More

    ಪಾಲ್ಗರ್​ನಲ್ಲಿ ​ಸಾಧುಗಳ ಹತ್ಯೆ: ಐವರು ಆರೋಪಿಗಳಿಗೆ ಕರೊನಾ

    ಮುಂಬೈ: ಕಳೆದ ಏಪ್ರಿಲ್​ನಲ್ಲಿ ಮಹಾರಾಷ್ಟ್ರದ ಪಾಲ್ಗರ್​ನಲ್ಲಿ ನಡೆದ ಸಾಧುಗಳ ಹತ್ಯಾಕಾಂಡದಲ್ಲಿ ಪ್ರಮುಖ ಆರೋಪಿಗಳಾಗಿ ಜೈಲಿನಲ್ಲಿ ಇರುವ ಐವರಿಗೆ ಕರೊನಾ ಸೋಂಕು ತಗುಲಿದೆ.

    ಈ ಪ್ರಕರಣದಲ್ಲಿ ಬಂಧಿಸಲಾಗಿದ್ದ 11 ಮಂದಿ ಆರೋಪಿಗಳನ್ನು ಜೈಲಿನಲ್ಲಿ ಇರಿಸಲಾಗಿತ್ತು. ಅವರನ್ನು ಕರೊನಾ ವೈರಸ್​ ಪರೀಕ್ಷೆಗೆ ಒಳಪಡಿಸಿದಾಗ ಐವರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.

    ಈ ಆರೋಪಿಗಳನ್ನು ವಾಡಾ ಪೊಲೀಸ್ ಠಾಣೆ ಲಾಕಪ್‌ನಿಂದ ಜಿಲ್ಲಾ ಕಲೆಕ್ಟರೇಟ್ ಸ್ಥಾಪಿಸುವ ತಾತ್ಕಾಲಿಕ ಜೈಲಿಗೆ ಸ್ಥಳಾಂತರಿಸಬೇಕಾಗಿತ್ತು, ಈ ಹಿನ್ನೆಲೆಯಲ್ಲಿ ಆರೋಪಿಗಳ ಗಂಟಲು ದ್ರವದ ಪರೀಕ್ಷೆಯನ್ನು ಮಾಡಿದಾಗ ವೈರಸ್​ ಇರುವುದು ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಸಾಧುಗಳ ಬರ್ಬರ ಹತ್ಯೆಯ ರಹಸ್ಯ ಬಯಲಾಗುವ ಮೊದಲೇ ಅಪಘಾತದಲ್ಲಿ ವಕೀಲನ ನಿಗೂಢ ಸಾವು!

    ಪೊಲೀಸ್ ಠಾಣೆಯಲ್ಲಿ ಸಂಪೂರ್ಣ ಮುನ್ನೆಚ್ಚರಿಕೆಗಳನ್ನು ವಹಿಸಿದ್ದರೂ ವೈರಸ್​ ಹೇಗೆ ತಗುಲಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ಆರೋಪಿಗಳು ಯಾವ್ಯಾವ ಪೊಲೀಸ್ ಅಥವಾ ಭದ್ರತಾ ಸಿಬ್ಬಂದಿಯ ಸಂಪರ್ಕಕ್ಕೆ ಬಂದಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

    ಮಕ್ಕಳ ಕಳ್ಳರೆಂದು ಭಾವಿಸಿ ಇಬ್ಬರು ಸಾಧುಗಳನ್ನು ಗ್ರಾಮಸ್ಥರು ಹೊಡೆದು ಸಾಯಿಸಿದ್ದರು ಎನ್ನಲಾಗಿತ್ತು. ಆನಂತರ ಈ ಹತ್ಯೆಯ ಬಗ್ಗೆ ಅನೇಕ ಗುಮಾನಿಗಳು ಶುರುವಾಗಿದ್ದವು. ದೇಶವ್ಯಾಪಿ ಈ ಘಟನೆ ಭಾರಿ ಸಂಚಲನ ಮೂಡಿಸಿತ್ತು (ಏಜೆನ್ಸೀಸ್​)

    ನಿನ್ನ ಮನದಾಳದ ನೋವು ಬಲ್ಲೆ- ಸುಶಾಂತ್​ಗೆ ಅಕ್ಕನಿಂದ ಭಾವುಕ ಪತ್ರ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts