More

    ನೆಮ್ಮದಿಯ ಬದುಕಿಗಾಗಿ ವಚನ ಸಾರ ಅರಿಯಿರಿ

    ಸಿಂಧನೂರು: ನೆಮ್ಮದಿ ಬದುಕಿಗಾಗಿ ವಚನಗಳ ಸಾರ ಅರಿಯಬೇಕು. ಅದರಲ್ಲಿರುವ ಬದುಕಿನ ಮೌಲ್ಯಗಳು ಜೀವನಕ್ಕೆ ಪೂರಕವಾಗಲಿವೆಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಡಾ.ಬಸವಪ್ರಭು ಬೆಟ್ಟದೂರು ಹೇಳಿದರು.

    ಇದನ್ನೂ ಓದಿ: http://ನೆಮ್ಮದಿಯ ಬದುಕಿಗಾಗಿ ವಚನ ಸಾರ ಅರಿಯಿರಿ

    ನಗರದ ಬಸವ ಚಾರಿಟೇಬಲ್ ಟ್ರಸ್ಟ್‌ನಲ್ಲಿ ಬಸವಕೇಂದ್ರ ಹಾಗೂ ಬಸವ ಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ವಚನ ಶ್ರವಣ ಕಾರ್ಯಕ್ರಮದಲ್ಲಿ ಬಸವಣ್ಣ ಮತ್ತು ಲಿಂಗಾಯತ ಧರ್ಮದ ಕುರಿತು ವಿಶೇಷ ಉಪನ್ಯಾಸ ನೀಡಿದರು.

    ಬಸವಣ್ಣನವರು ಯಾವುದೇ ಧರ್ಮ ಸ್ಥಾಪಿಸಲಿಲ್ಲ. ಅಸಮಾನತೆ, ಶೋಷಣೆ ವಿರುದ್ದ ಧ್ವನಿ ಎತ್ತಿ, ಸಮಾನತೆಯ ಸಮಾಜ ಕಟ್ಟಿ ಬದುಕಿನ ಮಾರ್ಗ ಸೃಷ್ಠಿಸಿದರು. ಬಸವಾದಿ ಶರಣರು ಕಾಯಕದಲ್ಲಿಯೇ ಕೈಲಾಸ ಕಂಡವರು.

    ಜಾತೀಯತೆ ಹೋಗಲಾಡಿಸಲು ಲಿಂಗ ಕೊಟ್ಟರು. ಲಿಂಗ ಚೈತನ್ಯದ ಪ್ರತೀಕ. ಯಾರು ಬೇಕಾದರೂ ಲಿಂಗಧಾರಣೆ ಮಾಡಬಹುದು. ಬಸವಾದಿ ಶರಣರ ವಚನಗಳು ಅನೇಕ ಭಾಷೆಗೆ ಭಾಷಾಂತರ ಗೊಂಡಿವೆ.

    ಅವರ ವಾರಸುದಾರರಾದ ನಾವೇ ಅವುಗಳನ್ನು ಓದುತ್ತಿಲ್ಲ, ಆಚರಿಸುತ್ತಿಲ್ಲ ಎಂದರು. ಆದಪ್ಪ ಮೇಣದಾಳ, ಕರೇಗೌಡ ಕುರುಕುಂದಿ, ನಾಗಭೂಷಣ ನವಲಿ, ನಿಜಗುಣ, ಸುಮಂಗಲಾ ಶಾಂತಪ್ಪ ಚಿಂಚರಿಕಿ, ವೀರಭದ್ರಗೌಡ ಅಮರಾಪುರ, ನಾರಾಯಣಪ್ಪ ಮಾಡಸಿರವಾರ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts