪಿನಿಂದಾಗಿ ಪೂರ್ತಿ ಜಗತ್ತಿನೆದುರೇ ತಲೆ ತಗ್ಗಿಸುವಂತೆ ಮಾಡುವ ಶಕ್ತಿ ಆನ್​ಲೈನ್​ಗಿದೆ. ಅದೇ ರೀತಿ ಆನ್​ಲೈನ್​ ಸೈಟ್ ಒಂದರಲ್ಲಿ ಕಾರು ಮಾರಾಟ ಮಾಡಲು ಹೋದ ವ್ಯಕ್ತಿಯೊಬ್ಬ ಪ್ರಪಂಚದೆದುರು ತಲೆ ತಗ್ಗಿಸಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ಆ ವ್ಯಕ್ತಿ ತನ್ನ ನಿಸಾನ್​ ಕಾರನ್ನು ಮಾರಾಟ ಮಾಡಲು ಮುಂದಾಗಿದ್ದ. 2011ರ ಮಾಡೆಲ್​ ಗಾಡಿ, 96,300 ಕಿಮೀ ಓಡಿದೆ, ಇತ್ಯಾದಿ ಮಾಹಿತಿಗಳನ್ನು ವೆಬ್​ಸೈಟ್​ ಒಂದರಲ್ಲಿ ಅಪ್​ಲೋಡ್​ ಮಾಡಿದ್ದ. ಕಾರು ಮಾರಾಟ ಮತ್ತು ಕೊಳ್ಳುವ ಸೈಟ್​ ಆಗಿದ್ದ ಅದರಲ್ಲಿ ತನ್ನ ಕಾರಿನ 40 ಫೋಟೋಗಳನ್ನೂ ಹಾಕಿದ್ದ. ಆದರೆ ಫೋಟೋ ಅಪ್​ಲೋಡ್​ ಮಾಡುವ ವೇಳೆ ಆತನ ಕಾರಿನ ಫೋಟೋಗಳ ಜತೆ ಆತ ತೆಗೆದುಕೊಂಡಿದ್ದ ಕೆಲ ಗುಪ್ತ ಫೋಟೋಗಳೂ ಸೆಲೆಕ್ಟ್​ ಆಗಿವೆ. ಗುಪ್ತಾಂಗ ಪ್ರದರ್ಶನ ಮಾಡಿದ್ದ ಫೋಟೋಗಳು ಜಗತ್ತಿಗೇ ಕಾಣುವಂತಾಗಿದೆ.

    ಈ ರೀತಿಯ ಫೋಟೋ ಇದ್ದಿದ್ದರಿಂದಾಗಿ ಆತನ ಕಾರಿನ ಜಾಹೀರಾತು ಹೆಚ್ಚು ವೈರಲ್ ಆಗಿದೆ. ಅನೇಕರು ಈ ಆ್ಯಡ್​ನ ಬಗ್ಗೆ ಟ್ರೋಲ್​ ಮಾಡಲಾರಂಭಿಸಿದ್ದಾರೆ. ಎಲ್ಲೇ ನಿಸಾನ್​ ಕಾರನ್ನು ನೋಡಿದರೂ ಇದೇ ಆ್ಯಡ್​ ನೆನಪಾಗುತ್ತದೆ ಎಂದು ಕಾಲೆಳೆದಿದ್ದಾರೆ. ಸಾವಿರಾರು ಜನರು ಈ ಆ್ಯಡ್​ನ ಬಗ್ಗೆ ಕಾಮೆಂಟ್​ ಮಾಡಿದ ನಂತರ ತನ್ನ ತಪ್ಪಿನ ಅರಿವಾದ ಕಾರು ಮಾಲೀಕ ಆ್ಯಡ್​ನ್ನು ತೆಗೆದುಹಾಕಿದ್ದಾನೆ. ಆತನ ಕಾರು ಮಾರಾಟವಾಗಿದೆಯೋ ಅಥವಾ ಇಲ್ಲವೋ ಎನ್ನುವುದು ಯಾರಿಗೂ ತಿಳಿದಿಲ್ಲ. (ಏಜೆನ್ಸೀಸ್)

    ಕರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟೇ ಬಿಡ್ತಾ? ಆತಂಕಕಾರಿ‌ ಮಾಹಿತಿ ಹೊರಹಾಕಿದ ವಿಧಿ ವಿಜ್ಞಾನ ತಜ್ಞ

    ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts