More

    ಪಾಕ್​ ಬೇಹುಗಾರಿಕೆ ಜಾಲ ಭೇದಿಸಿದ ಮಿಲಿಟರಿ ಇಂಟೆಲಿಜೆನ್ಸ್​

    ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದ ಮಿಲಿಟರಿ ಇಂಟೆಲಿಜೆನ್ಸ್​ ಮತ್ತು ಮುಂಬೈ ಅಪರಾಧ ವಿಭಾಗದ ಪೊಲೀಸರು ಪಾಕಿಸ್ತಾನದ ಅತಿದೊಡ್ಡ ಬೇಹುಗಾರಿಕೆ ಜಾಲವನ್ನು ವಾಣಿಜ್ಯ ನಗರಿಯಲ್ಲಿ ಭೇದಿಸಿದೆ.

    ಕಾನೂನುಬಾಹಿರ ವಾಯ್ಸ್​ ಓವರ್​ ಇಂಟರ್ನೆಟ್​ ಪ್ರೋಟೋಕಾಲ್ ಎಕ್ಸ್​ಚೇಂಜ್​ ​(ವಿಒಐಪಿ) ಅನ್ನು ಬಳಸಿಕೊಂಡು ಲಡಾಖ್​ನಲ್ಲಿರುವ ಭಾರತೀಯ ರಕ್ಷಣಾ ಪಡೆಯ ಮಾಹಿತಿಯನ್ನು ಕಲೆಹಾಕುವ ಪ್ರಯತ್ನಕ್ಕೆ ಪಾಕ್​ ಬೇಹುಗಾರಿಕೆ ಜಾಲ ಕೈಹಾಕಿತ್ತು ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ಸಾರ್ವಜನಿಕರ ಕರೆ ಸ್ವೀಕರಿಸದಿದ್ದರೆ ಕಠಿಣ ಕ್ರಮ; ಬಿಎಸ್​ವೈ

    ಮುಂಬೈನಲ್ಲಿ ಓರ್ವನನ್ನು ಬಂಧಿಸಲಾಗಿದ್ದು, ಮತ್ತಷ್ಟು ಮಂದಿ ಇದರಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಅಲ್ಲದೆ, ಇನ್ನಿತರ ಸ್ಥಳಗಳ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.

    ಕಾರ್ಯಾಚರಣೆ ಸ್ಥಳದಲ್ಲಿ 191 ಸಿಮ್​ ಕಾರ್ಡ್​ ಸೇರಿದಂತೆ ಕಾರ್ಯನಿರ್ವಹಿಸುವ ಮೂರು ಸಿಮ್​ ಬಾಕ್ಸ್​, ಒಂದು ಸ್ಟ್ಯಾಂಡ್​ಬೈ ಸಿಮ್​ ಬಾಕ್ಸ್​, ಲ್ಯಾಪ್​ಟಾಪ್​, ಆಂಟೇನಾ, ಬ್ಯಾಟರಿಗಳು ಮತ್ತು ಕನೆಕ್ಟರ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಮೇ ಆರಂಭದಿಂದಲೂ ವಿಒಐಪಿ ಎಕ್ಸ್​ಚೇಂಜ್​ ಬಳಸಿಕೊಂಡು ಮಾಹಿತಿ ಕನ್ನ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಲಾಗಿದ್ದು, ಅನೇಕ ಸಂಶಯಾಸ್ಪದ ನಂಬರ್​ನಿಂದ ಕರೆಗಳು ಬಂದಿವೆ. ಹೀಗೆ ಬಂದಂತಹ ಕರೆಗಳು ಲಡಾಖ್​ ಸಂಬಂಧಿತ ಮಾಹಿತಿಗಳನ್ನು ಕೇಳುತ್ತಿದ್ದರು ಎಂದು ಬಹಿರಂಗವಾಗಿದೆ. ಮುಂಬೈನಲ್ಲಿ ಕೆಲವು ಅಕ್ರಮ ವಿಒಐಪಿ ಎಕ್ಸ್​ಚೇಂಜ್​ಗಳಿವೆ ಎಂದು ಎರಡು ತನಿಖಾ ಸಂಸ್ಥೆಗಳು ಸಹ ತಿಳಿಸಿದ್ದು, ಪಾಕಿಸ್ತಾನದಿಂದ ಬರುತ್ತಿದ್ದ ಕರೆಗಳಿಂದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳಲಾಗುತ್ತಿತ್ತು ಎಂಬುದು ಸದ್ಯದ ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ. ​

    ಇದನ್ನೂ ಓದಿ: ಲಡಾಖ್​ ಬಿಕ್ಕಟ್ಟು ಪರಿಹಾರಕ್ಕೆ ಚೀನಾದೊಂದಿಗೆ ಮಾತುಕತೆಯ ಹಾದಿ

    ಚೀನಾದ ಸಿಮ್​ ಬಾಕ್ಸ್​ ಬಳಸಿಕೊಂಡು ವಿಒಐಪಿ ಎಕ್ಸ್​ಚೇಂಜ್​ ಮೂಲಕ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಕಾರ್ಯ ಸಾಧಿಸುತ್ತಿದ್ದರು ಎಂದು ತಿಳಿದುಬಂದಿದೆ. ಸಿಮ್​ ಬಾಕ್ಸ್​ನಲ್ಲಿ ಅಕ್ರಮ ಐಎಂಐ ನಂಬರ್​ ಸಹ ಇದ್ದು, ಅದರ ಮೂಲವನ್ನು ಹುಡುಕುವುದು ಸಹ ತ್ರಾಸದಾಯಕವಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದ್ದು, ಮತ್ತಷ್ಟು ಮಾಹಿತಿಗಾಗಿ ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)

    ಲಡಾಖ್​ ಬಿಕ್ಕಟ್ಟು ಪರಿಹಾರಕ್ಕೆ ಚೀನಾದೊಂದಿಗೆ ಮಾತುಕತೆಯ ಹಾದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts