More

    ಮೂಗಿನ ಸಮಸ್ಯೆ ಎಂದು ಬಂದ ಯುವತಿ ಉಸಿರೇ ನಿಲ್ಲಿಸಿದಳು; ರಿಮ್ಸ್ ವೈದ್ಯರ ಯಡವಟ್ಟು..!

    ರಾಯಚೂರು: ಈ ಯುವತಿ ಮೂಗಿನ ಸಮಸ್ಯೆ ಅಂತ ರಾಯಚೂರು ನಗರದ ರಿಮ್ಸ್ ಆಸ್ಪತ್ರೆ ವೈದ್ಯರ ಬಳಿ ಬಂದಿದ್ದಳು. ಆದರೆ ವೈದ್ಯರ ಯಡವಟ್ಟಿಗೆ ಯುವತಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಇದೀಗ ರಿಮ್ಸ್ ಆಸ್ಪತ್ರೆ ಮುಂದೆ ಯುವತಿ ಕುಟುಂಬಸ್ಥರು ಹಾಗೂ ನೂರಾರು ಜನರು ಪ್ರತಿಭಟನೆ ಮಾಡಲು ಪ್ರಾರಂಭಿಸಿದ್ದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ರಾಯಚೂರು ನಗರದ ರಾಜೇಶ್ವರಿ (18) ಎನ್ನುವ ಯುವತಿ ಪ್ರಾಣ ಕಳೆದುಕೊಂಡಿದ್ದು ವೈದ್ಯರ ನಿರ್ಲಕ್ಷದಿಂದ ಯುವತಿ ಸಾವು ಸಂಭವಿಸಿದೆ ಎಂದು ಆರೋಪಿಸಲಾಗುತ್ತಿದೆ. ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ರಿಮ್ಸ್ ಆಸ್ಪತ್ರೆ ಗ್ಲಾಸ್ ಒಡೆದು ಹಾಕಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ವಿಚಿತ್ರ ಎಂದರೆ ಮೃತ ಯುವತಿ ರಾಜೇಶ್ವರಿ, ರಿಮ್ಸ್​ನಲ್ಲಿ ನರ್ಸಿಂಗ್ ಸೀಟ್ ಕೂಡ ಪಡೆದಿದ್ದರು. ರಾಜೇಶ್ವರಿ, ಜನವರಿ 10ಕ್ಕೆ ನರ್ಸಿಂಗ್ ಅಡ್ಮೀಷನ್ ಮಾಡಿಸಬೇಕಿತ್ತು. ಇನ್ನೇನು ಇದೇ ಆಸ್ಪತ್ರೆಯಲ್ಲಿ ಕಲಿಯುತ್ತೇನೆ, ಇಲ್ಲೇ ಚಿಕಿತ್ಸೆ ಪಡೆದರೆ ಆಯಿತು ಎಂದಯ ಈಕೆ ಆಸ್ಪತ್ರೆಗೆ ದಾಖಲಾಗಿದ್ದಳು. ವೈದ್ಯರು ನಾಲ್ಕು ದಿನ ದಾಖಲು ಮಾಡಿಕೊಂಡು ಆಪರೇಷನ್ ಮಾಡಿದ್ದರು. ಆದರೆ ದುರದೃಷ್ಟವಶಾತ್​​ ಆಕೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಸದ್ಯ ವೈದ್ಯ ರಾಜಶೇಖರ್ ಪಾಟೀಲ್ ಮೇಲೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ರಾಜೇಶ್ವರಿ ಕುಟುಂಬಸ್ಥರು ನೇರ ಆರೋಪ ಮಾಡುತ್ತಿದ್ದಾರೆ.

    ಪ್ರತಿಭಟನೆಯಿಂದಾಗಿ ರಿಮ್ಸ್ ಆಸ್ಪತ್ರೆ ಡೀನ್, ಬಸವರಾಜ್ ಪೀರಾಪೂರ ಸ್ಥಳಕ್ಕೆ ಬಂದು ಪೋಷಕರ ‌ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಡೀನ್ ಮಾತಿಗೂ ಕೇರ್ ಮಾಡದೇ ಯುವತಿ ಪೋಷಕರು ನೋವು ಹೊರ ಹಾಕುತ್ತಿದ್ದಾರೆ. ಪೋಷಕರು ಚಿಕಿತ್ಸೆ ನೀಡಿದ ವೈದ್ಯನ ಕರೆಸುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts