More

    ರಾಜ್ಯಕ್ಕೆ ಸುಣ್ಣ, ಗುಜರಾತ್‌ಗೆ ಬೆಣ್ಣೆ! ಕೇಂದ್ರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಆರೋಪ

    ಉಡುಪಿ: ಲಸಿಕೆ ಪೂರೈಕೆ ವಿಚಾರದಲ್ಲಿ ಆರಂಭದಿಂದಲೂ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ಒಂದೆ ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣದಂತೆ ಗುಜರಾತ್‌ಗೆ ಹೆಚ್ಚುವರಿ ಲಸಿಕೆ ಪೂರೈಕೆ ಮಾಡಲಾಗುತ್ತಿದೆ. ರಾಜ್ಯಕ್ಕೆ ಕಡಿಮೆ ಪ್ರಮಾಣದಲ್ಲಿ ಲಸಿಕೆ ಹಂಚಿಕೆ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದರು.

    ಮಂಗಳವಾರ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಲಸಿಕೆ ನೀಡಿದ ಅಂಕಿ-ಅಂಶಗಳ ವರದಿ ಬೋಗಸ್ ಆಗಿದೆ. ಜನರು ಈಗಲೂ ಲಸಿಕೆಗಾಗಿ ಪರದಾಡುವ ಸ್ಥಿತಿ ಇದೆ. ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ಮೀನುಗಾರರಿಗೆ, ಕೆಲಸಕ್ಕೆ ಹೋಗುವವರು, ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ವಿತರಣೆ ಬಾಕಿ ಇದೆ. ಸರ್ಕಾರಿ ಆಸ್ಪತ್ರೆಗಳಿಗೆ ಲಸಿಕೆ ಪೂರೈಸುವ ಬದಲು ಖಾಸಗಿ ಆಸ್ಪತ್ರೆಗೆ ಪೂರೈಕೆ ಮಾಡುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ರಾಜ್ಯದಲ್ಲಿ 25 ಬಿಜೆಪಿ ಸಂಸದರಿದ್ದಾರೆ, ಯಾರೊಬ್ಬರೂ ಮಾತನಾಡುತ್ತಿಲ್ಲ. ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ರಾಜ್ಯಕ್ಕೆ ಹೆಚ್ಚು ಸ್ಥಾನಗಳು ಸಿಗಲಿ, ಅಗಲಾದರೂ ರಾಜ್ಯಕ್ಕೆ ಹೆಚ್ಚು ಲಸಿಕೆ ಸಿಕ್ಕುವಂತಾಗಲಿ ಎಂದು ವ್ಯಂಗ್ಯವಾಡಿದರು.

    ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವ ನಾರಾಯಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸುದ್ದಿಗೋಷ್ಠಿಯಲ್ಲಿದ್ದರು.

    ಜನರ ಸಮಸ್ಯೆ ಆಲಿಸುವೆ: ನಾನು ಯಾವತ್ತೂ ಸಿಎಂ ಮಾಡಿ ಎಂದು ಹೇಳಿಲ್ಲ. ಈ ಚರ್ಚೆ ಅನಗತ್ಯವಾಗಿದೆ. ಪ್ರಸ್ತುತ ರಾಜ್ಯದ ಜನರು ಸಮಸ್ಯೆಯಲ್ಲಿದ್ದಾರೆ, ರಾಜ್ಯದ ಜನರ ಸಮಸ್ಯೆಯನ್ನು ಆಲಿಸುತ್ತಿದ್ದೇನೆ. ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ ಬೇರೆ ಚರ್ಚೆಯಲ್ಲಿ ಆಸಕ್ತಿಯಿಲ್ಲ. ಸದ್ಯ ಮೀನುಗಾರರ ಸಮಸ್ಯೆ ಆಲಿಸಿದ್ದೇನೆ. ಎರಡನೇ ಹಂತದಲ್ಲಿ ನೇಕಾರರ ಸಮಸ್ಯೆ ಆಲಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

    ಬಿಜೆಪಿಯಲ್ಲಿ ಯೋಗೇಶ್ವರ್ ಮತ್ತು ಯತ್ನಾಳ್ ಜೋರಾಗಿ ಶಬ್ದ ಮಾಡುತಿದ್ದಾರೆ. ಯಾರನ್ನು ಬೇಕಾದರೂ ಬಿಜೆಪಿ ಸಿಎಂ ಮಾಡಲಿ. ಅದನ್ನು ಪ್ರಶ್ನಿಸುವುದು ಕಾಂಗ್ರೆಸ್ ಕೆಲಸವಲ್ಲ. ಸರ್ಕಾರ ಮಾಡಲು ಕಾಂಗ್ರೆಸ್ ಬಳಿ ಬೇಕಾದಷ್ಟು ನಂಬರ್ ಇಲ್ಲ.
    –  ಡಿ.ಕೆ ಶಿವಕುಮಾರ್
    ಕೆಪಿಸಿಸಿ ಅಧ್ಯಕ್ಷ

    ‘ಕೋವಿಶೀಲ್ಡ್ ಪಡೆದ ನಂತರ ದೃಷ್ಟಿ ಬಂತು’ ಮಹಾರಾಷ್ಟ್ರದಲ್ಲೊಂದು ವಿಚಿತ್ರ ಘಟನೆ

    ಟಾಯ್ಲೆಟ್​ನಲ್ಲಿ ಕುಳಿತಿದ್ದವನ ಮರ್ಮಾಂಗಕ್ಕೇ ಕಚ್ಚಿದ ಹಾವು! ಬೆಚ್ಚಿ ಬೀಳಿಸುವ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts