More

    ಪುಟ್ಟ ಮಗುವಿನಿಂದ ವಾಟರ್ ಸ್ಕೀಯಿಂಗ್ ಮಾಡಿಸಿದ ಪಾಲಕರಿಗೆ ಎದುರಾಯ್ತು ಸಂಕಷ್ಟ!

    ನ್ಯೂಯಾರ್ಕ್​: ಆರು ತಿಂಗಳ ಮಗು ವಾಟರ್ ಸ್ಕೀಯಿಂಗ್ (ನೀರ ಮೇಲೆ ಜಾರುವ ಆಟ) ಮಾಡುವ ವಿಡಿಯೋವೊಂದು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪುಟ್ಟ ಮಗುವಿನ ವಾಟರ್ ಸ್ಕೀಯಿಂಗ್​​ಗೆ ಮನಸೋತ ಅನೇಕರು ಭೇಷ್​ ಎಂದಿದ್ದಾರೆ. ಆದರೆ, ಮಗುವಿನಿಂದ ಸಾಹಸ ಮಾಡಿಸಿದ ಪಾಲಕರಿಗೆ ಇದೀಗ ಸಂಕಷ್ಟ ಎದುರಾಗಿದೆ.

    6 ತಿಂಗಳ ಮಗುವಿನ ಹೆಸರು ರಿಚ್​ ಕ್ಯಾಸಿ ಹಂಫೆರಿಸ್​. ವಾಟರ್ ಸ್ಕೀಯಿಂಗ್ ಮಾಡುವ ಮೂಲಕ ಇದೀಗ ವಿಶ್ವ ದಾಖಲೆಯನ್ನು ಬರೆದಿದೆ. ಆದರೆ, ಪಾಲಕರ ನಡೆಯನ್ನು ಟೀಕಿಸಿರುವ ಅನೇಕರು ಇದು “ಶಿಶು ದೌರ್ಜನ್ಯ” ಎಂದು ಖಂಡಿಸಿದ್ದಾರೆ.

    ಅಮೆರಿಕದ ಉತಾಹ್​ ಕೆರೆಯಲ್ಲಿ ತಂದೆ ರಿಚ್ ಹಂಫ್ರೀಸ್, ತಮ್ಮ ಮಗುವಿನಿಂದ ವಾಟರ್​ ಸ್ಕೀಯಿಂಗ್​ ಮಾಡಿಸಿದ್ದು, ಈ ಬಗ್ಗೆ ಮೊದಲೇ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದ ಅವರು ನನ್ನ 6 ತಿಂಗಳ ಬರ್ತಡೇ ದಿನದಂದು ವಾಟರ್​ ಸ್ಕೀಯಿಂಗ್​ ಮಾಡಲು ಹೋಗುತ್ತಿದ್ದೇನೆ. ನಿಜವಾಗಿಯು ಇದೊಂದು ಬಿಗ್​ ಡೀಲ್​ ಎಂದು ವಿಶ್ವದಾಖಲೆ ಹ್ಯಾಷ್​ಟ್ಯಾಗ್​ನೊಂದಿಗೆ ಪೋಸ್ಟ್​ ಮಾಡಿದ್ದರು.

    ಇದನ್ನೂ ಓದಿ: ಪಾಕಿಸ್ತಾನ ಭಯೋತ್ಪಾದಕರ ಜತೆ ಸಮಂತಾ ನಂಟಿದೆಯೇ?; ಕೆಲ ಮೂಲಗಳಿಂದ ಮಾಹಿತಿ ಬಹಿರಂಗ

    ವಿಡಿಯೋದಲ್ಲಿ ಏನಿದೆ?: ಮಗು ವಾಟರ್​ ಸ್ಕೀಯಿಂಗ್​ ನಡೆಸುವಾಗ ಪಕ್ಕದಲ್ಲೇ ಮಗುವಿನ ತಂದೆ ರಿಚ್ ಹಂಫ್ರೀಸ್ ಮಗುವನ್ನು ಸಮತೋಲನ ಮಾಡುತ್ತಿದ್ದಾರೆ. ನಾನು ಏನು ಮಾಡುತ್ತಿದ್ದೇನೆಂಬ ಅರಿವು ಸಹ ಇರದ ಮಗು ಕಬ್ಬಿಣದ ಕಂಬಿಗಳನ್ನು ಬಿಗಿಯಾಗಿ ಹಿಡಿದು ವಾಟರ್​ ಸ್ಕೀಯಿಂಗ್​ ಮಾಡಿದೆ. ರಕ್ಷಣೆಗಾಗಿ ಜಾಕೆಟ್​ ಸಹ ತೊಡಿಸಲಾಗಿತ್ತು.

    ರಿಚ್ ಹಂಫ್ರೀಸ್ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿಕೊಂಡಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಭೇಷ್​ ಎಂದರೆ, ಇನ್ನು ಕೆಲವರು ನೀವು ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಒಂದು ವೇಳೆ ಪ್ರಯತ್ನ ವಿಫಲವಾಗಿದ್ದರೆ ಮಗುವಿನ ಆರೋಗ್ಯ ಏನಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ. ನಿಮ್ಮದು ಸಾಹಸ ಪ್ರವೃತ್ತಿಯ ಕುಟುಂಬವೆಂದು ಒಪ್ಪಿಕೊಳ್ಳುತ್ತೇನೆ. ಆದರೆ, ಇದು ಮಾತ್ರ ಸರಿಯಲ್ಲ ಎಂದು ಟೀಕಿಸಿದ್ದಾರೆ.

    ಹೀಗೆ ಸಾಕಷ್ಟು ಮಂದಿ ಟೀಕಾ ಪ್ರಹಾರಗಳನ್ನು ನಡೆಸಿದ್ದು, ಇದು ಶಿಶು ದೌರ್ಜನ್ಯವಾಗಿದೆ ಎಂದು ಆರೋಪಿಸಿ, ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಮುಂದೆ ದೂರು ದಾಖಲಾದರೂ ಅಚ್ಚರಿಪಡಬೇಕಿಲ್ಲ. ವಿಶ್ವದಾಖಲೆ ಬರೆಯುವ ಆಸೆಯಿಂದ ನೆಟ್ಟಿಗರಿಂದ ಮಗುವಿನ ಪಾಲಕರು ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. (ಏಜೆನ್ಸೀಸ್​)

    ಆರು ತಿಂಗಳ ಪುಟಾಣಿಯ ಸಾಹಸ ನೋಡಿ…

    ಆರು ತಿಂಗಳು ಎಂದರೆ ಇನ್ನೂ ಅಂಬೆಹರಿದರೆ, ಕೆಲವು ಪುಟ್ಟ ಪುಟಾಣಿಗಳು ಅಂಬೆಗಾಲು ಇಡುವುದಕ್ಕೆ ಆಗತಾನೇ ಆರಂಭಿಸುತ್ತಾರೆ. ಆದರೆ ಅಮೆರಿಕದ ಉತಾಹ್​ ಕೆರೆಯಲ್ಲಿ ಆರು ತಿಂಗಳ ಮಗುವೊಂದು ಮೋಟಾರ್​ಬೋಟ್​ ನಡೆಸಿದೆ. ಇನ್ನೊಂದು ಕಡೆಯಿಂದ ಮಗುವಿನ ತಂದೆ ರಿಚ್ ಹಂಫ್ರೀಸ್ ಮಗುವನ್ನು ಸಮತೋಲನ ಮಾಡುತ್ತಿದ್ದಾರೆ. ಈ ವಿಡಿಯೋ ಇದೀಗ ವೈರಲ್​ ಆಗಿದ್ದು, ಸಹಸ್ರಾರು ಮಂದಿ ಮುದ್ದುಮೊಗದ ಕಂದಮ್ಮನಿಗೆ ಭೇಷ್​ ಭೇಷ್​ ಎನ್ನುತ್ತಿದ್ದಾರೆ.

    Posted by Dighvijay News – ದಿಗ್ವಿಜಯ ನ್ಯೂಸ್ on Monday, September 21, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts