More

    ಬಾಂಗ್ಲಾ ಅಕ್ರಮ ವಲಸಿಗರ ಕಾಟಕ್ಕೆ ಬೇಸತ್ತ ಬಂಗಾಳ ಬದಲಾವಣೆ ಬಯಸುತ್ತಿದೆ- ಅಮಿತ್ ಷಾ

    ಬೋಲ್​ಪುರ: ಬಾಂಗ್ಲಾದೇಶೀಯರ ಅಕ್ರಮ ವಲಸೆ ಮತ್ತು ಕಾಟ, ರಾಜಕೀಯ ಹಿಂಸಾಚಾರ, ಭ್ರಷ್ಟಾಚಾರ ಮುಂತಾದವುಗಳಿಂದ ಬೇಸತ್ತಿರುವ ಬಂಗಾಳ ಬದಲಾವಣೆಯನ್ನು ಬಯಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು. ಅವರು ಭಾನುವಾರ ಭಿರ್​ಬೂಮ್​ ಜಿಲ್ಲೆಯ ಬೋಲ್​ಪುರದಲ್ಲಿ ರೋಡ್​ ಷೋ ಒಂದರಲ್ಲಿ ಭಾಗವಹಿಸಿ ಮಾತನಾಡಿದರು.

    ಪಶ್ಚಿಮ ಬಂಗಾಳಕ್ಕೆ ಸೋನರ್ ಬಾಂಗ್ಲಾ ಎಂಬ ಹೆಸರೊಂದಿದೆ. ಬಂಗಾಳದ ಹಳೆಯ ವೈಭವವನ್ನು ಮತ್ತೆ ಒದಗಿಸುವ ಕೆಲಸವನ್ನು ಬಿಜೆಪಿ ಅಧಿಕಾರಕ್ಕೆ ಬಂದರೆ ಮಾಡಲಿದೆ. ನಾನು ಅನೇಕ ರೋಡ್​ ಷೋಗಳಲ್ಲಿ ಭಾಗವಹಿಸಿದ್ದೇನೆ. ಆಯೋಜಿಸಿದ್ದೇನೆ. ಆದರೆ, ಇಂಥ ರೋಡ್​ ಷೋವನ್ನು ನೋಡಿರಲಿಲ್ಲ. ಇದು ಮಮತಾ ಬ್ಯಾನರ್ಜಿ ಅವರ ಸರ್ಕಾರದ ವಿರುದ್ಧದ ಆಕ್ರೋಶವಾಗಿದ್ದು, ರೋಡ್​ ಷೋ ಮೂಲಕ ಅದು ವ್ಯಕ್ತವಾಗುತ್ತಿದೆ. ಇಲ್ಲಿ ಸೇರಿರುವ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಕಾರ್ಯಸೂಚಿಯನ್ನು ಬೆಂಬಲಿಸುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ ಕೂಡ ಹೌದು ಎಂದು ಷಾ ವ್ಯಾಖ್ಯಾನಿಸಿದರು.

    ಇದನ್ನೂ ಓದಿ: ರೈತರ ಹೋರಾಟಕ್ಕೆ ವಿದೇಶಗಳಿಂದ ಬರುತ್ತಿದೆ ಹಣ! ಫೋರೆಕ್ಸ್​ ಇಲಾಖೆಯಿಂದ ಬಂತು ನೋಟಿಸ್​!

    ಕವಿ ರವೀಂದ್ರನಾಥ ಟಾಗೋರ್ ಅವರೊಂದಿಗೆ ಸಾಂಸ್ಕೃತಿಕವಾಗಿ, ಸಾಹಿತ್ತಿಕವಾಗಿ ನಂಟು ಹೊಂದಿರುವ ಬೋಲ್​ಪುರದಲ್ಲಿ ರೋಡ್ ಷೋ ನಡೆಸುವ ಮುನ್ನ ಟಾಗೋರ್ ಅವರಿಗೆ ಅಮಿತ್ ಷಾ ಪುಷ್ಪನಮನ ಸಲ್ಲಿಸಿದರು. ಬೋಲ್​ಪುರದ ಡಾಕ್​ಬಂಗ್ಲೋ ಗ್ರೌಂಡ್​ನಿಂದ ಅಪರಾಹ್ನ 3.10ಕ್ಕೆ ಶುರುವಾದ ರೋಡ್ ಷೋ ಚೌರಾಸ್ತಾ ತನಕವೂ ಮುಂದುವರಿಯಿತು. ತೆರೆದ ಲಾರಿಯ ಮೇಲೆ ಅಮಿತ್ ಷಾ ಅವರೊಂದಿಗೆ ಪಕ್ಷದ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್​ ಕೂಡ ಜತೆಗಿದ್ದರು. ಬೆಂಬಲಿಗರು ಜೈಶ್ರೀರಾಮ್, ನರೇಂದ್ರ ಮೋದಿ ಜಿಂದಾಬಾದ್​, ಅಮಿತ್ ಷಾ ಜಿಂದಾಬಾದ್ ಘೋಷಣೆ ಕೂಗಿದರು. (ಏಜೆನ್ಸೀಸ್)

    ಮೂರು ತಿಂಗಳಲ್ಲಿ 25,000 ಕೋಟಿ ರೂಪಾಯಿ ಸಂಗ್ರಹಿಸಲಿವೆ ಸಾರ್ವಜನಿಕ ಬ್ಯಾಂಕುಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts