More

    ಅಳಿವಿನಂಚಿನಲ್ಲಿರುವ ಪ್ಯಾಂಗೊಲಿನ್​ನ ಚಿಪ್ಪನ್ನು ಸಾಗಿಸುತ್ತಿದ್ದವನ ಬಂಧನ…

    ಬೆಂಗಳೂರು: ಚಿಪ್ಪುಹಂದಿ ಎಂದು ಕರೆಯಲ್ಪಡುವ ಒಂದು ಅಪರೂಪದ ತಳಿಯ ಪ್ರಾಣಿಯ ಚಿಪ್ಪುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಬಂಧಿತ ಆರೋಪಿಯ ಹೆಸರು ಕಿರಣ್​ ಎಂದು. ಈತನಿಂದ ಬರೋಬ್ಬರಿ 30 ಕೆ.ಜಿ ಪೆಂಗೊಲಿನ್​ ಅಥವಾ ಚಿಪ್ಪುಹಂದಿಯ ಚಿಪ್ಪುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಚಿಪ್ಪುಗಳನ್ನು ಬಳಸಿ ಔಷಧಿ, ಅಲಂಕಾರಿಕ ವಸ್ತುಗಳು, ಬಟ್ಟೆ, ಸರ, ಬಳೆ ಮೂಂರತಾದವುಗಳನ್ನು ತಯಾರಿಸಲಾಗುತ್ತದೆ.

    ನಂಬಿದರೆ ನಂಬಿ, ಒಂದು ಕೆ.ಜಿ ಪೆಂಗೋಲಿನ್ ಚಿಪ್ಪಿಗೆ ಬರೋಬ್ಬರಿ 90 ಸಾವಿರ ರೂ. ಬೆಲೆಯಿದೆ. ಕಿರಣ್ ಬಳಿ ಒಟ್ಟು 25 ಲಕ್ಷ ರೂ. ಬೆಲೆಬಾಳುವ 30 ಕೆ.ಜಿ ಚಿಪ್ಪುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಷ್ಟು ಚಿಪ್ಪುಗಳನ್ನು ಸಂಗ್ರಹಿಸಲು 25ಕ್ಕೂ ಅಧಿಕ ಚಿಪ್ಪುಹಂದಿಗಳನ್ನ ಕೊಲ್ಲಲಾಗಿದೆ. ಈ ಕಿರಣ್​, ಚಿಪ್ಪುಹಂದಿಯ ಚಿಪ್ಪನ್ನು ಸಾಗಾಟ ಮಾಡಲು ಮುಂದಾಗಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಕುರಿತು ಹನುಮಂತ ನಗರ ಪೊಲೀಸರಿಂದ ಹೆಚ್ಚಿನ ತನಿಖೆ ಕೂಡ ನಡೆಸುತ್ತಿದ್ದಾರೆ.

    ಅಳಿವಿನಂಚಿನಲ್ಲಿರುವ ಪ್ಯಾಂಗೊಲಿನ್​ನ ಚಿಪ್ಪನ್ನು ಸಾಗಿಸುತ್ತಿದ್ದವನ ಬಂಧನ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts