More

    ಸಿಬಿಎಸ್​ಇ 10 ಹಾಗೂ 12ನೇ ತರಗತಿ ಬಾಕಿ ಪರೀಕ್ಷೆಗಳು ಜುಲೈ 1ರಿಂದ ಆರಂಭ

    ನವದೆಹಲಿ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಸಿಬಿಎಸ್​ಇ ಪರೀಕ್ಷೆಗಳನ್ನು ಜುಲೈ ಒಂದರಿಂದ ಆರಂಭಿಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.

    ಸಿಬಿಎಸ್​ಇಯ 10 ನೇ ತರಗತಿ ಹಾಗೂ 12ನೇ ತರಗತಿಗಳ (ಮಂಡಳಿ) ಪರೀಕ್ಷೆ ಜುಲೈ 1ರಿಂದ ಆರಂಭವಾಗಿ ಜುಲೈ 15ಕ್ಕೆ ಅಂತ್ಯಗೊಳ್ಳಲಿವೆ ಎಂದು ಅವರು ಮಾಹಿತಿ ನೀಡಿದರು.

    ಇದನ್ನೂ ಓದಿ ದೇವಸ್ಥಾನದಲ್ಲಿ ಮದುವೆ ಮುಗಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿತು ಆ ಜೋಡಿ!

    ಕರೊನಾ ಹಾವಳಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಾಕಿ ಇದ್ದ ಪರೀಕ್ಷೆಗಳನ್ನು ಮುಂದೂಡಿತ್ತು. ಇದರಿಂದ ವಿದ್ಯಾರ್ಥಿಗಳು ತೀವ್ರ ನಿರಾಸೆಗೆ ಒಳಗಾಗಿದ್ದರು. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಪರೀಕ್ಷೆ ನಡೆಸುವುದಾಗಿ ಘೋಷಿಸಿರುವುದು ವಿದ್ಯಾರ್ಥಿಗಳಿಗೆ ಕೊಂಚ ನೆಮ್ಮದಿ ತಂದಿದೆ.

    ವೇಳಾ ಪಟ್ಟಿಯ ಸಂಪೂರ್ಣ ವಿವರಗಳನ್ನು ಸಚಿವಾಲಯ ಶೀಘ್ರದಲ್ಲೇ ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್​)

    VIDEO| ಕಲಬುರಗಿಯಲ್ಲಿ ಇಳೆ ತಂಪಾಗಿಸಿದ ಮಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts