More

    ವೈಫಲ್ಯ ಮುಚ್ಚಿಕೊಳ್ಳಲು ಮಾಡಿರುವ ಷಡ್ಯಂತ್ರ … ಕೇಂದ್ರ ಸರ್ಕಾರದ ವಿರುದ್ದ ಪಾರುಲ್​ ಗುಡುಗು

    ಬೆಂಗಳೂರು: ಡ್ರಗ್ಸ್​ ವಿಷಯವಾಗಿ ಬರೀ ನಟಿಯರನ್ನು ಬಂಧಿಸಿರುವುದನ್ನು ನೋಡಿದರೆ, ಸರ್ಕಾರ ತನ್ನ ವೈಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಇಂಥದ್ದೊಂದು ಷಡ್ಯಂತ್ರ ಮಾಡುತ್ತಿದೆ ಎಂದು ತಮಗೆ ಅನುಮಾನವಾಗುತ್ತಿದೆ ಎಂದು ಪಾರುಲ್ ಹೇಳಿದ್ದಾರೆ.

    ಈ ಕುರಿತು ಅವರು ಸುಧೀರ್ಘವಾದ ಪತ್ರವೊಂದನ್ನು ಬರೆದಿದ್ದು, ಅದನ್ನು ಮೂರು ಭಾಗಗಳಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ. ರಿಯಾ, ರಾಗಿಣಿ ಮತ್ತು ಸಂಜನಾ ಪರವಾಗಿ ಮಾತನಾಡಿದ್ದಿಕ್ಕೆ ಬೈಗುಳಗಳ ಸುರಿಮಳೆಯನ್ನೇ ಸುರಿಸಿದ ಎಲ್ಲಾ ದೇಶಭಕ್ತರಿಗೆ ಎಂದು ತಮ್ಮ ಈ ಪತ್ರವನ್ನು ಪ್ರಾರಂಭಿಸಿದ್ದಾರೆ.

    ಇದನ್ನೂ ಓದಿ: ಪಾಯಲ್​ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾದ ರಿಚಾ …

    ವೈಫಲ್ಯ ಮುಚ್ಚಿಕೊಳ್ಳಲು ಮಾಡಿರುವ ಷಡ್ಯಂತ್ರ ... ಕೇಂದ್ರ ಸರ್ಕಾರದ ವಿರುದ್ದ ಪಾರುಲ್​ ಗುಡುಗು

    ಇದೆಲ್ಲಾ ಕೇಂದ್ರ ಸರ್ಕಾರದ ಷಡ್ಯಂತ್ರ ಇರಬಹುದು ಎಂದು ಅಭಿಪ್ರಾಯಪಟ್ಟಿರುವ ಪಾರುಲ್​, ‘ಡ್ರಗ್ಸ್ ಹಾವಳಿ ಇಡೀ ಸಮಾಜಕ್ಕೆ ಮಾರಕ ಎನ್ನುವುದರಲ್ಲಿ ಎರಡು ಮಾತಿಲ್ಲ ಮತ್ತು ನಾನು ಯಾವುದೇ ಕಾರಣಕ್ಕೂ ಅದರ ಬಳಕೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ಆದರೆ, ದೇಶದ ದೊಡ್ಡ ತನಿಖಾ ಸಂಸ್ಥೆಗಳೆಲ್ಲಾ ಎಲ್ಲವನ್ನೂ ಬಿಟ್ಟು, ಮೂವರು ನಟಿಯರ ಹಿಂದೆ ಬಿದ್ದಿರುವುದು ಮಾತ್ರ ವಿಚಿತ್ರ. ಇದೆಲ್ಲಾ ನೋಡುತ್ತಿದ್ದರೆ, ಕುಸಿಯುತ್ತಿರುವ ಆರ್ಥಿಕತೆ, ಚೀನಾದ ಬೆದರಿಕೆ ಮತ್ತು ಕರೊನಾ ನಿಯಂತ್ರಪಡಿಸುವುದಕ್ಕೆ ವಿಫಲವಾದ ಹಿನ್ನೆಲೆಯಲ್ಲಿ ಜನರ ಮನಸ್ಸನ್ನು ಬೇರೆ ಕಡೆ ಸೆಳೆಯುವುದಕ್ಕೆ ಸರ್ಕಾರ ಮಾಡಿರುವ ತಂತ್ರ ಇದು ಎಂಬುದು ನನ್ನ ಭಾವನೆ’ ಎಂದು ಹೇಳಿಕೊಂಡಿದ್ದಾರೆ.

    ಇಡೀ ತನಿಖೆಯ ಹಿಂದೆ ನಟಿಯರನ್ನು ಅರೆಸ್ಟ್ ಮಾಡುವ ಮೂಲಕ ಸುದ್ದಿ ಮಾಡುವ ತವಕ ಕಾಣುತ್ತದೆ ಬಿಟ್ಟರೆ, ಡ್ರಗ್ಸ್ ಹಾವಳಿ ತಡೆಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಣುತ್ತಿಲ್ಲ ಎಂದಿರುವ ಅವರು, ‘ಡ್ರಗ್ಸ್ ಹಾವಳಿ ಬರೀ ಚಿತ್ರರಂಗದಲ್ಲಷ್ಟೇ ಅಲ್ಲ, ಎಲ್ಲಾ ಕಡೆ ಇದೆ. ಯಾರೋ ಒಬ್ಬ ಸಾಫ್ಟ್​ವೇರ್​ ಇಂಜಿನಿಯರ್ ಡ್ರಗ್ಸ್ ತೆಗೆದುಕೊಂಡರೆ ಅದು ಸುದ್ದಿಯಾಗುವುದಿಲ್ಲ. ಆದರೆ, ಸಿನಿಮಾ ನಟಿಯರನ್ನು ಬಂಧಿಸಿದರೆ, ದೊಡ್ಡ ಸುದ್ದಿಯಾಗುತ್ತದೆ ಎಂದು ಎಲ್ಲರಿಗೂ ಗೊತ್ತಿದೆ. ಈ ಜಾಲದಲ್ಲಿ ರಾಜಕಾರಣಿಗಳು, ನಟರ ಹೆಸರು ಸಹ ಕೇಳಿಬರುತ್ತಿದೆ. ಆದರೆ, ಇದುವರೆಗೂ ಯಾರೊಬ್ಬರೂ ಅವರ ಹಿಂದೆ ಬಿದ್ದಿಲ್ಲ’ ಎಂಬುದು ಪಾರುಲ್ ಆರೋಪ.

    ಇದನ್ನೂ ಓದಿ: ‘ಮಾದಕ’ ನಟಿಯರಿಗೆ ಮುಂದುವರಿದ ಜೈಲುವಾಸ!

    ಮಾಧ್ಯಮಗಳಿಗೆ ನಟಿಯರ ಖಾಸಗೀ ವಿಡಿಯೋಗಳು ಮತ್ತು ಮಾಹಿತಿ ಬಿಡುಗಡೆಯಾಗುತ್ತಿರುವ ಬಗ್ಗೆಯೂ ಮಾತನಾಡಿರುವ ಪಾರುಲ್, ‘ಸಾಬೀತಾಗುವವರೆಗೂ ಅವರು ಆರೋಪಿಗಳೇ ಹೊರತು, ಅವರು ಅಪರಾಧಿಗಳಲ್ಲ. ಹೀಗಿರುವಾಗ ಅವರ ಖಾಸಗಿ ಮಾಹಿತಿ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡುವುದು ಎಷ್ಟು ಸರಿ. ಪೊಲೀಸರು ಜನರಿಗಾಗಿ ಕೆಲಸ ಮಾಡುತ್ತಿದ್ದಾರೋ ಅಥವಾ ಬೇರೆಯವರಿಗೆ ಕೆಲಸ ಮಾಡುತ್ತಿದ್ದಾರೋ ಎನ್ನುವುದೇ ಅರ್ಥವಾಗುತ್ತಿಲ್ಲ. ಸಂಜನಾ ಇರುವ ಒಂದು ವಿಡಿಯೋವನ್ನು ಒಬ್ಬ ಮಹಿಳಾ ಪೊಲೀಸ್ ತನ್ನ ಮೊಬೈಲ್ನಿಂದ ಚಿತ್ರೀಕರಣ ಮಾಡುವುದು ಚೆನ್ನಾಗಿ ಗೊತ್ತಾಗುತ್ತದೆ. ಯಾರಿಗೂ ಇನ್ನೊಬ್ಬರ ಘನತೆಗೆ ಕುಂದು ತರುವುದಕ್ಕೆ ಹಕ್ಕಿಲ್ಲ. ಇದೊಂದು ನಾಚಿಕೆಗೇಡಿನ ವಿಷಯ’ ಎಂದು ಪಾರುಲ್ ಹೇಳಿದ್ದಾರೆ.

    VIDEO| ಕಣ್ಣಿಲ್ಲದ ಪಿಯಾನೋ ವಾದಕನಿಗೆ ಮಿಡಿಯಿತು ನಿಖಿಲ್​ ಮನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts