ಕನ್ನಡದ ಪವರ್​​ ಸ್ಟಾರ್​ಗಾಗಿ ತೆಲುಗಿನ ಪವರ್ ಸ್ಟಾರ್ ಅಭಿಮಾನಿಗಳಿಂದ ಮಹತ್ಕಾರ್ಯ: ಚಿಂತಾಮಣಿಯಲ್ಲಾಗಲಿದೆ ಅಭಿಮಾನದ ಅನಾವರಣ!

blank

ಚಿಕ್ಕಬಳ್ಳಾಪುರ: ಸಿನಿ ಪ್ರೇಕ್ಷಕರಿಗೆ ‘ಪವರ್ ಸ್ಟಾರ್’ ಎಂದರೆ ಇಡೀ ಸೌತ್ ಚಿತ್ರರಂಗದಲ್ಲಿ ಎರಡು ಹೆಸರುಗಳು ಥಟ್ ಅಂತ ನೆನಪಾಗುತ್ತವೆ. ಅದುವೇ ಅಪ್ಪು ಮತ್ತು ನಟ ಪವನ್ ಕಲ್ಯಾಣ್. ಕನ್ನಡಕ್ಕೆ ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ ಆದರೆ ಮತ್ತೊಂದು ಕಡೆ ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರು ಪವರ್ ಸ್ಟಾರ್. ಇಬ್ಬರಿಗೂ ಇರುವ ಅಭಿಮಾನಿಗಳ ಸಂಖ್ಯೆಯೂ ಅಪಾರವಾದದ್ದು. ಇನ್ನೂ ಅಪ್ಪು ಅಭಿಮಾನಿಗಳು ಪವನ್ ಕಲ್ಯಾಣ್​​ಅವರನ್ನು ಇಷ್ಟ ಪಡುತ್ತಾರೆ. ಅದೇ ರೀತಿ ಪವನ್ ಕಲ್ಯಾಣ್ ಅಭಿಮಾನಿಗಳಿಗೂ ಅಪ್ಪು ಅಂದರೆ ತುಂಬಾನೇ ಪ್ರೀತಿ. ಹಾಗಾಗಿ, ಅಪ್ಪು ನಿಧನದ ನಂತರ ಪವನ್ ಕಲ್ಯಾಣ್ ಅಭಿಮಾನಿಗಳು ಒಂದು ಮಹತ್ತರ ಕೆಲಸಕ್ಕೆ ಕೈ ಹಾಕಿದ್ದಾರೆ.

ಇದನ್ನೂ ಓದಿ: ಪುನೀತ್ ಸಾವಿಗೆ ನಿಜವಾದ ಕಾರಣ ಏನು ಎಂಬುದನ್ನು ಬಿಚ್ಚಿಟ್ಟ ರಾಘವೇಂದ್ರ ರಾಜಕುಮಾರ್

ಅಪ್ಪು ಸಮಾಜ ಸೇವೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ನಿಧನದ ಬಳಿಕವೂ ತಮ್ಮ ತಂದೆಯ ಹಾಗೆಯೇ ಪುನೀತ್ ನೇತ್ರದಾನ ಮಾಡಿ ಎಲ್ಲರಿಗೆ ಮಾದರಿಯಾದರು. ಅವರ ಅಭಿಮಾನಿಗಳು ಸಹ ಅಪ್ಪು ಅವರಂತೆ ನೇತ್ರದಾನ ಮಾಡಿ, ರಕ್ತದಾನ ಮತ್ತು ಹಲವಾರು ಸಾಮಾಜಿಕ ಸೇವೆಯ ಕೆಲಸಗಳು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದೀಗ, ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳು ಸಹ ಅಪ್ಪು ಅವರಿಗೆಂದು ನೇತ್ರದಾನ ಹಾಗೂ ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ. ಹೌದು, ಚಿಕ್ಕಬಳ್ಳಾಪುರದ ಚಿಂತಾಮಣಿಯ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳು ರಕ್ತದಾನ, ನೇತ್ರದಾನಕ್ಕೆ ಮುಂದಾಗಿದ್ದಾರೆ. ಸ್ವಯಂ ಪ್ರೇರಿತವಾಗಿ ಅಭಿಮಾನಿಗಳು ಮಾಡುತ್ತಿರುವ ಈ ಕಾರ್ಯಕ್ರಮಕ್ಕೆ, ಆಯೋಜಕರ ವತಿಯಿಂದ ಎಲ್ಲರೂ ಭಾಗವಹಿಸಲು ವಿನಂತಿಸಲಾಗಿದೆ.

ಇದನ್ನೂ ಓದಿ: ದನ ಕೊಳ್ಳಲು ಹಣವಿಲ್ಲ ಎಂಬ ಚಿಂತೆಯಲ್ಲಿದ್ದವರ ಬ್ಯಾಂಕ್​ ಖಾತೆಗೆ ಬಂತು 2 ಕೋಟಿ ರೂಪಾಯಿ!; ಕಾರಣ ‘ಕೌ ಇನ್​ಸ್ಪೆಕ್ಟರ್’ ಝಾನ್ಸಿ..

ಡಿಸೆಂಬರ್ 6 ರಂದು ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳು ನೇತ್ರದಾನ, ರಕ್ತದಾನ ಶಿಬಿರವನ್ನು ವಿದ್ಯಾ ಗಣಪತಿ ರಂಗಮಂದಿರದಲ್ಲಿ ನಡೆಸಲಿದ್ದಾರೆ. ಡಾ.ರಾಜ್​​ಕುಮಾರ್ ಮತ್ತು ಮೆಗಾ ಸ್ಟಾರ್ ಚಿರಂಜೀವಿ ಕುಟುಂಬದ ನಡುವಿನ ಅನುಬಂಧವನ್ನು ಎಷ್ಟು ವಿವರಿಸಿದರೂ ಕಡಿಮೆಯೇ. 1980ರಿಂದ ಮೆಗಾ ಸ್ಟಾರ್ ಚಿರಂಜೀವಿ, ನಾಗಬಾಬು, ಪವನ್ ಕಲ್ಯಾಣ್ ಅವರಿಗೆ ಡಾ.ರಾಜ್​ಕುಮಾರ್ ಕುಟುಂಬದವರೊಂದಿಗೆ ಉತ್ತಮ ಬಾಂಧವ್ಯ ಇದೆ. ಪವನ್ ಕಲ್ಯಾಣ್​ಗೆಂದು ತಮ್ಮ ‘ಯುವರತ್ನ’ ಸಿನಿಮಾ ತೆಲುಗಿನಲ್ಲಿ ಬಿಡುಗಡೆಯಾದಾಗ ಅಪ್ಪು ಅವರು ತಮ್ಮ ಹೆಸರ ಜೊತೆ ಪವರ್ ಸ್ಟಾರ್ ಎಂಬ ಟೈಟಲ್ ಹಾಕಿಸಿಕೊಂಡಿರಲಿಲ್ಲ.

ಕನ್ನಡದ ಪವರ್​​ ಸ್ಟಾರ್​ಗಾಗಿ ತೆಲುಗಿನ ಪವರ್ ಸ್ಟಾರ್ ಅಭಿಮಾನಿಗಳಿಂದ ಮಹತ್ಕಾರ್ಯ: ಚಿಂತಾಮಣಿಯಲ್ಲಾಗಲಿದೆ ಅಭಿಮಾನದ ಅನಾವರಣ!

ಇದನ್ನೂ ಓದಿ: ಕಚೇರಿಯಲ್ಲೇ ಕಾಮದಾಟ, ಡಾ.ರತ್ನಾಕರ್ ಬಂಧನ; ಮಹಿಳೆಯರನ್ನು ಕರೆದುಕೊಂಡು ರಾಜ್ಯದ ಹಲವೆಡೆಗಷ್ಟೇ ಅಲ್ಲ, ಹೊರಜಿಲ್ಲೆಗೂ ಹೋಗಿದ್ದ..

ಏಕೆಂದರೆ, ತೆಲುಗು ಸಿನಿ ಪ್ರೇಕ್ಷಕರಿಗೆ ಮತ್ತು ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಕೇವಲ ಪವನ್ ಮಾತ್ರ ಪವರ್ ಸ್ಟಾರ್ ಆಗಿರಬೇಕು ಎನ್ನುವುದಕ್ಕೆ. ಅಂದಿನಿಂದ ಇಂದಿನವರೆಗೆ ಇಬ್ಬರೂ ಪವರ್ ಸ್ಟಾರ್​ಗಳ ನಂಟು ಮುಂದುವರಿದಿದೆ. ಅಪ್ಪು ನಿಧನದ ಬಳಿಕ ಪವನ್ ಕಲ್ಯಾಣ್ ಕೂಡ ಒಂದು ಭಾವನಾತ್ಮಕ ಪೋಸ್ಟ್​ನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಂದು ಪುನೀತ್ ರಾಜ್​​ಕುಮಾರ್ ನಟ ಪವನ್ ಕಲ್ಯಾಣ್​ಗೆ ಕೊಟ್ಟ ಗೌರವ, ಇಂದು ಪವನ್ ಕಲ್ಯಾಣ್ ಅಭಿಮಾನಿಗಳು ಅಪ್ಪು ಅವರಿಗೂ ಕೊಟ್ಟಿದ್ದಾರೆ.

ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!

Share This Article

ಕೂಡಲೇ ಇವುಗಳನ್ನು ತಿನ್ನುವುದನ್ನು ನಿಲ್ಲಿಸದಿದ್ರೆ ನಿಮ್ಮ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗೋದು ಗ್ಯಾರಂಟಿ! Sperm Count

Sperm Count : ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದು…

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…