More

    ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಪಾಕ್​ನ ಮಾಜಿ ಅಧ್ಯಕ್ಷ ಫರ್ವೇಜ್​ ಮುಷರಫ್ ನಿಧನ

    ನವದೆಹಲಿ: ಬಹುಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಮಾಜಿ ಸೇನಾ ಮುಖ್ಯಸ್ಥ ಫರ್ವೇಜ್​ ಮುಷರಫ್ (79) ಅವರು ಇಂದು (ಫೆ.5) ಯುನೈಟೆಡ್​ ಅರಬ್​ ಎಮಿರೇಟ್ಸ್​ ದುಬೈನ ಅಮೆರಿಕನ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.​

    ಮುಷರಫ್​ ಅವರ ಮೃತದೇಹವನ್ನು ಪಾಕಿಸ್ತಾನಕ್ಕೆ ಹಿಂತಿರುಗಿಸುವ ಬಗ್ಗೆ ಸದ್ಯ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೂ ಅವರ ಕುಟುಂಬವು ಕಳೆದ ವರ್ಷದಿಂದ ಅವರನ್ನು ಮನೆಗೆ ಕರೆತರಲು ಪ್ರಯತ್ನಿಸುತ್ತಿತ್ತು.

    ಅಮಿಲೋಯ್ಡೋಸಿಸ್ ಎಂಬ ಕಾಯಿಲೆಯಿಂದಾಗಿ ಮುಷರಫ್ ಅವರ ಅಂಗಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದವು. ಈ ರೋಗವು ಸಂಯೋಜಿತ ಅಂಗಾಂಶಗಳು ಮತ್ತು ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ದೇಹದ ಸಾಮಾನ್ಯ ಕಾರ್ಯನಿರ್ವಹಣೆಯನ್ನು ಇದು ಪ್ರತಿಬಂಧಿಸುತ್ತದೆ. ಇದೊಂದು ವಿರಳಾತಿವಿರಳ ಕಾಯಿಲೆ. ದೇಹದಾದ್ಯಂತ ಅಂಗಗಳು ಮತ್ತು ಅಂಗಾಂಶಗಳಲ್ಲಿ ಅಮಿಲಾಯ್ಡ್ ಎಂಬ ಅಸಹಜ ಪ್ರೋಟೀನ್‌ನ ರಚನೆಯಿಂದ ಈ ಕಾಯಿಲೆ ಉಂಟಾಗುತ್ತದೆ.

    2007ರಲ್ಲಿ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯೆಯ ಆರೋಪಗಳನ್ನು ಎದುರಿಸುತ್ತಿದ್ದ ಮುಷರಫ್ 2007ರಲ್ಲಿ ಪಾಕಿಸ್ತಾನದಲ್ಲಿ ಅಸಂವಿಧಾನಿಕವಾಗಿ ತುರ್ತು ಪರಿಸ್ಥಿತಿ ಹೇರಿದ ಆರೋಪ ಸಾಬೀತಾ ಬೆನ್ನಲ್ಲೇ ಗಡಿಪಾರು ಶಿಕ್ಷೆ ಅನುಭವಿಸಿದ್ದರು. ಕಳೆದ ಎಂಟು ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದರು. ತನ್ನ ಉಳಿದ ಜೀವನವನ್ನು ತನ್ನ ತಾಯ್ನಾಡಿನಲ್ಲಿ ಕಳೆಯುವ ಬಯಕೆಯನ್ನು ಮೊದಲೇ ವ್ಯಕ್ತಪಡಿಸಿದ್ದರು ಮತ್ತು ಸಾಧ್ಯವಾದಷ್ಟು ಬೇಗ ಪಾಕಿಸ್ತಾನಕ್ಕೆ ಮರಳಲು ಬಯಸಿದ್ದರು.

    ಆಲ್​ ಪಾಕಿಸ್ತಾನ್​ ಮುಸ್ಲಿಂ ಲೀಗ್​ (ಎಪಿಎಂಎಲ್​) ಎಂಬ ರಾಜಕೀಯ ಪಕ್ಷದ ಸ್ಥಾಪಕರಾಗಿದ್ದ ಮುಷರಫ್​, 1999 ರಿಂದ 2008ರವೆಗ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. (ಏಜೆನ್ಸೀಸ್​)

    ಅಶ್ಲೀಲತೆ, ಎಲ್ಲೆಂದರಲ್ಲಿ ಬಿದ್ದಿರೋ ಕಾಂಡೋಮ್​ಗಳು​… ರಾಯಚೂರಿನ ರಂಗಮಂದಿರವೀಗ ಲವರ್ಸ್​ ಹಾಟ್​ಸ್ಪಾಟ್

    ಯಾರಿಗೆ ಯಾವುದು ಸೂಕ್ತವೋ ಅದೇ ಹೆಸರಿಟ್ಟುಕೊಳ್ಳಲಿ; ಎಚ್​ಡಿಕೆಗೆ ಛಲವಾದಿ ನಾರಾಯಣಸ್ವಾಮಿ ತಿರುಗೇಟು

    ಆದಿಲ್​ಗೆ ಅಕ್ರಮ ಸಂಬಂಧವಿದೆ: ಮದ್ವೆಯಾದ ಕೆಲವೇ ದಿನಗಳಲ್ಲಿ ಪತಿ ವಿರುದ್ಧ ರಾಖಿ ಸಾವಂತ್​ ಗಂಭೀರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts