More

    20 ಲಕ್ಷ ರೂ. ಲಂಚ ಸ್ವೀಕರಿಸುತ್ತಲೇ ರೆಡ್​ಹ್ಯಾಂಡ್​ ಆಗಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ!

    ಬೆಂಗಳೂರು: ನಗರದ ಹೋಟೆಲ್​ವೊಂದರ ಬಳಿ 20 ಲಕ್ಷ ರೂಪಾಯಿ ಲಂಚ ಪಡೆಯುವಾಗ ರೆಡ್​ಹ್ಯಾಂಡ್​ ಆಗಿ ಎಸಿಬಿ ಬಲೆಗೆ ಭ್ರಷ್ಟ ಅಧಿಕಾರಿಯೊಬ್ಬ ಸಿಕ್ಕಿಬಿದ್ದಿದ್ದಾನೆ.

    ಬೊಮ್ಮನಹಳ್ಳಿ ಟೌನ್​​ ಪ್ಲಾನಿಂಗ್​ ಆಫೀಸರ್​ ದೇವೇಂದ್ರಪ್ಪ ಎಸಿಬಿ ಬಲೆಗೆ ಬಿದ್ದವ. ಬೆಂಗಳೂರು ನಿವಾಸಿ, ಸಿಗ್ಮೀಸ್​ ಬ್ರೀವರೀಸ್​ ಖಾಸಗಿ ಕಂಪನಿಯ ಮ್ಯಾನೇಜರ್ ಆಗಿದ್ದು, ಬೊಮ್ಮನಹಳ್ಳಿಯ ಹುಳಿಮಾವಿನಲ್ಲಿ ಖಾಸಗಿಯವರಿಗೆ ಸೇರಿದ ಸ್ವತ್ತಿನಲ್ಲಿ ಕಟ್ಟಡ ನಿರ್ಮಿಸಿದ್ದು, ಇದಕ್ಕೆ ಓಸಿ(ಆಕ್ಯುಪೆನ್ಸ್​ ಸರ್ಟಿಫಿಕೇಟ್​) ಅರ್ಜಿ ಸಲ್ಲಿಸಿದ್ದರು. ಓಸಿ ಕೊಡಲು ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಕಚೇರಿಯಲ್ಲಿದ್ದ ಎಡಿಟಿಪಿ ದೇವೇಂದ್ರಪ್ಪ ಬರೋಬ್ಬರಿ 40 ಲಕ್ಷ ರೂಪಾಯಿ ಕೊಡುವಂತೆ ಒತ್ತಾಯಿಸಿದ್ದರು. ಇದನ್ನೂ ಓದಿರಿ ಗ್ರಾಪಂ ಕಚೇರಿ ಮುಂದೆ ಮಾರಾಮಾರಿ, 50 ಹೆಚ್ಚು ಜನರಿಗೆ ಗಂಭೀರ ಗಾಯ, 20 ವಾಹನ ಜಖಂ 

    20 ಲಕ್ಷ ರೂ. ಲಂಚ ಸ್ವೀಕರಿಸುತ್ತಲೇ ರೆಡ್​ಹ್ಯಾಂಡ್​ ಆಗಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ!ದೇವೇಂದ್ರಪ್ಪರ ಬೇಡಿಕೆಯಂತೆ ಇಂದು (ಶುಕ್ರವಾರ) 20 ಲಕ್ಷ ಹಣ ತೆಗೆದುಕೊಂಡು ಬಂದ ಖಾಸಗಿ ಕಂಪನಿಯ ಮ್ಯಾನೇಜರ್, ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದರು​ಬಿಬಿಎಂಪಿ ಕಚೇರಿಯಲ್ಲಿ ಇಂದು ಮೀಟಿಂಗ್​ ಮುಗಿಸಿಕೊಂಡು ಹೊರಟ ದೇವೇಂದ್ರಪ್ಪ, ಮೆಜೆಸ್ಟಿಕ್​ನ ಅಮರ್ ಹೋಟೆಲ್ ಬಳಿ ಹಣ ತರುವಂತೆ ಖಾಸಗಿ ಕಂಪನಿಯ ಮ್ಯಾನೇಜರ್​ಗೆ ಹೇಳಿದ್ದ.

    ಅದರಂತೆ ಅಲ್ಲಿಗೆ ಬಂದ ಮ್ಯಾನೇಜರ್​ ಬಳಿ 20 ಲಕ್ಷ ಹಣ ಪಡೆಯುವಾಗ ದೇವೇಂದ್ರಪ್ಪ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಡಿವೈಎಸ್ಪಿ ತಮ್ಮಯ್ಯ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ದೇವೇಂದ್ರಪ್ಪನನ್ನ ಎಸಿಬಿ ವಶಕ್ಕೆ ಪಡೆದಿದೆ. ಇನ್ನು ಎಸಿಬಿ ಬಲೆಗೆ ಬಿದ್ದ ದೇವೇಂದ್ರಪ್ಪನ ಕಾರಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. 20 ಲಕ್ಷ ಹಣ ಲಂಚ ಪಡೆಯುವಾಗ ರೆಡ್ಹ್ಯಾಂಡ್ ಆಗಿ  ದೇವೇಂದ್ರಪ್ಪ ಸಿಕ್ಕಿಬಿದ್ದ ಬಳಿಕ ಆತನ ಕಾರನ್ನ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಆ ವೇಳೆ ಕಾರಿನಲ್ಲಿ 7.42 ಲಕ್ಷ ರೂ. ಪತ್ತೆಯಾಗಿದೆ.

    ಗ್ರಾಪಂ ಕಚೇರಿ ಮುಂದೆ ಮಾರಾಮಾರಿ, 50 ಹೆಚ್ಚು ಜನರಿಗೆ ಗಂಭೀರ ಗಾಯ, 20 ವಾಹನ ಜಖಂ

    ಶೃಂಗೇರಿಯಲ್ಲಿ ಬಾಲಕಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಅತ್ಯಾಚಾರ: ಸರ್ಕಲ್​ ಇನ್​ಸ್ಪೆಕ್ಟರ್​ ಅಮಾನತು

    ಬೆಂಗ್ಳೂರಲ್ಲಿ ನಿವೃತ್ತ ಉಪ ತಹಸೀಲ್ದಾರ್ ಕೊಂದು ಬಿಡದಿಯಲ್ಲಿ ಸುಟ್ಟುಹಾಕಿದ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಕರ್ನಾಟಕದ ಈ ಊರಲ್ಲಿ 150 ಎಕರೆ ಜಮೀನು ಫ್ರೀ! ಸಿಕ್ಕಷ್ಟು ಜಾಗಕ್ಕೆ ಬೇಲಿ ಹಾಕಿದ ಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts