More

    ಪೇಜಾವರಶ್ರೀ-ಆಡ್ವಾಣಿ ಭೇಟಿ; ರಾಮಮಂದಿರ ನಿರ್ಮಾಣ ಕುರಿತು ವಿಚಾರ ವಿನಿಮಯ

    ನವದೆಹಲಿ: ಪೇಜಾವರ ಮಠದ ಸ್ವಾಮೀಜಿ ಹಾಗೂ ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್​​ನ ವಿಶ್ವಸ್ಥರೂ ಆಗಿರುವ ಶ್ರೀವಿಶ್ವಪ್ರಸನ್ನ ತೀರ್ಥರು ಉತ್ತರ ಭಾರತ ಪ್ರವಾಸದಲ್ಲಿದ್ದು, ನವದೆಹಲಿಯಲ್ಲಿ ಬಿಜೆಪಿ ಹಿರಿಯ ನಾಯಕ ಮಾಜಿ ಉಪ ಪ್ರಧಾನಿ ಎಲ್​.ಕೆ.ಆಡ್ವಾಣಿ ಅವರನ್ನು ಭೇಟಿಯಾಗಿದ್ದಾರೆ.

    ಇಂದು ಎಲ್​.ಕೆ.ಆಡ್ವಾಣಿ ಅವರನ್ನು ಅವರ ಮನೆಯಲ್ಲಿ ಭೇಟಿಯಾದ ಸ್ವಾಮೀಜಿ, ಶ್ರೀರಾಮಮಂದಿರ ನಿರ್ಮಾಣದ ಪ್ರಗತಿ ಕುರಿತು ಮಾಹಿತಿ ಹಂಚಿಕೊಂಡರು. ಮಾತ್ರವಲ್ಲದೆ, ಶ್ರೀರಾಮಜನ್ಮಭೂಮಿ ಕುರಿತ ಹೋರಾಟದಲ್ಲಿ ಆಡ್ವಾಣಿಯವರ ಮಹತ್ವದ ಪಾತ್ರವನ್ನು ಸ್ಮರಿಸಿಕೊಂಡು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಶ್ರೀವಿಶ್ವೇಶ ತೀರ್ಥ ಸ್ವಾಮೀಜಿಯವರಿಂದ ಸಿಕ್ಕ ಸ್ಫೂರ್ತಿ, ಅವರು ನೀಡಿದ್ದ ಮಾರ್ಗದರ್ಶನ, ಅವರೊಂದಿಗಿನ ಒಡನಾಟ, ಉಡುಪಿ ಜತೆಗಿನ ನಂಟನ್ನು ಅಡ್ವಾಣಿಯವರು ಸ್ಮರಿಸಿಕೊಂಡರು.

    ಈ ಭೇಟಿಯ ಸಂದರ್ಭದಲ್ಲಿ ಶ್ರೀಕೃಷ್ಣನ ಪ್ರಸಾದ, ಸ್ಮರಣಿಕೆ, ಫಲಮಂತ್ರಾಕ್ಷತೆ ನೀಡಿ ಸ್ವಾಮೀಜಿಯವರು ಹರಸಿದರು. ಈ ವೇಳೆ ಆಡ್ವಾಣಿ ಅವರ ಪುತ್ರಿ ಪ್ರತಿಭಾ ಆಡ್ವಾಣಿ ಕೂಡ ಉಪಸ್ಥಿತರಿದ್ದರು. ಅಲ್ಲದೆ ಸೋಮವಾರ ಬಿಜೆಪಿ ಹಿರಿಯ ನಾಯಕ ಡಾ. ಮುರಳಿಮನೋಹರ್ ಜೋಶಿ ಅವರನ್ನೂ ಭೇಟಿಯಾಗಿ ಶ್ರೀವಿಶ್ವಪ್ರಸನ್ನ ತೀರ್ಥರು ಹರಸಿದ್ದಲ್ಲದೆ, ಶ್ರೀರಾಮಮಂದಿರ ನಿರ್ಮಾಣ ಕುರಿತು ವಿಚಾರ ವಿನಿಮಯ ನಡೆಸಿದರು.

    ಪೇಜಾವರಶ್ರೀ-ಆಡ್ವಾಣಿ ಭೇಟಿ; ರಾಮಮಂದಿರ ನಿರ್ಮಾಣ ಕುರಿತು ವಿಚಾರ ವಿನಿಮಯ

    ಉತ್ತರಪ್ರದೇಶದ ಮಥುರಾ ಸಮೀಪದ ಬರ್ಸಾನಾದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀಗೋವಿಂದ ಧಾಮಕ್ಕೆ ಪೇಜಾವರ ಶ್ರೀಗಳು ಮಂಗಳವಾರ ಶಿಲಾನ್ಯಾಸ ನಡೆಸಿದ್ದರು. ಅಲ್ಲದೆ ಉಜ್ಜಯಿನಿ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲೂ ಅವರು ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದರು.

    ಪೇಜಾವರಶ್ರೀ-ಆಡ್ವಾಣಿ ಭೇಟಿ; ರಾಮಮಂದಿರ ನಿರ್ಮಾಣ ಕುರಿತು ವಿಚಾರ ವಿನಿಮಯ ಪೇಜಾವರಶ್ರೀ-ಆಡ್ವಾಣಿ ಭೇಟಿ; ರಾಮಮಂದಿರ ನಿರ್ಮಾಣ ಕುರಿತು ವಿಚಾರ ವಿನಿಮಯ

    ‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts