More

    17-18 ವರ್ಷದ ಪಾಕ್ ವೇಗಿಗಳ ನಿಜ ವಯಸ್ಸು ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ ಮೊಹಮದ್ ಆಸಿಫ್​

    ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಕೆಲ ಯುವ ವೇಗದ ಬೌಲರ್‌ಗಳು ಈಗ ಸ್ಥಾನ ಪಡೆಯುತ್ತಿದ್ದಾರೆ. ಆದರೆ ಅವರ ನಿಜವಾದ ವಯಸ್ಸು ಅವರ ಜನ್ಮದಾಖಲೆ ಪತ್ರದಲ್ಲಿರುವ ವಯಸ್ಸಿಗಿಂತ 9-10 ವರ್ಷ ಹೆಚ್ಚಾಗಿದೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮದ್ ಆಸಿಫ್​ ಆರೋಪಿಸಿದ್ದಾರೆ. ಇದರಿಂದಾಗಿಯೇ ಈ ಯುವ ವೇಗಿಗಳಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸುದೀರ್ಘ ಸ್ಪೆಲ್‌ಗಳನ್ನು ಎಸೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ದೂರಿದ್ದಾರೆ.

    ‘ಪಾಕ್ ತಂಡದಲ್ಲಿರುವ ಯುವ ವೇಗದ ಬೌಲರ್‌ಗಳ ವಯಸ್ಸು ಕಾಗದದ ಮೇಲೆ 17-18 ವರ್ಷ ಎಂದಿದೆ. ಆದರೆ ನಿಜ ಹೇಳಬೇಕೆಂದರೆ ಅವರು 27-28 ವರ್ಷ ವಯಸ್ಸಿನವರಾಗಿದ್ದಾರೆ’ ಎಂದು ಆಸಿಫ್​ ಮಾಜಿ ಸಹ-ಆಟಗಾರ ಕಮ್ರಾನ್ ಅಕ್ಮಲ್ ಅವರ ಯುಟ್ಯೂಬ್ ಚಾನಲ್‌ನೊಂದಿಗೆ ಮಾತನಾಡುತ್ತ ಆರೋಪಿಸಿದ್ದಾರೆ. ಆದರೆ ವಯೋಮಿತಿ ಮೋಸ ಮಾಡಿರುವ ಯಾವುದೇ ಬೌಲರ್‌ನ ಹೆಸರನ್ನು ಅವರು ಉಲ್ಲೇಖಿಸಿಲ್ಲ.

    ಇದನ್ನೂ ಓದಿ: ಕೊನೇಕ್ಷಣದಲ್ಲಿ ಒಲಿದ ಅದೃಷ್ಟ, ತೆಂಡುಲ್ಕರ್ ಪುತ್ರ ಅರ್ಜುನ್ ಮುಂಬೈ ತಂಡಕ್ಕೆ ಸೇರ್ಪಡೆ

    ‘ಹೆಚ್ಚಿನ ವಯಸ್ಸಿನಿಂದಾಗಿ ಅವರ ದೇಹ ನಿರೀಕ್ಷೆಯ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಅವರಿಗೆ 20-25 ಓವರ್‌ಗಳ ಸ್ಪೆಲ್ ಎಸೆಯಲು ಸಾಧ್ಯವಾಗುತ್ತಿಲ್ಲ. 5-6 ಓವರ್‌ಗಳ ಸ್ಪೆಲ್ ಬಳಿಕ ಅವರಿಗೆ ಮೈದಾನದಲ್ಲಿ ಫೀಲ್ಡಿಂಗ್ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಮೊಹಮದ್ ಆಸಿಫ್​ ಹೇಳಿದ್ದಾರೆ. ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡ ಆತಿಥೇಯರ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 101 ರನ್‌ಗಳಿಂದ ಸೋಲು ಕಂಡಿತ್ತು.

    ಪಾಕಿಸ್ತಾನ ಕಂಡ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರೆನಿಸಿದ್ದ ಮೊಹಮದ್ ಆಸಿಫ್​ ಅವರ ವೃತ್ತಿಜೀವನ 2010ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ಅಕಾಲಿಕವಾಗಿ ಕೊನೆಗೊಂಡಿತ್ತು. ಪ್ರಕರಣದಲ್ಲಿ ಅವರಿಗೆ 5 ವರ್ಷಗಳ ನಿಷೇಧ ಶಿಕ್ಷೆಯಾಗಿತ್ತು.

    ಇದನ್ನೂ ಓದಿ: ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ ತಮ್ಮನಿಗೆ ಬಂಗಾಳ ತಂಡದಲ್ಲಿ ಸ್ಥಾನ

    ಪಾಕಿಸ್ತಾನ ತಂಡ ಒಂದು ಕಾಲದಲ್ಲಿ ಇಮ್ರಾನ್ ಖಾನ್, ವಾಸಿಂ ಅಕ್ರಮ್ ಮತ್ತು ವಕಾರ್ ಯೂನಿಸ್ ಅವರ ವೇಗಿಗಳ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿತ್ತು. ಆದರೆ ಈಗ ಅಂಥ ವೇಗದ ಬೌಲರ್‌ಗಳು ತಂಡದಲ್ಲಿಲ್ಲ. ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್ ಕಬಳಿಸಿದ ವೇಗದ ಬೌಲರ್‌ಅನ್ನು ನೋಡಿ 5-6 ವರ್ಷಗಳೇ ಕಳೆದುಹೋಗಿವೆ ಎಂದು 38 ವರ್ಷದ ಆಸಿಫ್​ ಹೇಳಿದ್ದಾರೆ.

    ಸದ್ಯ ಪಾಕ್ ತಂಡದಲ್ಲಿ ಶಹೀನ್ ಷಾ ಮತ್ತು ನಸೀಮ್ ಷಾ ಪ್ರಮುಖ ವೇಗಿಗಳಾಗಿದ್ದು, ಅವರ ವಯಸ್ಸು 20 ಮತ್ತು 17 ವರ್ಷ ಎಂದು ತಿಳಿಸಲಾಗಿದೆ. ಇನ್ನೋರ್ವ ವೇಗಿ ಮೊಹಮದ್ ಅಬ್ಬಾಸ್ ವಯಸ್ಸು 30 ವರ್ಷ ಎಂದು ಹೇಳಲಾಗಿದ್ದರೆ, ಹೀಮ್ ಅಶ್ರ್ 26 ವರ್ಷ ಎಂದು ತಿಳಿಸಲಾಗಿದೆ. ವಯೋಮಿತಿ ಮೋಸ ಪ್ರಕರಣಗಳು ಕಳೆದ ಹಲವು ವರ್ಷಗಳಿಂದ ಪಾಕಿಸ್ತಾನ ಕ್ರಿಕೆಟ್ ಕ್ಷೇತ್ರವನ್ನು ಕಾಡುತ್ತ ಬಂದಿದೆ.

    2020ರಲ್ಲಿ ವಿರಾಟ್ ಕೊಹ್ಲಿಗಿಂತ ಬುಮ್ರಾಗೆ ಜಾಸ್ತಿ ಸಂಬಳ!

    ಬಿಸ್ಕಿಟ್ ಜಾಹೀರಾತಿನಲ್ಲಿ ನಟಿಸಿ ಗಮನಸೆಳೆದ ಕ್ರಿಕೆಟ್ ದಿಗ್ಗಜನ ಪುತ್ರಿ!

    PHOTO| 2020ಕ್ಕೆ ಬೆನ್ನು ತೋರಿಸಿದ ಕ್ರಿಕೆಟರ್ ವೇದಾ, ಗಮನಸೆಳೆದ ಟ್ಯಾಟೂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts