More

    ಕರೊನಾ ಲಸಿಕೆ ಹಾಕಿಸಿಕೊಳ್ಳಲು ಆರು ಮೈಲಿ ಹಿಮದ ರಾಶಿಯಲ್ಲಿ ನಡೆದು ಬಂದ 90ರ ವೃದ್ಧೆ!

    ಸೀಟ್ಲೆ (ಪಾರ್ಕ್‌ಲ್ಯಾಂಡ್‌): ಕರೊನಾ ಲಸಿಕೆ ಹಾಕಿಸಿಕೊಳ್ಳಲು ಹಲವರು ಹಿಂದೇಟು ಹಾಕುತ್ತಿರುವ ಘಟನೆಗಳು ವರದಿಯಾಗುತ್ತಲೇ ಇವೆ. ಸುಲಭದಲ್ಲಿ ಲಸಿಕೆ ಮನೆಬಾಗಿಲ ಬಳಿ ಬಂದರೂ ಹಾಕಿಸಿಕೊಳ್ಳದೇ ಇರುವವರು ಒಂದೆಡೆಯಾದರೆ, ಜೀವದಾಯಿನಿಯಾಗಿರುವ ಈ ಲಸಿಕೆಯನ್ನು ಹಾಕಿಸಿಕೊಳ್ಳಲು 90ರ ವೃದ್ಧೆಯೊಬ್ಬರು ಮಾಡಿರುವ ಸಾಹಸ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್‌ ವೈರಲ್‌ ಆಗಿದೆ.

    ಫ್ರಾನ್‌ ಗೋಲ್ಡ್‌ಮನ್ ಹೆಸರಿನ ಈ ವೃದ್ಧೆ ಆರು ಮೈಲಿಯಷ್ಟು ದೂರ ನಡೆದು ಲಸಿಕೆ ಹಾಕಿಸಿಕೊಂಡಿದ್ದಾರೆ. ಇವರು ಇಷ್ಟು ದೂರ ನಡೆದು ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದರೆ ಇವರ ಸುದ್ಧಿ ಇಷ್ಟೊಂದು ಪ್ರಸಿದ್ಧಿಗೆ ಬರುತ್ತಿರಲಿಲ್ಲ. ಬದಲಿಗೆ ಶುಕ್ರವಾರ ಹಾಗೂ ಶನಿವಾರ ಭಾರೀ ಶೀತಗಾಳಿಯ ಪರಿಣಾಮ ನಗರದ ಬೀದಿಗಳೆಲ್ಲಾ ಹಿಮಾವೃತಗೊಂಡಿದ್ದವು. ನಡೆದಾಡಲು ಅಷ್ಟೇ ಅಲ್ಲ, ಒಂದು ಹೆಜ್ಜೆ ಮುಂದೆ ಇಡಲು ಆಗದಂಥ ಪರಿಸ್ಥಿತಿ ಇತ್ತು. ಇದರ ನಡುವೆಯೂ ಇಷ್ಟು ದೂರ ನಡೆದು, ಅದೂ 90ರ ವಯಸ್ಸಿನಲ್ಲಿ ನಡೆದು ಬಂದಿರುವುದು ಎಲ್ಲರ ಹುಬ್ಬೇರಿಸಿದೆ.

    ಮೊದಲೇ ಅಪಾಯಿಂಟ್‌ಮೆಂಟ್ ಪಡೆದಿದ್ದ ಗೋಲ್ಡ್‌ಮನ್, ಕೊನೆಗೂ ಇಂಜೆಕ್ಷನ್ ಪಡೆದುಕೊಂಡಿದ್ದಾರೆ. ಬೆಚ್ಚನೆಯ ಉಡುಪುಗಳನ್ನು ಧರಿಸಿದ ಗೋಲ್ಡ್‌ಮನ್, ಹಿಮಾವೃತ ಬೀದಿಗಳ ನಡುವೆಯೇ ಆರು ಮೈಲು ದೂರ ನಡೆದುಕೊಂಡು ಹೋಗಿ, ಅಪಾಯಿಂಟ್‌ಮೆಂಟ್ ಸಮಯಕ್ಕಿಂತ ಕೇವಲ 5 ನಿಮಿಷ ತಡವಾಗಿ ಜಾಗ ತಲುಪಿ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಒಂದೆಡೆ ಹೆತ್ತಾಕೆ… ಇನ್ನೊಂದೆಡೆ ಜೀವದ ಗೆಳತಿ… ಇಬ್ಬರನ್ನೂ ಒಟ್ಟಿಗೆ ಆಯ್ಕೆ ಮಾಡುವಂತಿಲ್ಲ: ಏನು ಮಾಡಲಿ?

    ಟೂಲ್‌ಕಿಟ್‌ ಷಡ್ಯಂತ್ರ ಬಯಲಾಗುತ್ತಿದ್ದಂತೆಯೇ ಕೋರ್ಟ್‌ಗೆ ದಿಶಾ ದೌಡು: ದಾಖಲೆ ಬಹಿರಂಗ ಬೇಡ ಎಂದು ಕೋರಿಕೆ!

    ನಿಜವಾಗ್ಲೂ ಲವ್‌ ಮಾಡೋದೇ ಆದ್ರೆ ಒಂಟೆಮರಿ ಗಿಫ್ಟ್‌ ಕೊಡು ಅಂದ್ಲು ಪ್ರೇಯಸಿ… ಅಷ್ಟೇ… ಪ್ರೇಮಿಗಳೀಗ ಜೈಲಲ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts