More

    ಎಸ್​​ಪಿ ಹೆಸರಲ್ಲಿ ಎಸ್​ಐಗೇ ವಂಚನೆ; ಖಾಕಿಧಾರಿಯಿಂದಲೇ ಲಕ್ಷಾಂತರ ಕಾಸು ಪಡೆದ ಖಾಸಿಂ ಬಂಧನ..

    ಕಲಬುರಗಿ: ಇದು ಮೋಸ ಮಾಡಿದವರನ್ನು ಪತ್ತೆ ಹಚ್ಚುವ ಪೊಲೀಸರ ಹೆಸರಲ್ಲಿ ಪೊಲೀಸರಿಗೇ ಮೋಸ ಮಾಡಿದಂಥ ಪ್ರಕರಣ. ಅಂದರೆ ಎಸ್​ಪಿ ಹೆಸರಿಗನಲ್ಲಿ ಎಸ್​ಐಗೇ ವ್ಯಕ್ತಿಯೊಬ್ಬ ವಂಚನೆ ಮಾಡಿದ್ದು, ಕೊನೆಗೂ ಆತ ಸಿಕ್ಕಿಬಿದ್ದಿದ್ದಾನೆ. ಹೀಗೆ ಖಾಕಿಧಾರಿಯಿಂದಲೇ ಲಕ್ಷಾಂತರ ಕಾಸು ಪಡೆದ ಖಾಸಿಂ ಪಟೇಲ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

    ಕಲಬುರಗಿ ಎಸ್​ಪಿ ಸಿಮಿ ಮರಿಯಮ್​ ಜಾರ್ಜ್​ ಅವರ ಹೆಸರಿನಲ್ಲಿ ಖಾಸಿಂ ಪಟೇಲ್​ ಎಂಬಾತ ಕಲಬುರಗಿ ಜಿಲ್ಲೆಯ ಜೇವರ್ಗಿ ಪೊಲೀಸ್ ಠಾಣೆಯ ಸಬ್​ ಇನ್​ಸ್ಪೆಕ್ಟರ್ ಮಂಜುನಾಥ್ ಹೂಗಾರ್ ಎಂಬವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದಾನೆ. ಖಾಸಿಂ ಎರಡು ಕಂತಿನಲ್ಲಿ ಒಟ್ಟು 8. 5 ಲಕ್ಷ ರೂಪಾಯಿ ಪಡೆದಿದ್ದ.

    ಇದನ್ನೂ ಓದಿ: 20 ಲಕ್ಷ ರೂ. ಲಂಚ ಸ್ವೀಕರಿಸುತ್ತಲೇ ರೆಡ್​ಹ್ಯಾಂಡ್​ ಆಗಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ!

    ಜೇವರ್ಗಿಯ ಕೊಂಡದಕುಳಿ ಗ್ರಾಮದ ನಿವಾಸಿ ಖಾಸಿಂ ಪಟೇಲ್​, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಜೊತೆ ಇರುವ ಫೋಟೋ ತೋರಿಸಿ, ಪ್ರಭಾವಿಯಂತೆ ಬಿಂಬಿಸಿಕೊಂಡಿದ್ದ. ಅಲ್ಲದೆ ಬೇರೆ ಫೋನ್​ ನಂಬರ್​ವೊಂದನ್ನು ಎಸ್​​ಐಗೆ ಕೊಟ್ಟು, ಇದು ಎಸ್​ಪಿ ಅವರ ತೀರಾ ಪರ್ಸನಲ್ ನಂಬರ್ ಎಂದು ಹೇಳಿ ನಂಬಿಸಿದ್ದ ಖಾಸಿಂ, ಕಾನೂನು ಸುವ್ಯವಸ್ಥೆಯಲ್ಲಿ ತೊಡಕು ಉಂಟಾದರೆ ಬಗೆಹರಿಸುವುದಾಗಿಯೂ ನಂಬಿಕೆ ಹುಟ್ಟಿಸಿದ್ದ. ಪ್ರತ್ಯೇಕವಾಗಿ ನೀಡಿದ್ದ ನಂಬರ್​ ಕುರಿತು ಖಾಸಿಂ, ಇದು ನಮ್ಮಿಬ್ಬರಿಗೆ ಮಾತ್ರವಷ್ಟೇ ಗೊತ್ತಿರುವ ಎಸ್​ಪಿ ಅವರ ನಂಬರ್, ಯಾರಿಗೂ ಹೇಳಬಾರದು ಎಂದೂ ತಾಕೀತು ಮಾಡಿದ್ದ. ಅಲ್ಲದೆ ಆ ನಂಬರ್​ನ ವಾಟ್ಸ್​ಆ್ಯಪ್​ನಲ್ಲಿ ಎಸ್​ಪಿ ಅವರ ಫೋಟೋ ಪ್ರೊಫೈಲ್​ಗೆ ಹಾಕಿದ್ದು, ಎಸ್​ಐ ಮೊಬೈಲ್​ಫೋನ್​ನಲ್ಲಿ ಅದನ್ನು ಎಸ್​​ಎಂಜಿ ಎಂದು ಸೇವ್ ಮಾಡಿಸಿದ್ದ.

    ಎರಡು ದಿನಗಳ ಹಿಂದೆ ಎಸ್​ಎಂಜಿ ಎಂದು ಸೇವ್ ಮಾಡಲಾಗಿದ್ದ ನಂಬರ್​ನಿಂದ ಎಸ್​ಐಗೆ ವಾಟ್ಸ್​ಆ್ಯಪ್​ ವಾಯ್ಸ್​ ಕಾಲ್​ ಮಾಡಿದ್ದ ಖಾಸಿಂ, ತುರ್ತಾಗಿ ಹಣ ಬೇಕಾಗಿದೆ ಎಂದು ಹೇಳಿ 2.5 ಲಕ್ಷ ಮತ್ತು 6 ಲಕ್ಷದಂತೆ ಒಟ್ಟು 8.5 ಲಕ್ಷ ರೂ. ಪಡೆದುಕೊಂಡಿದ್ದ. ಆದರೆ ವಾಟ್ಸ್ಆ್ಯಪ್​ ವಾಯ್ಸ್ ಕಾಲ್ ಸಂದರ್ಭ ಉರ್ದುಮಿಶ್ರಿತ ಹಿಂದಿ ಭಾಷೆಯಲ್ಲಿ ಹೆಣ್ಣು ಮಕ್ಕಳು ಮಾತಾಡಿರುವ ಧ್ವನಿ ಕೇಳಿಸಿಕೊಂಡಿದ್ದು ನೆನಪಾಗಿ ಅನುಮಾನ ಬಂದ ಎಸ್​ಐ, ಗುರುವಾರ ಎಸ್​ಪಿ ಅವರನ್ನು ಭೇಟಿಯಾಗಿ ವಿಷಯ ತಿಳಿಸಿದ್ದರು. ಆಗ್ ಎಸ್​ಪಿ ಅವರು ಅಂಥ ನಂಬರ್ ನನ್ನ ಬಳಿ ಇಲ್ಲ, ನಾನು ಮೆಸೇಜ್ ಮಾಡಿಲ್ಲ, ಹಣವನ್ನೂ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆಗ ತಾನು ಮೋಸ ಹೋಗಿದ್ದನ್ನು ಅರಿತ ಎಸ್​ಐ, ಸ್ಟೇಷನ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆ ಸಂದರ್ಭದಲ್ಲಿ 2 ಲಕ್ಷ ರೂ. ಕೂಡ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

    ಕೆಟ್ಟಿದ್ದ ಫ್ರಿಡ್ಜ್​ ರಿಪೇರಿಗೆಂದು ಬಂದವ ಮನೆಯೊಡತಿಯನ್ನೇ ಕೆಡಿಸಲು ಯತ್ನಿಸಿದ; ಆಕೆಯ ಪುತ್ರಿಯೊಂದಿಗೂ ಅಸಭ್ಯವಾಗಿ ವರ್ತಿಸಿದ…

    ಮೆಸೇಜ್​ ಮಾಡುವಾಗ ಹುಷಾರು.. ಆ ಒಂದು ಪದ ಬಳಸಿದ್ದಕ್ಕೆ ಆಕೆಗೆ 2 ವರ್ಷ ಜೈಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts