More

    ಹಳೇ ವಿದ್ಯಾರ್ಥಿ ಸಂಘದಿಂದ ಗುರುವಂದನೆ

    ಪರಶುರಾಮಪುರ: ಹೋಬಳಿಯ ಪಿ.ಮಹದೇವಪುರದಲ್ಲಿ ಸರ್ಕಾರಿ ಪ್ರೌಢಶಾಲೆ ಸುವರ್ಣ ಮಹೋತ್ಸವದ ಅಂಗವಾಗಿ ಜ.11, 12ರಂದು ಗುರುವಂದನೆ ಹಾಗೂ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಳೇ ವಿದ್ಯಾರ್ಥಿಗಳ ಸಂಘದ ಪ್ರಕಟಣೆ ತಿಳಿಸಿದೆ.

    11ರ ಬೆಳಗ್ಗೆ 8.30ಕ್ಕೆ ಶಾಲಾ ಆವರಣದಲ್ಲಿ ನಿವೃತ್ತ ಉಪನ್ಯಾಸಕ ಕೆ.ಎಸ್.ಈಶ್ವರಯ್ಯ, ಮುಖ್ಯಶಿಕ್ಷಕ ಎ.ವೀರಣ್ಣ ಧ್ವಜಾರೋಹಣ ನೆರವೇರಿಸುವರು. ಬಳಿಕ ನಡೆವ ಸಮಾವೇಶದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಎಂ.ನಾಗರಾಜರಾವ್ ವಹಿಸುವರು.

    ಮಧ್ಯಾಹ್ನ 12.30ಕ್ಕೆ ರಂಗೋಲಿ ಸ್ಪರ್ಧೆ, 3ಕ್ಕೆ ಕಲಾ ತಂಡಗಳ ಮೆರವಣಿಗೆ, ನಂತರ ಕಾಮಿಡಿ ಕಿಲಾಡಿಗಳು ಕಲಾವಿದರಾದ ನಯನಾ ಮತ್ತು ಹಿತೇಶ್ ಇವರಿಂದ ಹಾಸ್ಯೋತ್ಸವ, ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ.

    12ರ ಬೆಳಗ್ಗೆ ಬೈಕ್‌ರ‌್ಯಾಲಿ ಬಳಿಕ ನಡೆವ ಕಾರ್ಯಕ್ರಮದ ಸಾನ್ನಿಧ್ಯವನ್ನು ತುಮಕೂರು ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಶಾಸಕ ಟಿ.ರಘುಮೂರ್ತಿ ಉದ್ಘಾಟಿಸುವರು.

    ಸುವರ್ಣ ಮಹೋತ್ಸವದ ಸಭಾಂಗಣದ ಉದ್ಘಾಟನೆಯನ್ನು ಡಿಸಿ ಆರ್.ವಿನೋತ್‌ಪ್ರಿಯಾ, ದಿ.ಎನ್.ರಾಮಕೃಷ್ಣರೆಡ್ಡಿ ವೇದಿಕೆಯನ್ನು ಡಿಡಿಪಿಐ ಎನ್.ರವಿಶಂಕರರೆಡ್ಡಿ, ಸ್ಮರಣ ಸಂಚಿಕೆ ಬಿಡುಗಡೆಯನ್ನು ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಿಕೊಡುವರು.

    12ರ ಸಂಜೆ ಸಮಾರೋಪದ ಬಳಿಕ ಸುಧಾ ಬರಗೂರು, ಮಿಸ್ಟರ್ ಬಡವರಾಜ್, ಶಂಕರ್ ಉಮ್ರಾನಿ ಇವರಿಂದ ಹಾಸ್ಯ ಸಂಜೆ. ರಾತ್ರಿ 9ಕ್ಕೆ ತುಮಕೂರು ಜಿಲ್ಲಾ ಪಿಯು ಕಾಲೇಜುಗಳ ಪ್ರಾಚಾರ್ಯರು ಮತ್ತು ಉಪನ್ಯಾಸಕರ ಕಲಾ ವೃಂದದಿಂದ ಕುರುಕ್ಷೇತ್ರ ಅಥವಾ ಶ್ರೀಕೃಷ್ಣ ಸಂಧಾನ ಎಂಬ ಪೌರಾಣಿಕ ನಾಟಕ ಆಯೋಜಿಸಲಾಗಿದೆ ಎಂದು ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಿ.ವೆಂಕಟರಮಣಪ್ಪ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts