More

    ಕರೊನಾ ನಿವಾರಣೆಗೆ ಪಣತೊಟ್ಟ ಸರ್ಕಾರ… ಲಸಿಕೆ ನಿರಾಕರಿಸಿದವರಿಗೆ ಶಿಕ್ಷೆ !

    ಜಕಾರ್ತಾ: ಕರೊನಾ ಲಸಿಕೆಯನ್ನು ಆದಷ್ಟು ಬೇಗ ಎಲ್ಲರಿಗೂ ಮುಟ್ಟಿಸಿ ಕರೊನಾ ಸೋಂಕಿನ ಆತಂಕವನ್ನು ನಿವಾರಿಸಲು ಜಗತ್ತಿನ ಬಹುತೇಕ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಆದರೆ ಲಸಿಕೆ ಪಡೆಯುವ ಬಗ್ಗೆ ಇನ್ನೂ ಹಲವಾರು ನಾಗರೀಕರಲ್ಲಿ ಅನುಮಾನಗಳು ಮುಂದುವರೆದಿವೆ. ಹೀಗಿರುವಾಗ, ಸರ್ಕಾರಿ ಲಸಿಕಾ ಕಾರ್ಯಕ್ರಮದ ಪ್ರಕಾರ ಲಸಿಕೆ ತೆಗೆದುಕೊಳ್ಳದವರನ್ನು ಶಿಕ್ಷಿಸಲು ಇಂಡೋನೇಷಿಯಾ ಸರ್ಕಾರ ಮುಂದಾಗಿದೆ.

    ಇಂಡೋನೇಷಿಯಾದ ಅಧ್ಯಕ್ಷ ಜೋಕೋ ವಿಡೊಡೊ ಸರ್ಕಾರವು ತನ್ನ ಸಾರ್ವಜನಿಕ ಕರೊನಾ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು, ಕರೊನಾ ಲಸಿಕೆಯನ್ನು ಕಡ್ಡಾಯಗೊಳಿಸಿದೆ. ಹೀಗಾಗಿ, ಇಲ್ಲಿ ಲಸಿಕೆ ಪಡೆಯಲು ನಿರಾಕರಿಸುವವರು ದೊಡ್ಡ ಮೊತ್ತದ ದಂಡ ಕಟ್ಟಬೇಕಾಗಬಹುದು ಎಂದು ಬ್ಲೂಮ್​ಬರ್ಗ್​ ವರದಿ ಮಾಡಿದೆ.

    ಇದನ್ನೂ ಓದಿ: ಭಾರತದಲ್ಲಿ ಕರೊನಾ ಇಳಿಮುಖ ಆಗುತ್ತಿರುವ ವೇಗ ನೋಡಿ ವಿಜ್ಞಾನಿಗಳಿಗೂ ಅಚ್ಚರಿ!

    ಸೆಪ್ಟೆಂಬರ್​ನಲ್ಲಿ ನಡೆದ ಸಮೀಕ್ಷೆಯ ಪ್ರಕಾರ ಶೇ. 65 ರಷ್ಟು ಇಂಡೋನೇಷಿಯನ್ನರು ಲಸಿಕೆ ಪಡೆಯಲು ಬಯಸಿದ್ದಾರೆ. ಆದರೆ ಉಳಿದ ಜನರು, ಆರೋಗ್ಯ ಸಂಬಂಧೀ ಕಾಳಜಿ, ಹಲಾಲ್ ಬಗ್ಗೆ ಅನುಮಾನ, ವೆಚ್ಚದ ಬಗ್ಗೆ ಆತಂಕ ವ್ಯಕ್ತಪಡಿಸಿ, ಅನುಮಾನದಲ್ಲಿದ್ದಾರೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಇಂಡೋನೇಷಿಯಾ ಸರ್ಕಾರ, ಚೀನಾ ನಿರ್ಮಿತ ಸಿನೊವಾಕ್ ಬಯೋಟೆಕ್​ನ ಲಸಿಕೆಯನ್ನು ಉಚಿತವಾಗಿ ನೀಡುತ್ತಿದೆ.

    2021 ರ ಅಂತ್ಯದೊಳಗೆ 180 ಮಿಲಿಯನ್ ಜನರಿಗೆ ಕರೊನಾ ಲಸಿಕೆ ತಲುಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಆದರೆ ಈವರೆಗೆ (ಫೆಬ್ರವರಿ 18), ಕೇವಲ 1.15 ಮಿಲಿಯನ್ ಜನರು ಮಾತ್ರ ಕರೊನಾ ಲಸಿಕೆಯ ಮೊದಲ ಶಾಟ್ಅನ್ನು ಪಡೆದಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ಬಿಸಿನೆಸ್​ಗಳಿಗೂ ಲಸಿಕೆಯನ್ನು ಫಂಡ್ ಮಾಡಲು ಮತ್ತು ವಿತರಿಸಲು ಅವಕಾಶ ನೀಡಲು ಸರ್ಕಾರ ಮುಂದಾಗಿದೆ.

    ಇದನ್ನೂ ಓದಿ: ಪಾಕಿಸ್ತಾನದ ಜನರಿಗೂ ತಲುಪಲಿದೆ ಭಾರತದ ಕರೊನಾ ಲಸಿಕೆ

    ಹೀಗಿರುವಾಗ, ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿ ಸಾಮಾಜಿಕ ಸಹಾಯ ಯೋಜನೆಗಳನ್ನು ವಿಳಂಬಗೊಳಿಸುವವರ ವಿರುದ್ಧ ಇಂಡೋನೇಷಿಯಾ ಸರ್ಕಾರ ಕಠಿಣ ಕ್ರಮಕ್ಕೆ ಅವಕಾಶ ನೀಡಿದೆ. ಆದಾಗ್ಯೂ ಈ ಬಗ್ಗೆ ಅಂತಿಮ ತೀರ್ಮಾನವನ್ನು ಸ್ಥಳೀಯ ಸರ್ಕಾರಗಳ ಮೇಲೇ ಬಿಟ್ಟಿದೆ ಎನ್ನಲಾಗಿದೆ.(ಏಜೆನ್ಸೀಸ್)

    ಕರೊನಾ ಲಸಿಕೆ ಹಾಕಿಸಿಕೊಳ್ಳಲು ಆರು ಮೈಲಿ ಹಿಮದ ರಾಶಿಯಲ್ಲಿ ನಡೆದು ಬಂದ 90ರ ವೃದ್ಧೆ!

    ಬಾಲಿವುಡ್ ನಟನ ಆತ್ಮಹತ್ಯೆ ಪ್ರಕರಣ : ಹೆಂಡತಿ, ಅತ್ತೆ ನೀಡಿದ್ದರೇ ಕಿರುಕುಳ ?

    ಮತ್ತೆ ಹಬ್ಬುತ್ತಿದೆ ಕರೊನಾ… ಮತ್ತೊಬ್ಬ ಸಚಿವರಲ್ಲಿ ಕರೊನಾ ಸೋಂಕು ಪತ್ತೆ !

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts