More

    ಸಂಸತ್ತು ಬೇಸರ ಮೂಡಿಸುವ ಪರಿಸ್ಥಿತಿಯಲ್ಲಿದೆ ಎಂದ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ

    ನವದೆಹಲಿ : ಸಂಸತ್ತಿನಲ್ಲಿ ಕಾನೂನುಗಳ ಬಗ್ಗೆ ರಚನಾತ್ಮಕ ಚರ್ಚೆಯಾಗುತ್ತಿಲ್ಲ. ಬೇಸರ ಮೂಡಿಸುವ ಪರಿಸ್ಥಿತಿ ಉಂಟಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಎನ್​.ವಿ.ರಮಣ ಇಂದು ಬೇಸರ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್​ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಜೆಐ ಮಾತನಾಡುತ್ತಿದ್ದರು.

    “…ಆಗಿನ ಯಾವುದೇ ರಾಷ್ಟ್ರೀಯ ನಾಯಕರನ್ನು ತೆಗೆದುಕೊಳ್ಳಿ – ಮಹಾತ್ಮ ಗಾಂಧಿ, ನೆಹರೂ, ಸರ್ದಾರ್​ ವಲ್ಲಭಭಾಯಿ ಪಟೇಲ್​ ಅವರೆಲ್ಲ ವಕೀಲ ಸಮುದಾಯಕ್ಕೆ ಸೇರಿದವರು. ಮೊದಲ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಬಹುತೇಕರು ವಕೀಲರಾಗಿದ್ದರು. ಆದರೆ ದೃರದೃಷ್ಟವಶಾತ್​, ಕಾಲಾನುಕ್ರಮದಲ್ಲಿ ಏನಾಗುತ್ತಿದೆ ಎಂದು ನೀವು ನೋಡಿದ್ದೀರಿ. ಆಗ ನಡೆಯುತ್ತಿದ್ದ ಚರ್ಚೆಗಳನ್ನು ಈಗಿನದಕ್ಕೆ ಹೋಲಿಸಿದರೆ ತಿಳಿಯುತ್ತದೆ. ಆಗ ಬುದ್ಧಿವಂತಿಕೆಯ ರಚನಾತ್ಮಕ ಚರ್ಚೆಗಳು ನಡೆಯುತ್ತಿದ್ದವು. ಆದರೆ ಈಗ ಬೇಸರ ಮೂಡಿಸುವಂತಹ ಪರಿಸ್ಥಿತಿ ಇದೆ” ಎಂದು ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಹೇಳಿದ್ದಾರೆ.

    ಇದನ್ನೂ ಓದಿ: ಸೈನಿಕ ಶಾಲೆಗಳಲ್ಲಿ ಇನ್ನು ಮುಂದೆ ಹೆಣ್ಣುಮಕ್ಕಳಿಗೂ ಪ್ರವೇಶಾವಕಾಶ

    ಈಗ ಕಾನೂನುಗಳ ಬಗ್ಗೆ ಸರಿಯಾದ ಚರ್ಚೆಯಿಲ್ಲ. ಅವುಗಳನ್ನು ಏಕೆ ಮಾಡಿದ್ದಾರೆ ಎಂಬ ಸ್ಪಷ್ಟತೆ ಇಲ್ಲ. ಇದು ಜನರಿಗಾಗಿರುವ ನಷ್ಟ. ಸದನಗಳಲ್ಲಿ ವಕೀಲರು, ಬುದ್ಧಿಜೀವಿಗಳು ಇಲ್ಲದಿದ್ದರೆ ಈ ರೀತಿ ಆಗುತ್ತದೆ. ಆದ್ದರಿಂದ ವಕೀಲ ಸಮುದಾಯ ಸಾರ್ವಜನಿಕ ಸೇವೆಯತ್ತ ಗಮನ ಹರಿಸಬೇಕು ಎಂದು ಸಿಜೆಐ ವಕೀಲರಿಗೆ ಕರೆ ನೀಡಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. (ಏಜೆನ್ಸೀಸ್)

    ಕ್ರಿಕೆಟ್​ ಪಟು ಧೋನಿಯನ್ನು ಕಾಣಲು 16 ದಿನ ನಡೆದು ಬಂದ ಅಭಿಮಾನಿ!

    ಓಲಾ ಎಲೆಕ್ಟ್ರಿಕ್​ ಸ್ಕೂಟರ್ ಅನಾವರಣ; ಬೆಲೆ, ಲಭ್ಯತೆ ವಿವರ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts