More

    ಲತಾ ಮಂಗೇಶ್ಕರ್​ ಜತೆ ವಾಜಪೇಯಿಯನ್ನೂ ನೆನಪಿಸಿಕೊಳ್ಳುತ್ತಿರುವ ಅಭಿಮಾನಿಗಳು; ಕಾರಣಗಳಿವು…

    ನವದೆಹಲಿ: ಭಾರತದ ಗಾನಕೋಗಿಲೆ ಎಂದೇ ಕರೆಯಲಾಗುತ್ತಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನರಾದ ಕೆಲವೇ ಕ್ಷಣಗಳಲ್ಲಿ ಅಭಿಮಾನಿಗಳು ಲತಾ ಜತೆ ಅಟಲ್​ ಬಿಹಾರಿ ವಾಜಪೇಯಿಯವರನ್ನು ಕೂಡ ನೆನಪಿಸಿಕೊಳ್ಳುತ್ತಿದ್ದಾರೆ. ಹಾಗೆ ಇಬ್ಬರನ್ನೂ ಜೊತೆಜೊತೆಯಾಗಿ ಸ್ಮರಿಸಿಕೊಳ್ಳುತ್ತಿರುವ ಕುರಿತು ಹಲವರು ತಮ್ಮದೇ ಆದ ನೆನಪುಗಳನ್ನು ಕೆದಕಿ ವ್ಯಾಖ್ಯಾನಿಸಿಕೊಂಡಿದ್ದಾರೆ.

    ಹೀಗೆ ಲತಾ ಅವರ ಜತೆ ವಾಜಪೇಯಿಯವರನ್ನು ಕೂಡ ಹಲವರು ನೆನಪಿಸಿಕೊಳ್ಳುತ್ತಿರುವುದಕ್ಕೆ ಮುಖ್ಯ ಕಾರಣ ಹೆಸರು. ಇಬ್ಬರ ಹೆಸರಲ್ಲೂ ಒಂದು ರೀತಿಯಲ್ಲಿ ಸಂಬಂಧವಿದೆ. ಅದೇನೆಂದರೆ LATA ಎಂಬುದನ್ನು ತಿರುಗಿಸಿ ಬರೆದರೆ ATAL ಎಂದಾಗುತ್ತದೆ ಎಂಬುದಾಗಿ ಜನರು ಹೇಳಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಒಮ್ಮೆ ಅಟಲ್​ ಬಿಹಾರಿ ವಾಜಪೇಯಿ ಅವರೇ ಈ ವಿಷಯ ಪ್ರಸ್ತಾಪಿಸಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ.

    “ಅಟಲ್ ಅವರು ಎಂಥ ವಾಗ್ಮಿ ಎಂದರೆ, ಅವರು ಒಮ್ಮೆ ಲತಾ ಮಂಗೇಶ್ಕರ್ ಅವರ ಜತೆ ಮಾತನಾಡುತ್ತಿದ್ದಾಗ ಹೀಗೆ ಹೇಳಿದ್ದರು. ‘ನೀವು ತಿರುಗಿದರೆ ನಾನು..’ ಎಂದಾಗ ಅಟಲರನ್ನು ಲತಾ ಮಂಗೇಶ್ಕರ್ ಅಚ್ಚರಿಯಿಂದ ನೋಡಿದ್ದರು. ಆಗ LATA ಉಲ್ಟಾ ಆಗಿಸಿದರೆ ATAL ಆಗುತ್ತದೆ ನೋಡಿ” ಎಂದು ಅಟಲ್ ಹೇಳಿದ್ದರು ಎಂಬುದನ್ನು ಕೆಲವರು ಸ್ಮರಿಸಿಕೊಂಡಿದ್ದಾರೆ.

    ಮತ್ತೊಂದೆಡೆ ಅಟಲ್​ ಕವಿ, ಲತಾ ಗಾಯಕಿ. ಅದರಲ್ಲೂ ‘ಥನ್ ಗಯಿ, ಮೌಥ್ ಸೆ ಥನ್​ ಗಯಿ’ ಎಂಬ ಅಟಲರ ಕವಿತೆಯನ್ನು ಲತಾ ಹಾಡಿದ್ದರು. ವಿಶೇಷವೆಂದರೆ ಇಬ್ಬರೂ ಭಾರತ ರತ್ನ ಪುರಸ್ಕೃತರು. ಇನ್ನು ಅಟಲ್ ಅವರು ಪ್ರಧಾನಿ ಆಗಿದ್ದಾಗಲೇ ಲತಾ ಭಾರತ ರತ್ನ ಪುರಸ್ಕೃತರಾಗಿದ್ದರು.

    ಅವರಿಬ್ಬರಿಗೂ ಇದ್ದ ಇನ್ನೊಂದು ಸಾಮ್ಯತೆ ಎಂದರೆ ಇಬ್ಬರೂ ಅವಿವಾಹಿತರು. ಅದಕ್ಕೆ ಕಾರಣಗಳು ಬೇರೆ ಬೇರೆ ಇದ್ದಿರಬಹುದು, ಆದರೆ ಇಬ್ಬರೂ ಮದುವೆಯಾಗಿರಲಿಲ್ಲ.

    ಇಬ್ಬರೂ ತಂತಮ್ಮ ಕ್ಷೇತ್ರಗಳಲ್ಲಿ ಸೆಲೆಬ್ರಿಟಿಗಳಾಗಿದ್ದರು, ಮಾತ್ರವಲ್ಲ ಇಬ್ಬರೂ ಆಸ್ಪತ್ರೆಯಲ್ಲೇ ಸಾವಿಗೀಡಾದರು. ಇನ್ನು ಅಟಲ್ ತನ್ನ ತಂದೆ ಇದ್ದಂತೆ ಎಂದು ಹೇಳುತ್ತಿದ್ದ ಲತಾ 92 ವರ್ಷಕ್ಕೆ ನಿಧನರಾದರೆ, ಅಟಲ್​ ಅವರು ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು ಎನ್ನುವ ಮೂಲಕ ಲತಾ-ಅಟಲ್​ಗೆ ಇರುವ ಸಾಮ್ಯತೆ-ಹೋಲಿಕೆಗಳನ್ನು ಸಾರ್ವಜನಿಕರು ಹಂಚಿಕೊಳ್ಳುತ್ತಿದ್ದಾರೆ.

    ಅಂಗೈಯಲ್ಲೇ ದೇವಾಲಯ ದರ್ಶನ; ಮುಜರಾಯಿ ಇಲಾಖೆ ದೇಗುಲಗಳಿಗೆ ಡಿಜಿಟಲ್ ಸ್ಪರ್ಶ

    ಮೊಬೈಲ್​ಫೋನ್ ಬೆಲೆ 12 ಸಾವಿರ, ರುದ್ರಾಕ್ಷಿ ಹಾರ 20 ಸಾವಿರ ರೂ.: ಯೋಗಿ ಆದಿತ್ಯನಾಥ್​ ಆಸ್ತಿ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts