More

    ಉಡುಪಿ ಕರಾವಳಿ ಬೈಪಾಸ್​ ಮೇಲ್ಸೇತುವೆಗೆ ಪೇಜಾವರ ಶ್ರೀಗಳ ಹೆಸರು !; ಬೋರ್ಡ್ ನೋಡಿ ಜನರಲ್ಲಿ ಅಚ್ಚರಿ

    ಮಂಗಳೂರು: ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ಇಡಲು ಮುಖ್ಯಮಂತ್ರಿ ಯಡಿಯೂರಪ್ಪನವರು ನಿರ್ಧಾರ ಮಾಡಿದ್ದರು. ಆದರೆ ಅದೆಷ್ಟರಮಟ್ಟಿಗೆ ವಿವಾದ ಸೃಷ್ಟಿಸಿತ್ತು ಎಂಬುದು ರಾಜ್ಯಕ್ಕೇ ಗೊತ್ತಿರುವ ವಿಚಾರ. ಕಾಂಗ್ರೆಸ್ ನಾಯಕರಂತೂ ಇದಕ್ಕೆ ಸಿಕ್ಕಾಪಟೆ ವಿರೋಧ ಮಾಡಿದ್ದರು. ವಿರೋಧಕ್ಕೆ ಸೋತ ಮುಖ್ಯಮಂತ್ರಿ ಬಳಿಕ ಆ ನಿರ್ಧಾರದಿಂದಲೇ ಹಿಂದೆ ಸರಿದಿದ್ದಾರೆ.

    ಈ ಎಲ್ಲ ವಿದ್ಯಮಾನಗಳ ನಡುವೆ ಉಡುಪಿಯಲ್ಲಿ ಒಂದು ಅಚ್ಚರಿಯ ಬೆಳವಣಿಗೆ ನಡೆದಿದೆ. ಇಲ್ಲಿನ ಕರಾವಳಿ ಬೈಪಾಸ್​ ಮೇಲ್ಸೇತುವೆಗೆ ಪೇಜಾವರ ಶ್ರೀಗಳ ಹೆಸರನ್ನು ನಾಮಕರಣ ಮಾಡಲಾಗಿದೆ. ಪೇಜಾವರ ಶ್ರೀ ವಿಶ್ವೇಶತೀರ್ಥ ಮೇಲ್ಸೇತುವೆ ಎಂಬ ಬೋರ್ಡ್​ ಹಾಕಲಾಗಿದೆ. ಆದರೆ ಇದನ್ನು ಇಟ್ಟವರ್ಯಾರು ಎಂಬುದು ಗೊತ್ತಾಗಿಲ್ಲ. ಇದನ್ನೂ ಓದಿ: ವಿಜಯಪುರದಲ್ಲಿ ಮೇ 27ರಂದು ಮೃತಪಟ್ಟಿದ್ದ ವೃದ್ಧೆಯಲ್ಲಿ ಕೊವಿಡ್​-19 ಪಾಸಿಟಿವ್​ ದೃಢ…

    ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಕರಾವಳಿ ಬೈಪಾಸ್​ ಮೇಲ್ಸೇತುವೆಯಿದ್ದು, ಪೇಜಾವರ ಶ್ರೀಗಳ ಹೆಸರಿರುವ ಬೋರ್ಡ್​ ಒಮ್ಮೆಲೇ ಪ್ರತ್ಯಕ್ಷವಾಗಿದ್ದು ಹಲವರಲ್ಲಿ ಅಚ್ಚರಿ ಮೂಡಿಸಿದೆ. ಮಂಗಳೂರಿನಲ್ಲಿ ರಾಣಿ ಅಬ್ಬಕ್ಕ, ಕೋಟಿ ಚೆನ್ನಯ ಎಂಬ ಹೆಸರುಗಳನ್ನು ಈಗಾಗಲೇ ಮೇಲ್ಸೇತುವೆಗಳಿಗೆ ಇಡಲಾಗಿದೆ.

    ವೀರ ಸಾವರ್ಕರ್ ನಾಮಕರಣದ ವಿವಾದ ಎದ್ದಾಗ ಕಾಂಗ್ರೆಸ್ಸಿಗರು, ಸೇತುವೆಗಳಿಗೆ ಸ್ಥಳೀಯ ಹೋರಾಟಗಾರರ ಹೆಸರನ್ನೇ ಇಡಬೇಕು ಎಂದು ಹೇಳಿದ್ದರು. ಈಗ ಏಕಾಏಕಿ ಪೇಜಾವರ ಶ್ರೀಗಳ ಹೆಸರಿನ ಬೋರ್ಡ್​ ಕಾಣಿಸಿಕೊಂಡಿದೆ. ಇದು ಜಿಲ್ಲೆಯ ಜನರಲ್ಲಿ ಅಚ್ಚರಿ ಮೂಡಿಸಿದೆ. (ದಿಗ್ವಿಜಯ ನ್ಯೂಸ್​) ಇದನ್ನೂ ಓದಿ: ಉಡುಪಿಯಲ್ಲೇ ಇಂದು ಗರಿಷ್ಠ ಕೇಸ್: ರಾಜ್ಯದಲ್ಲಿ ಒಟ್ಟು 378 ಕೋವಿಡ್ ಕೇಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts