More

    2 ದಿನಗಳಲ್ಲಿ 127 ಕೋಟಿ ಗಳಿಕೆ; ಹಳೆಯ ದಾಖಲೆಗಳನ್ನೆಲ್ಲ ಮುರಿದ ‘ಪಠಾಣ್’​

    ಮುಂಬೈ: ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರದ ಬಗ್ಗೆ ಇಡೀ ದೇಶವೇ ಬಹಳ ಕುತೂಹಲದಿಂದ ಎದುರು ನೋಡುತ್ತಿತ್ತು. ಕಾರಣ, ಬಾಲಿವುಡ್​ ಅಷ್ಟೇ, ‘ಕಿಂಗ್​ ಖಾನ್​’ ಶಾರುಖ್​ ಖಾನ್​ ಸಹ ಸತತ ಸೋಲುಗಳಿಂದ ಕಂಗೆಟ್ಟಿದ್ದರು. ಅವರಿಗಷ್ಟೇ ಅಲ್ಲ, ಚಿತ್ರರಂಗಕ್ಕೂ ಒಂದು ದೊಡ್ಡ ಹಿಟ್​ ಬೇಕಿತ್ತು. ಈಗ ಅಂಥದ್ದೊಂದು ಯಶಸ್ಸನ್ನು ‘ಪಠಾಣ್​’ ನೀಡಿದೆ.

    ಇದನ್ನೂ ಓದಿ: ಸುಳ್ಳುಸುದ್ದಿ ಹಬ್ಬಿಸಬೇಡಿ ಎಂದು ವಿನಂತಿ ಮಾಡಿಕೊಂಡ ಸುನೀಲ್​ ಶೆಟ್ಟಿ … ಯಾಕೆ ಗೊತ್ತಾ?

    ‘ಪಠಾಣ್​’ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್​ ಈಗಾಗಲೇ ಜನವರಿ 20ರಂದು ಶುರುವಾಗಿದ್ದು, ಮೊದಲ ದಿನದ ಎರಡು ಲಕ್ಷ ಟಿಕೆಟ್​ಗಳು ಈಗಾಗಲೇ ಮಾರಾಟವಾದ ಸುದ್ದಿ ಇತ್ತು. ಇನ್ನು, ನಂತರದ ಟಿಕೆಟ್​ಗಳಿಗೂ ಸಹ ಒಳ್ಳೆಯ ಬೇಡಿಕೆ ಇದ್ದು, ಸಾಲುಸಾಲು ರಜೆಗಳಿರುವ ಕಾರಣ, ಮೊದಲ ಐದು ದಿನ ಎಲ್ಲ ಕಡೆ ಹೌಸ್​ಫುಲ್​ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.

    ಅಷ್ಟೇ ಅಲ್ಲ, ಬಾಲಿವುಡ್​ ಮಂದಿಯ ಲೆಕ್ಕಾಚಾರದ ಪ್ರಕಾರ, ‘ಪಠಾಣ್​’ ಮೊದಲ ದಿನ ಭಾರತದಲ್ಲಿ 40 ಕೋಟಿ ರೂ. ಗಳಿಕೆ ಮಾಡಬಹುದು ಎಂದು ಹೇಳಲಾಗಿತ್ತು. ಅದನ್ನು ಸುಳ್ಳು ಮಾಡಿದ ಚಿತ್ರವು, ಮೊದಲ ದಿನ 50 ಕೋಟಿ ಪ್ಲಸ್​ ಗಳಿಕೆ ಮಾಡಿದೆ ಎಂಬ ಸುದ್ದಿ ಇದೆ. ಇನ್ನು ಎರಡನೆಯ ದಿನ, ಗಣರಾಜ್ಯೋತ್ಸವದ ಅಂಗವಾಗಿ ರಜೆ ಇದ್ದ ಕಾರಣ, ಬಂಪರ್​ ಕಲೆಕ್ಷನ್​ ಆಗಿದೆ. ಮೂಲಗಳ ಪ್ರಕಾರ, ಎರಡನೆಯ ದಿನ 70 ಪ್ಲಸ್​ ಕೋಟಿ ಗಳಿಕೆ ಆಗಿದೆಯಂತೆ.

    ಅಲ್ಲಿಗೆ ಎರಡು ದಿನಗಳಿಂದ ಸೇರಿ, ‘ಪಠಾಣ್ 127’ ಕೋಟಿ ದುಡಿದಿದ್ದಾನೆ. ಅಲ್ಲಿಗೆ ಈ ಚಿತ್ರವು ಮೊದಲ ಐದು ದಿನದಲ್ಲೇ 200 ಕೋಟಿ ರೂ ಗಳಿಕೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ. ಈ ಗಳಿಕೆ ಬಾಲಿವುಡ್​ನಲ್ಲೇ ಅತೀ ಹೆಚ್ಚಿನದ್ದಾಗಿದ್ದು, ಚಿತ್ರ ಇದೇ ರೀತಿ ಮುಂದುವರೆದರೆ, ‘ಕೆಜಿಎಫ್​ 2’, ‘RRR’, ಪುಷ್ಪ’ ಮುಂತಾದ ಚಿತ್ರಗಳ ದಾಖಲೆಗಳನ್ನು ಮುರಿಯುವ ನಿರೀಕ್ಷೆ ಇದೆ.

    ಇದನ್ನೂ ಓದಿ: ‘ರೊಲೆಕ್ಸ್​’ ಕಟ್ಟಿಕೊಂಡು ಸೋನಲ್​ ಜತೆಗೆ ಚಿತ್ರೀಕರಣಕ್ಕೆ ಹೊರಟರು ಕೋಮಲ್​ …

    ‘ಪಠಾಣ್​’ ಚಿತ್ರದಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ, ಡಿಂಪಲ್​ ಕಪಾಡಿಯಾ ಮುಂತಾದವರು ಅಭಿನಯಿಸಿದ್ದಾರೆ. ಯಶ್​ರಾಜ್​ ಫಿಲಂಸ್​ನಡಿ ಆದಿತ್ಯ ಚೋಪ್ರಾ ಈ ಚಿತ್ರವನ್ನು ನಿರ್ಮಿಸಿದ್ದು, ಚಿತ್ರವನ್ನು ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ.

    ಕನ್ನಡ ಚಿತ್ರರಂಗಕ್ಕೆ ಶ್ರುತಿ-ಶರಣ್ ಕುಟುಂಬದ ಇನ್ನೊಬ್ಬರ ಎಂಟ್ರಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts