More

    ಕೇರಳತಿ v/s ಕನ್ನಡತಿ; ಪೊಲೀಸ್​ ಠಾಣೆ ಮೆಟ್ಟಿಲೇರಿದ ಪ್ರಕರಣ

    ಬೆಂಗಳೂರು: ಮಲಗಿದ್ದಾಗ ವಿಡಿಯೋ ಮಾಡಿ ಅದನ್ನು ಇನ್ನೊಬ್ಬ ವ್ಯಕ್ತಿಗೆ ಕಳುಹಿಸಿದರೆ ಹೇಗೆ ಆಗಬಹುದು? ಇಡೀ ದಿನ ಕೆಲಸ ಮಾಡಿ ಸುಸ್ತಾಗಿ ಬಂದು ನಿದ್ದೆ ಮಾಡೋಣ ಎಂದು ತಲೆ ಒರಗಿಸಿದಾಗ ಪಕ್ಕದಲ್ಲಿದ್ದವರು ಜೋರಾಗಿ ಮಾತನಾಡಿದರೆ ಹೇಗಾಗಬಹುದು? ಇಂತಹದೇ ಪರಿಸ್ಥಿತಿಯನ್ನು ವೈದ್ಯೆಯೊಬ್ಬರು ಅನುಭವಿಸಿರುವ ಬಗ್ಗೆ ತಮ್ಮ ದುಃಖವನ್ನು ಹಂಚಿಕೊಂಡಿದ್ದರು. ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವುದು ಬಹುಷಃ ಇದೇ ಕಾರಣಕ್ಕೆ ಇರಬೇಕು.

    ನೆನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದ ಈ ವೈದ್ಯೆಯ ವಿಡಿಯೋ ಈಗ ಸಾಕಷ್ಟು ನೆಟ್ಟಿಗರ ಗಮನ ಸೆಳೆದಿದೆ. ಈಗ ಈ ಪ್ರಕರಣ ಈಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದೆ.

    ಇದನ್ನೂ ಓದಿ: ಪಿ.ಜಿಯಲ್ಲಿ ಕೇರಳತಿ v/s ಕನ್ನಡತಿ; ಅಸಹಾಯಕತೆ ತೋಡಿಕೊಂಡ ಕರ್ನಾಟಕದ ವೈದ್ಯೆ..!

    ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ. ಸೃಷ್ಟಿ, ಬೆಳಗ್ಗೆ 8ರಿಂದ ರಾತ್ರಿ 9.30ರ ವರೆಗೆ ಆಸ್ಪತ್ರೆಯಲ್ಲಿ ಕರ್ತವ್ಯ ನಿರತರಾಗಿರುತ್ತಾರೆ. ನಂತರ ರೂಮಿಗೆ ಬಂದು ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ನಿದ್ದೆ ಹೋಗುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಹಿಂದೆಯೂ ಇವರು ಪಿ.ಜಿಯ ವಾರ್ಡನ್​ಗೆ ಮೌಖಿಕವಾಗಿ ದೂರು ನೀಡಿದ್ದರು ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.

    ಇಷ್ಟಾದರೂ ಜನವರಿ 10ರ ಮುಂಜಾನೆ 2-3 ಗಂಟೆ ಹೊತ್ತಿಗೆ ವೈದ್ಯೆಯ ರೂಂ ಮೇಟ್​ ಆಗಿರುವ ಅಸೀಲಾ ಅಡಯೋಡಿ, ವಿಡಿಯೋ ಕಾಲಿನಲ್ಲಿದ್ದ ಆ ಬದಿಯ ವ್ಯಕ್ತಿಗೆ ಅಸಭ್ಯವಾಗಿ ತೋರಿಸಿದ್ದಾಳೆ. ಇದನ್ನು ಪ್ರಶ್ನಿಸಿದಕ್ಕೆ ವೈದ್ಯೆ ದೃಷ್ಟಿಗೆ ಈ ರೂಂ ಮೇಟ್ ‘ನಾನು ಕೇರಳದವಳು. ಹೆಚ್ಚು ಮಾತನಾಡಿದರೆ ವಾಮಾಚಾರ ಮಾಡುತ್ತೇನೆ’ ಎಂದು ಬೆದರಿಕೆ ಕೂಡ ಹಾಕಿದ್ದಳು.

    ಹೀಗೆಲ್ಲಾ ಮಾಡಿದ್ದ ಅಸೀಲಾಳನ್ನು ಪ್ರಶ್ನಿಸಿದ್ದ ಡಾ.ಸೃಷ್ಟಿ ಇದನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ‘ಇದು ಬಿಟಿಎಂ ಲೇಔಟ್, ಇಲ್ಲಿ ಕೇರಳದವರು ಜಾಸ್ತಿ. ನಾವೆಲ್ಲರು ಸೇರಿ ನಿನ್ನನ್ನು ನೋಡಿಕೊಳ್ತೀವಿ. ಕನ್ನಡದವರು ಯೋಗ್ಯತೆ ಮತ್ತು ಕುಶಲತೆ ಇಲ್ಲದವರು. ನೀನು ಕನ್ನಡದಲ್ಲಿ ಮಾತನಾಡಬೇಡ’ ಎಂದು ಬೆದರಿಕೆ ಕೂಡ ಹಾಕಿದ್ದಾಳೆ ಎಂದು ವೈದ್ಯರು ಆರೋಪಿಸಿದ್ದಾರೆ. ಅದಲ್ಲದೇ, ಯೂ ಆ್ಯಂಡ್​ ಯುವರ್​ ಕನ್ನಡ,ಫ* ಇಟ್​ ಎಂದು ಅಶ್ಲೀಲವಾಗಿ ಬೈದಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖವಾಗಿದೆ.ಇಷ್ಟೆಲ್ಲಾ ಬೈದ ಅಸೀಲಾ, ಹಲ್ಲೆ ಕೂಡ ಮಾಡಿರುವ ಬಗ್ಗೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಈ ಬಗ್ಗೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts