More

    ಕಾರ್ಯಾಗಾರದ ಪ್ರಯೋಜನ ಪಡೆಯಿರಿ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ, ಕರ್ನಾಟಕ ವಿಶ್ವ ವಿದ್ಯಾಲಯ ಗಣಿತ ವಿಭಾಗ ಹಾಗೂ ಪಾವಟೆ ಇನ್​ಸ್ಟಿಟ್ಯೂಟ್​ ಗಣಿತ ಅಸೋಸಿಯೇಶನ್​ ಸಹಯೋಗದಲ್ಲಿ ವಿಜ್ಞಾನ ಕೇಂದ್ರದಲ್ಲಿ ನೆಟ್​, ಕೆ&ಸೆಟ್​ ಪರೀೆಗಾಗಿ ಶುಕ್ರವಾರ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.
    ವಿಶ್ರಾಂತ ಕುಲಪತಿ ಡಾ. ಎಚ್​.ಬಿ. ವಾಲೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೆಟ್​, ಕೆ&ಸೆಟ್​ ಅಭ್ಯಥಿರ್ಗಳಿಗೆ ಸಹಕಾರಿ ಆಗುವಂತಹ ಕಾರ್ಯಾಗಾರವನ್ನು ಈವರೆಗೂ ಯಾವ ವಿಶ್ವ ವಿದ್ಯಾಲಯದಲ್ಲೂ ಏರ್ಪಡಿಸಿಲ್ಲ. ಕವಿವಿಯು ವಿದ್ಯಾಥಿರ್ಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಆಯೋಜಿಸಿರುವ ಕಾರ್ಯಾಗಾರದ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದರು.
    ಹಿರಿಯ ಪ್ರಾಧ್ಯಾಪಕ ಪ್ರೊ. ಬಿ. ಬಸವನಗೌಡ ಮಾತನಾಡಿ, ಗಣಿತ ವಿಭಾಗದಲ್ಲಿ ಪರಿಣಿತಿ ಹೊಂದಿದ ಅನೇಕ ಪ್ರಾಧ್ಯಾಪಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾಥಿರ್ಗಳು ಇವರ ಜ್ಞಾನದ ಸದುಪಯೋಗ ಪಡೆದು ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದರು.
    ಪ್ರೊ. ಎನ್​.ಎಂ.ಬುಜುರ್ಕೆ ಮಾತನಾಡಿ, ವಿದ್ಯಾಥಿರ್ಗಳು ಪ್ರತಿದಿನ ಒಂದಲ್ಲ ಒಂದು ಹೊಸ ವಿಷಯ ಕಲಿಯಬೇಕು. ಇವತ್ತಿನ ದಿನಗಳಲ್ಲಿ ಸಿಗುವ ಸೌಕರ್ಯ ಬಳಸಿಕೊಂಡು ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದರು.
    ಡಾ. ಎಸ್​.ಜಿ.ಶಿರಾಳಶೆಟ್ಟಿ ಮಾತನಾಡಿದರು. ಡಾ.ವೀರಣ್ಣ ಬೋಳಿಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನೆಟ್​, ಕೆ&ಸೆಟ್​ ಪರೀೆಗೆ ಉಪಯುಕ್ತವಾಗುವ ಮ್ಯಾಥಮ್ಯಾಟಿಕ್ಸ್​ ನೋಟ್ಸ್​ ಾರ್​ ಸಿಎಸ್​ಐಆರ್​ಎನ್​ಇಟಿ, ಕೆಸೆಟ್​ ಪುಸ್ತಕ ಬಿಡುಗಡೆ ಮಾಡಲಾಯಿತು.
    ಪ್ರಾಧ್ಯಾಪಕರು, ವಿದ್ಯಾಥಿರ್ಗಳು, ಇತರರು ಇದ್ದರು. ಪ್ರೊ. ಪಿ.ಜಿ. ಪಾಟೀಲ ಸ್ವಾಗತಿಸಿದರು. ಡಾ. ಆರ್​.ಎಸ್​. ದ್ಯಾವನಾಳ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts