More

    ಪಂಚಮುಖಿ ಬಳಗ ಜನೋಪಯೋಗಿ ಕೆಲಸ, ವಾರ್ಷಿಕೋತ್ಸವದಲ್ಲಿ ಶಾಸಕ ವೇದವ್ಯಾಸ ಕಾಮತ್ ಶ್ಲಾಘನೆ

    ಮಂಗಳೂರು: ನಿರಂತರ ಜನೋಪಯೋಗಿ ಕಾರ್ಯಗಳನ್ನು ಹಮ್ಮಿಕೊಂಡು ಬಂದಿರುವ ಪಂಚಮುಖಿ ಬಳಗದ ಸದಸ್ಯರು ಉರ್ವ ಪರಿಸರದಲ್ಲಿ ನಡೆಯುವ ಎಲ್ಲ ಸತ್ಕಾರ್ಯಗಳಲ್ಲೂ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

    ಉರ್ವ ಮಾರಿಗುಡಿ ಬಳಿ ಜರಗಿದ ಉರ್ವ ಪಂಚಮುಖಿ ಬಳಗದ 38ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

    ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚಮುಖಿ ಬಳಗವು ವೈವಿಧ್ಯಮಯ ಸೇವಾ ಚಟುವಟಿಕೆಗಳನ್ನು ಮಾಡುತ್ತಿರುವುದರ ಮೂಲಕ ಪರಿಸರದ ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾದೆ ಎಂದರು.

    ಕಾರ್ಪೊರೇಟರ್ ಗಣೇಶ್ ಕುಲಾಲ್, ಮಾಜಿ ಕಾರ್ಪೊರೇಟರ್ ಅಶ್ವಿನ್ ಕುಮಾರ್ ಹಾಗೂ ಚಿಲಿಂಬಿ ಶಾರದೋತ್ಸವ ಸಮಿತಿಯ ಹರೀಶ್ ಕೊಟ್ಟಾರಿ ಶುಭ ಹಾರೈಸಿದರು. ಪಂಚಮುಖಿ ಬಳಗದ ಕಾರ್ಯದರ್ಶಿ ವೀರೇಂದ್ರ ಕಿರೋಡಿಯನ್, ಉಪಾಧ್ಯಕ್ಷ ವಿಜಯ್ ಉರ್ವ ಮತ್ತಿತರರು ಉಪಸ್ಥಿತರಿದ್ದರು. ಕುವೆಂಪು ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿರುವ ಉದ್ಯಮಿ ಎ.ಸದಾನಂದ ಶೆಟ್ಟಿ ಅವರಿಗೆ ‘ಪಂಚಮುಖಿ ಕಲಾ ಸೌರಭ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಾಲಪ್ರತಿಭೆ ಸ್ನಿಗ್ಧಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

    ಸಂಸ್ಥೆಯ ಉಪಾಧ್ಯಕ್ಷ ಭರತ್ ಕುಮಾರ್ ಹಾಗೂ ಕಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಪಂಚಮುಖಿ ಬಳಗ ಅಧ್ಯಕ್ಷ ಅರುಣ್ ಉರ್ವ ಸ್ವಾಗತಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕುಶಿ ಮೆಲೋಡಿಯಸ್ ಅವರಿಂದ ನೃತ್ಯ-ಸಂಗೀತ ರಸಸಂಜೆ ಕಾರ್ಯಕ್ರಮ ಜರಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts