More

    ಲೈವ್ ಫುಟ್ಬಾಲ್ ಪಂದ್ಯದ ವೇಳೆ ತಲೆಯ ಮೇಲೆ ಸಿಡಿಲು ಬಡಿದು ಮೈದಾನದಲ್ಲೇ ಸಾವನ್ನಪ್ಪಿದ ಆಟಗಾರ; ಹೃದಯ ವಿದ್ರಾವಕ ವಿಡಿಯೋ ವೈರಲ್

    ನವದೆಹಲಿ: ಎಂಥವರು ಒಂದು ಕ್ಷಣ ಬೆಚ್ಚಿಬೀಳುವಂತಹ ಘಟನೆಯೊಂದು ಇಂಡೋನೇಷ್ಯಾದಲ್ಲಿ ನಡೆದಿದೆ. ಕಳೆದ ಶನಿವಾರ ಪಶ್ಚಿಮ ಜಾವಾದ ಸಿಲಿವಾಂಗಿ ಸ್ಟೇಡಿಯಂನಲ್ಲಿ ಕೆಟ್ಟ ಹವಾಮಾನದ ನಡುವೆ ಫುಟ್ಬಾಲ್ ಪಂದ್ಯ ನಡೆಯುತ್ತಿತ್ತು. ಈ ಪಂದ್ಯದ ವೇಳೆಯೇ ಆಟಗಾರನ ತಲೆಗೆ ಸಿಡಿಲು ಬಡಿದು ಮೈದಾನದಲ್ಲಿ ಬಿದ್ದಿದ್ದಾನೆ. ಈ ಹಠಾತ್ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ತಂಡದ ಸಹ ಆಟಗಾರರು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ. ಈ ಸಂಪೂರ್ಣ ದೃಶ್ಯ ಕ್ರೀಡಾಂಗಣದಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸಾವನ್ನಪ್ಪಿದ ವ್ಯಕ್ತಿ ಎಫ್‌ಸಿ ಬಂಡುಂಗ್. ಈ ವಿಡಿಯೋದಲ್ಲಿ ಫುಟ್‌ಬಾಲ್ ಪಂದ್ಯ ನಡೆಯುತ್ತಿದ್ದು ಮೈದಾನದ ಒಂದು ಭಾಗದಲ್ಲಿ ನಿಂತಿದ್ದ ಆಟಗಾರನ ಮೇಲೆ ಏಕಾಏಕಿ ಪ್ರಖರ ಬೆಳಕಿನೊಂದಿಗೆ ಸಿಡಿಲು ಬಿದ್ದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ವೇಳೆ ಬೆಂಕಿ ಕೂಡ ಹೊತ್ತಿಕೊಂಡಿದೆ.

    ವಿಡಿಯೋದಲ್ಲಿ ಏನಿದೆ? 
    ಸಿಡಿಲು ಬಡಿದ ತಕ್ಷಣ ಆಟಗಾರ ತಕ್ಷಣವೇ ನೆಲಕ್ಕೆ ಬೀಳುತ್ತಾನೆ. ಇನ್ನು ಉಳಿದ ಆಟಗಾರರು ತಮ್ಮನ್ನು ರಕ್ಷಿಸಿಕೊಳ್ಳಲು ನೆಲದ ಮೇಲೆ ಮಲಗಿದರೆ ಕೆಲವರು ಹೊರಗೆ ಓಡಲು ಪ್ರಾರಂಭಿಸುತ್ತಾರೆ. ನಿಮಿಷಗಳ ನಂತರ, ಎಲ್ಲವೂ ನಿಂತ ತಕ್ಷಣ, ಎಲ್ಲಾ ಆಟಗಾರರು ಸಿಡಿಲಿನಿಂದ ಪ್ರಜ್ಞಾಹೀನರಾಗಿದ್ದ ತಮ್ಮ ಸಹ ಆಟಗಾರನ ಕಡೆಗೆ ಓಡಿ ಅವನನ್ನು ಎಬ್ಬಿಸಲು ಪ್ರಯತ್ನಿಸುತ್ತಾರೆ. ಆ ಸಮಯದಲ್ಲೂ ಅವನು ಉಸಿರಾಡುತ್ತಿರುತ್ತಾನೆ. ಕೂಡಲೇ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತಲುಪಿದ ಮೇಲೆ ವೈದ್ಯರು ಆಟಗಾರ ಮೃತಪಟ್ಟಿರುವುದಾಗಿ ಘೋಷಿಸುತ್ತಾರೆ.

    ಇದು ಎರಡನೇ ಘಟನೆ 
    ಇಂಡೋನೇಷ್ಯಾದ ಫುಟ್ಬಾಲ್ ಆಟಗಾರನೊಬ್ಬನಿಗೆ ಸಿಡಿಲು ಬಡಿಯುತ್ತಿರುವುದು ಕಳೆದ 12 ತಿಂಗಳಲ್ಲಿ ಇದು ಎರಡನೇ ಬಾರಿ. 2023 ರಲ್ಲಿ ಸೊರಾಟಿನ್ ಯು-13 ಕಪ್ ಸಮಯದಲ್ಲಿ ಪೂರ್ವ ಜಾವಾದ ಬೊಜೊಂಗೊರೊದಲ್ಲಿ ಫುಟ್ಬಾಲ್ ಆಟಗಾರನಿಗೆ ಸಿಡಿಲು ಬಡಿದಿತ್ತು. ಹೃದಯ ಸ್ತಂಭನದಿಂದ ಬಳಲುತ್ತಿದ್ದ ಆಟಗಾರನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. 20 ನಿಮಿಷಗಳ ಪ್ರಯತ್ನದ ನಂತರ ವೈದ್ಯರು ಅವರನ್ನು ಪ್ರಜ್ಞೆಗೆ ತರುವಲ್ಲಿ ಯಶಸ್ವಿಯಾಗಿದ್ದರು. ಮೈದಾನದಲ್ಲಿದ್ದ ಇತರ ಆರು ಆಟಗಾರರು ಕೂಡ ಸಿಡಿಲು ಬಡಿದು ಆಸ್ಪತ್ರೆಯಲ್ಲಿ ಕಾಲ ಕಳೆಯಬೇಕಾಯಿತು.

    ಮತ್ತೊಂದು ಹೊಡೆತ…ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ನಿರ್ದೇಶಕ ರಾಜೀನಾಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts