More

    ಏಮ್ಸ್‌ಗಾಗಿ ದೆಹಲಿಗೆ ಮತ್ತೊಮ್ಮೆ ನಿಯೋಗ

    ಮಸ್ಕಿ: ರಾಯಚೂರಿನಲ್ಲಿ ಏಮ್ಸ್ ಆರಂಭಿಸುವಂತೆ ಒತ್ತಾಯಿಸಿ 620ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆದಿದ್ದು, ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಲು ಶೀಘ್ರ ದೆಹಲಿಗೆ ನಿಯೋಗ ತೆರಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ ಹೇಳಿದರು.

    ಪಟ್ಟಣದ ಭ್ರಮರಾಂಬ ದೇವಸ್ಥಾನದ ಆವರಣದಲ್ಲಿ ಪೂರ್ವಭಾವಿ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ರಾಯಚೂರಿನಲ್ಲ ಏಮ್ಸ್ ಆರಂಭಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದ್ದು, ಕೇಂದ್ರದ ಆರೋಗ್ಯ ಸಚಿವ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ, ತ್ವರಿತವಾಗಿ ಮಂಜೂರು ಮಾಡುವಂತೆ ಮತ್ತೊಮ್ಮೆ ದೆಹಲಿಗೆ ನಿಯೋಗ ಹೋಗುವುದು ಅವಶ್ಯವಾಗಿದೆ ಎಂದರು.

    ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಶಾಸಕರು, ಮಾಜಿ ಶಾಸಕರು ಹಾಗೂ ಹೋರಾಟ ಬೆಂಬಲಿಸಿದವರನ್ನು ಭೇಟಿ ಮಾಡುತ್ತಿದ್ದು, ದೆಹಲಿಗೆ ತೆರಳುವ ನಿಯೋಗದಲ್ಲಿ ಜಿಲ್ಲೆಯ ಪ್ರಮುಖ ಸ್ವಾಮೀಜಿಗಳು, ಜನಪ್ರತಿನಿಧಿಗಳು ಮತ್ತು ಹೊರಾಟ ಸಮಿತಿ ಪ್ರಮುಖರು ಇರಲಿದ್ದಾರೆ. ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿ ಅಮಿತ್ ಷಾ ಭೇಟಿಗೆ ಸಮಯ ನಿಗದಿಪಡಿಸುವಂತೆ ಕೊರಲಾಗುವುದು ಎಂದು ಬಸವರಾಜ ಕಳಸ ತಿಳಿಸಿದರು.

    ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಪ್ರಮುಖರಾದ ಲಕ್ಷ್ಮೀನಾರಾಯಣ ಶಟ್ಟಿ, ಮಹಾಂತೇಶ ಮಸ್ಕಿ, ಬಸವಲಿಂಗ ಶಟ್ಟಿ, ನಾಗರಾಜ ಕಂಬಾರ, ಬಸನಗೌಡ ಪೊಲೀಸ್ ಪಾಟೀಲ, ಶಿವಕುಮಾರ ಎನ್., ದಯಾನಂದ ಜೋಗಿನ್, ಆರ್.ಕೆ.ನಾಯಕ, ಆದಯ್ಯಸ್ವಾಮಿ ಕ್ಯಾತ್ನಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts