More

    ರಾಷ್ಟ್ರಪತಿಯಿಂದ ಅರ್ಜುನ ಪುರಸ್ಕಾರ ಸ್ವೀಕರಿಸಿದ ಕನ್ನಡಿಗ; ‘ಯತಿರಾಜ್’​ ಮುಖದಲ್ಲಿ ‘ಸುಹಾಸ’

    ದೆಹಲಿ: ರಾಜ್ಯೋತ್ಸವದ ಮಾಸವಾದ ನವೆಂಬರ್​ನಲ್ಲಿ ಮೊನ್ನೆಮೊನ್ನೆಯಷ್ಟೇ ರಾಜ್ಯದ ಅನೇಕರು ಪದ್ಮ ಪ್ರಶಸ್ತಿಗಳನ್ನು ಪಡೆದ ಬೆನ್ನಿಗೇ ಕನ್ನಡಿಗರು ಖುಷಿಪಡುವಂಥ ಮತ್ತೊಂದು ಪ್ರಶಸ್ತಿ ಪ್ರದಾನ ನಡೆದಿದೆ. ಪ್ಯಾರಾಲಿಂಪಿಯನ್ ಸುಹಾಸ್​ ಯತಿರಾಜ್​ ಅವರು ಇಂದು ಅರ್ಜುನ ಪುರಸ್ಕಾರಕ್ಕೆ ಪಾತ್ರರಾಗಿದ್ದೇ ಆ ಖುಷಿಗೆ ಕಾರಣ.

    ನವದೆಹಲಿಯಲ್ಲಿ ಇಂದು ನಡೆದ ಭವ್ಯ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಸುಹಾಸ್ ಯತಿರಾಜ್ ಅವರಿಗೆ ಅರ್ಜುನ ಪುರಸ್ಕಾರ ಪ್ರದಾನ ಮಾಡಿದರು.

    2020ರ ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಬ್ಯಾಡ್ಮಿಂಟನ್​ ಸಿಂಗಲ್ಸ್​ನಲ್ಲಿ ​ಬೆಳ್ಳಿ ಪದಕ ಗೆದ್ದ ಕನ್ನಡಿಗ ಸುಹಾಸ್ ಯತಿರಾಜ್ ಅವರು ಮೂಲತಃ ಕರ್ನಾಟಕದ ಹಾಸನ ಜಿಲ್ಲೆಯವರು. ಆದರೆ, ಸದ್ಯ ಉತ್ತರ ಪ್ರದೇಶದ ಗೌತಮಬುದ್ಧ ನಗರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಇದನ್ನೂ ಓದಿ: ನಟಿ ರಚಿತಾ ರಾಮ್​ ಮುಖದಲ್ಲೀಗ ಮತ್ತೆ ಖುಷಿಯ ಡಿಂಪಲ್​; ಬೇಸರದ ಮಧ್ಯೆಯೇ ‘ಏಕ್​ಲವ್​​ಯಾ’ಗೂ ಸಂತೋಷ!

    ಇವರು ಪ್ಯಾರಾಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಪಡೆದ, ದೇಶದ ಮೊದಲ ಐಎಎಸ್​ ಅಧಿಕಾರಿ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಮಾತ್ರವಲ್ಲ ಅರ್ಜುನ ಪ್ರಶಸ್ತಿ ಪಡೆದ ಮೊದಲ ಐಎಎಸ್​ ಅಧಿಕಾರಿ ಎಂಬ ಹೆಗ್ಗಳಿಕೆಯೂ ಇವರ ಪಾಲಾಗಿದೆ.

    ಇದನ್ನೂ ಓದಿ: ಕೈ ಪಕ್ಷದಿಂದ ಮತ್ತೊಂದು ಕಪಾಳಮೋಕ್ಷ; ಸಿದ್ದರಾಮಯ್ಯ ಅಭಿಮಾನಿಯ ಕೆನ್ನೆಗೆ ಬಾರಿಸಿದ ಮಾಜಿ ಸಚಿವ…

    ಕೆಲವು ದಿನಗಳ ಹಿಂದೆ ಅರ್ಜುನ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಪ್ರಕಟಗೊಂಡಿದ್ದು, ಅದಕ್ಕೆ ಆಯ್ಕೆಯಾದ 35 ಕ್ರೀಡಾಪಟುಗಳ ಪೈಕಿ ಸುಹಾಸ್ ಕೂಡ ಒಬ್ಬರು. ಇವರು ಉತ್ತರಪ್ರದೇಶ ಕೇಡರ್​​ನ 2007ರ ಬ್ಯಾಚ್​ನ ಐಎಎಸ್ ಅಧಿಕಾರಿ. ಅರ್ಜುನ ಪ್ರಶಸ್ತಿಯ ದೇಶದ ಅತ್ಯುನ್ನತ ಕ್ರೀಡಾಪ್ರಶಸ್ತಿಯಾಗಿದ್ದು, ಇದನ್ನು ಕೇಂದ್ರ ಕ್ರೀಡಾ ಸಚಿವಾಲಯದಿಂದ ನೀಡಲಾಗುತ್ತದೆ.

    ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts