More

    ಮಹಿಷ ದಸರಾ ಆಚರಣೆಯಲ್ಲಿ ಭಾಗವಹಿಸಿ

    ಮಳವಳ್ಳಿ: ಶೂದ್ರ ಸಂಸ್ಕೃತಿ ಅಸ್ಮಿತೆಗಾಗಿ ಅ.13ರಂದು ಮೈಸೂರಿನಲ್ಲಿ ಆಚರಿಸುತ್ತಿರುವ ಮಹಿಷ ದಸರಾ ಆಚರಣೆಗೆ ತಾಲೂಕಿನಿಂದ ಒಂದು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪೂರಿಗಾಳಿ ಜಯರಾಜು ಮನವಿ ಮಾಡಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಹಿಷ ದಸರಾ ಆಚರಣೆ ತೆರಳುವ ಸಂಬಂಧ ಶನಿವಾರ ವಿವಿಧ ದಲಿತ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮಹಿಷ ದಸರಾ ಆಚರಣೆಯನ್ನು ಘರ್ಷಣೆಯಾದರೂ ಸರಿ ತಡೆಯುತ್ತೇವೆಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ಖಂಡನೀಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಪ್ರಜೆ ತನಗೆ ಬೇಕಾದ ದೇವರು ಮತ್ತು ಧರ್ಮವನ್ನು ಆಚರಣೆ ಮಾಡುವ ಹಕ್ಕು ಕೊಟ್ಟಿದೆ. ನಾವುಗಳು ಶೂದ್ರ ಸಮುದಾಯ ಪರವಾಗಿ ಹೋರಾಟ ಮಾಡಿದಂತಹ ರಾಜ ಮಹಿಷನ ಹೆಸರಿನಲ್ಲಿ ಪೂರ್ವಜರ ಕಾಲದಿಂದ ಮಹಿಷ ಮಂಡಲವನ್ನು ಆಚರಿಸಲಾಗುತ್ತಿದೆ. ಇದಕ್ಕೆ ವಿರೋಧಪಡಿಸುವ ಹಾಗೂ ತಡೆಯುವ ಕೆಲಸಕ್ಕೆ ಯಾರೂ ಮುಂದಾಗಬಾರದು ಎಂದರು.

    ಅ.13ರಂದು ನಡೆಯುವ ಮಹಿಷ ಮಂಡಲ ಆಚರಣೆಯಲ್ಲಿ ತಾಲೂಕಿನಿಂದ ಪಾಲ್ಗೊಳ್ಳಲು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಂದು ಪ್ರವಾಸಿ ಮಂದಿರದ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತೆರಳಲು ತೀರ್ಮಾನಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಭಾಗವಹಿಸುವಂತೆ ಮನವಿ ಮಾಡಿದರು.

    ದಲಿತ ಮುಖಂಡರಾದ ದೊಡ್ಡಬೂಹಳ್ಳಿ ಮಹದೇವಯ್ಯ, ಬಾಚನಹಳ್ಳಿ ರವಿ, ಶಾಗ್ಯ ಕೆಂಪಣ್ಣ, ಕಲ್ಕುಣಿ ನಂಜುಂಡಸ್ವಾಮಿ, ಬಂಡೂರು ಸಿದ್ದರಾಜು, ನಿವೃತ್ತ ಪ್ರಾಂಶುಪಾಲ ಚಂದ್ರಶೇಖರಯ್ಯ, ಸರಗೂರು ಕುಮಾರಸ್ವಾಮಿ, ದ್ಯಾವಪಟ್ಟಣ ಯತೀಶ, ಪಂಡಿತಹಳ್ಳಿ ಸುರೇಶ, ಡಿ.ಹಲಸಹಳ್ಳಿ ಪ್ರಭುಲಿಂಗು, ಲಿಂಗದೇವರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts